ಲಕ್ನೋ: ಮಹಾಭಾರತದಲ್ಲಿ ಶ್ರೀ ಕೃಷ್ಣನು ಪಾಂಡವರಿಗಾಗಿ ಕೇವಲ 5 ಗ್ರಾಮಗಳನ್ನು ಮಾತ್ರ ಕೇಳಿದ್ದ. ಆದರಿಂದು ನಾವು ಪವಿತ್ರ ಮೂರು ಸ್ಥಳಗಳನ್ನು ಮಾತ್ರ ಕೇಳುತ್ತಿದ್ದೇವೆ ಎಂದು ಹೇಳುವ ಮೂಲಕ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಅಯೋಧ್ಯೆ ಬಳಿಕ ಕಾಶಿ ಮತ್ತು ಮಥುರಾದಲ್ಲಿರುವ ಮಸೀದಿಗಳನ್ನು ಪಡೆದುಕೊಳ್ಳುವ ಸುಳಿವು ನೀಡಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ ಮಾತನಾಡುವಾಗ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ಸಮಾರಂಭದ ಕುರಿತು ಮಾತನಾಡಿದರು. ಇದೇ ವೇಳೆ ಕಾಶಿ ಮತ್ತು ಮಥುರಾವಿವಾದಿತ ಸ್ಥಳಗಳನ್ನೂ ಉಲ್ಲೇಖಿಸಿದರು. ಈ ಹಿಂದಿನ ಸರ್ಕಾರದ ಆಳ್ವಿಕೆಯಲ್ಲಿ ಅಯೋಧ್ಯೆಯುಕರ್ಫ್ಯೂ ಮತ್ತು ನಿಷೇಧಗಳನ್ನು ಎದುರಿಸಿತ್ತು. ಶತಮಾನಗಳವರೆಗೆ, ಅಯೋಧ್ಯೆಯು ನೀಚ ಉದ್ದೇಶಗಳಿಗೆ ಬಲಿಯಾಯಿತು,
ಅನ್ಯಾಯ ಎದುರಿಸಿತ್ತು. ನಾನು ಆ ಅನ್ಯಾಯದ ಬಗ್ಗೆ ಮಾತನಾಡುವಾಗ, 5,000 ವರ್ಷಗಳ ಹಿಂದೆ ನಡೆದ ಅನ್ಯಾಯದ ಬಗ್ಗೆ ಮಾತನಾಡಬೇಕಾಗುತ್ತದೆ. ಆ ಸಮಯದಲ್ಲಿ ಅಯೋಧ್ಯೆ, ಕಾಶಿ ಮತ್ತು ಮಥುರಾದಲ್ಲಿ ಅನ್ಯಾಯ ಸಂಭವಿಸಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಅವರು ʻಮಹಾಭಾರತʼವನ್ನು ಉಲ್ಲೇಖಿಸಿ ಮಾತನಾಡಿದರು.