ನವದೆಹಲಿ: ಕೇಂದ್ರ ಸಚಿವೆ ಹಾಗೂ ನಟಿ ಸ್ಮೃತಿ ಇರಾನಿ (Smriti Irani) ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಚಿಕ್ಕ ವಯಸ್ಸಿನಲ್ಲಿ ಅನುಭವಿಸಿದ ಕಷ್ಟ ಹಾಗೂ ತಂದೆ-ತಾಯಿ ಪರಸ್ಪರ ಬೇರ್ಪಟ್ಟ ಬಗ್ಗೆ ಮಾತನಾಡಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿಪರ ಹಾಗೂ ವೈಯಕ್ತಿಕ ಜೀವನದ ಬಗ್ಗೆಯ ಹಲವು ಕಷ್ಟದ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲಿ ತಂದೆ- ತಾಯಿಯ ಪರಸ್ಪರ ಬೇರಾಗಿದ್ದನ್ನು ಕುರಿತು ಮಾತನಾಡಲು ನನಗೆ 40 ವರ್ಷಗಳು ಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.
ಸ್ಮೃತಿ ಇರಾನಿಯವರ ತಂದೆ ಪಂಜಾಬಿ ಖಾತ್ರಿಯಾಗಿದ್ದರೆ, ತಾಯಿ ಬಂಗಾಳಿ-ಬ್ರಾಹ್ಮಣರಾಗಿದ್ದರು. ಇಬ್ಬರೂ ತಮ್ಮ ಪೋಷಕರ ವಿರೋಧದ ನಡುವೆ ಮದುವೆ ಆಗಿದ್ದರು. ಅವರು ಮದುವೆಯಾದಾಗ ಅವರ ಬಳಿ ಕೇವಲ 150 ರೂ. ಇತ್ತು. ಅದಕ್ಕಾಗಿ ಅವರು ದನದ ಕೊಟ್ಟಿಗೆಯಲ್ಲಿನ ಅಟ್ಟದ ಮೇಲೆ ವಾಸಿಸುತ್ತಿದ್ದರು. ಆ ವೇಳೆ ನಾನು ಲೇಡಿ ಹಾರ್ಡಿಂಜ್ ಆಸ್ಪತ್ರೆಯಲ್ಲಿ ಜನಿಸಿದೆ.
ನಂತರ ಅವರು ಆರ್ಥಿಕ ಸಮಸ್ಯೆಯಿಂದಾಗಿ ಗುರುಗ್ರಾಮಕ್ಕೆ ಸ್ಥಳಾಂತರಗೊಂಡರು. ಆದರೆ ಅಲ್ಲಿ ಕೆಲವೇ ಕೆಲವು ದಂಪತಿ ಆರ್ಥಿಕ ಮತ್ತು ಸಾಮಾಜಿಕ ಘರ್ಷಣೆಯ ನಿರ್ಬಂಧಗಳನ್ನು ಬದುಕಬಲ್ಲರು ಎಂದು ನೆನಪಿಸಿಕೊಂಡರು. ನನ್ನ ತಂದೆ-ತಾಯಿ ಬೇರ್ಪಟ್ಟಿದ್ದಾರೆ ಎಂದು ಹೇಳಲು ನನಗೆ 40 ವರ್ಷಗಳು ಬೇಕಾಯಿತು. ಆ ದಿನಗಳಲ್ಲಿ ನಮ್ಮನ್ನು ಕೀಳಾಗಿ ನೋಡಲಾಗುತ್ತಿತ್ತು. ಆದರೆ ಈಗ ಅವರು ಜೀವನವನ್ನು ಲೆಕ್ಕಾಚಾರ ಮಾಡುವುದು ಎಷ್ಟು ಕಠಿಣವಾಗಿದೆ ಎಂದು ನನಗೆ ತಿಳಿದಿದೆ ಎಂದರು.