ಬೆಂಗಳೂರು: ಕಾಂಪಿಟೇಟಿವ್ ದುನಿಯಾದಲ್ಲಿ ರಿಚ್ ಲೈಫ್ ಲೀಡ್ ಮಾಡ್ಬೇಕು ಅಂತ ಅದೆಷ್ಟೋ ಎಂಪ್ಲಾಯಿಸ್ ಹಗಲು ರಾತ್ರಿ ಎನ್ನದೇ ದುಡಿತಿದ್ದಾರೆ. ಅದೆಷ್ಟೋ ಜನಕ್ಕೆ ಮನೆ ಯಾವ್ದು ಆಫೀಸ್ ಯಾವ್ದು ಅನ್ನೋದು ಗೊತ್ತಾಗದ ಸ್ಥಿತಿಯಲ್ಲಿ ಒದ್ದಾಡ್ತಿದ್ದಾರೆ. ಹೀಗರಬೇಕಾದ್ರೆ ಬೆಂಗಳೂರಿನ ಕೆಲವು ಐಟಿ ಕಂಪನಿಗಳು 9 ಗಂಟೆ ಇದ್ದ ಕೆಲಸದ ಅವಧಿಯನ್ನ 14 ಗಂಟೆಗೆ ವಿಸ್ತರಣೆ ಮಾಡಲು ತಯಾರಿ ನಡೆಸ್ತಿದ್ದು.., ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತಿದೆ.
ಇದು ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿದ್ದ ಮಾತು.. ಯುವಜನತೆ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡ್ಬೇಕು, ಭಾರತ ನನ್ನ ದೇಶ, ಇದಕ್ಕಾಗಿ ನಾನು ವಾರಕ್ಕೆ 70 ಗಂಟೆಗಳ ಕಾಲ ದುಡಿಯುತ್ತೇನೆ ಎಂಬ ಮನಃಸ್ಥಿತಿ ಬೆಳೆಸಿಕೊಳ್ಳಬೇಕು ಅಂತ ಈ ಹಿಂದೆ ಎನ್.ಆರ್.ನಾರಾಯಣ ಮೂರ್ತಿ ಸಲಹೆ ನೀಡಿದ್ರು.. ಇದು ಹಲವರ ಕೆಂಗಣ್ಣಿಗೂ ಗುರಿಯಾಗಿತ್ತು. ಆದ್ರೀಗ ನಾರಾಯಣ ಮೂರ್ತಿ ಸಲಹೆ ನಿಜವಾಗೋ ಸುಳಿವು ಸಿಕ್ಕಿದೆ. ಬೆಂಗಳೂರು ಐಟಿ ಬಿಟಿ ನೌಕರರಿಗೆ ಕಾರ್ಮಿಕ ಇಲಾಖೆ ಬಿಗ್ ಶಾಕ್ ಕೊಟ್ಟಿದೆ.
ಸಿಲಿಕಾನ್ ಸಿಟಿಯ ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ 20 ಲಕ್ಷ ಉದ್ಯೋಗಿಗಳಿಗೆ ಬಿಗ್ ಶಾಕ್ ಎದುರಾಗಿದ್ದು, ಕೆಲಸದ ಅವಧಿ 9 ಗಂಟೆ ಬದಲಿಗೆ 14 ಗಂಟೆಗೆ ವಿಸ್ತರಣೆಗೆ ಕಾನೂನು ತರಲು ಸರ್ಕಾರದ ಮೇಲೆ ಐಟಿ-ಬಿಟಿ ಕಂಪನಿಗಳು ಒತ್ತಡ ಹಾಕಿವೆ. ಆದ್ರೆ ಈ ನಯಾ ರೂಲ್ಸ್ಗೆ ಐಟಿ ಉದ್ಯೋಗಿಗಳು ನಿಗಿನಿಗಿ ಅಂತಿದ್ದಾರೆ…
ಇನ್ನೂ…ಐಟಿ ಕಂಪನಿಗಳ ಈ ಪ್ರಸ್ತಾವನೆಗೆ ಆರಂಭದಲ್ಲಿಯೇ ಸಾಕಷ್ಟು ವಿರೋಧ ಕೇಳಿ ಬಂದಿದೆ. ಈಗಾಗಲೇ ಇರೋ ಸಮಯಕ್ಕಿಂತ ಅಧಿಕ, ಅಂದ್ರೆ ಓವರ್ ಟೈಮ್ ಕೆಲಸ ಮಾಡೋ ಪರಿಸ್ಥಿತಿ ಇದ್ದು ನೌಕರರು ಮಷೀನ್ ನಂತೆ ಕೆಲಸ ಮಾಡ್ತಿದ್ದಾರೆ.ಒಂದೆಡೆ ವಿಕೇಂಡ್ ಎಂಜಾಯ್ ಮಾಡುತ್ತಾ, ಮ್ಯಾನೇಜರ್ಗೆ, ಟೀಮ್ ಲೀಡರ್ಗೆ ಬಯುತ್ತಾ ಅವರು ಕೊಟ್ಟ ಡೆಡ್ ಲೈನ್ನಲ್ಲಿ ಕೆಲಸ ಮುಗಿಸ ಬೇಕು ಅಂತಾ ತಲೆಕಡಿಸಿಕೊಂಡಿದ್ದವರಿಗೆ ಡ್ಯೂಟಿ ಟೈಮ್ ಎಕ್ಸಟೆಂಡ್ ಆಗುತ್ತೆ ಅನ್ನೋದು ಇನ್ನಷ್ಟು ತಲೆ ನೋವು ತಂದಿದೆ. ಒಂದ್ವೇಳೆ ಸರ್ಕಾರ ಈ ಪ್ರಸ್ತಾನೆಗೆ ಗ್ರೀನ್ ಸಿಗ್ನಲ್ ಕೊಟ್ರೆ ಉದ್ಯೋಗಿಗಳ ಆರೋಗ್ಯದ ಸ್ಥಿತಿ ಹದಗೆಡೋ ಸಾಧ್ಯತೆ ಇದೆ…
ಇನ್ನು 14 ಅವರ್ ಟೈಮ್ ಎಕ್ಸ್ಟೆಂಡ್ ಬಗ್ಗೆ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಸಿದ್ದು ಕಾರ್ಮಿಕ ಇಲಾಖೆಯಿಂದ ಸಮಯ ವಿಸ್ತರಣೆ ಮಾಡಬೇಕೆಂಬ ಕೆಲವೊಂದಿಷ್ಟು ಮನವಿಗಳು ಬಂದಿದೆ ಆದರೆ ಇದಕ್ಕೆ ಕೆಲ ಟೆಕ್ಕಿಗಳು ವಿರೋಧವನ್ನು ಹಾಗೆ ಕೆಲವರು ಪರವಾಗಿದ್ದಾರೆ. ಹೀಗಾಗಿ ಇದರ ಬಗ್ಗೆ ಸೂಕ್ತವಾಗಿ ಚರ್ಚಿಸಿ ಮುಂದಿನ ತೀರ್ಮಾನಗಳನ್ನು ಕೈಗೊಳ್ಳಲು ಮುಂದಾಗಿದೆ…
ಒಟ್ನಲ್ಲಿ ಮ್ಯಾನೇಜ್ರ್ಗೆ ಬಯ್ಯುತ್ತಾ ನೈನ್ ಹವರ್ ಕೆಲಸ ಮಾಡ್ತಾ ಇದ್ದಂತಹ ಟೆಕ್ಕಿಗಳು ಕಾರ್ಮಿಕ ಇಲಾಖೆಯ ಒಂದೇ ಒಂದು ಚಿಂತನೆಯಿಂದ ತಮ್ಮ ನೆಮ್ಮದಿಯನ್ನು ಹಾಳು ಮಾಡಿಕೊಂಡು. ಒಂದ್ವೇಳೆ ಸರ್ಕಾರ ಎನಾದ್ರೂ ಈ ಚಿಂತನೆಗೆ ಗ್ರಿನ್ ಸಿಗ್ನಲ್ ನೀಡಿದ್ರೆ 9 ಗಂಟೆ ಡ್ಯೂಟಿಗೆ ಅಡ್ಜಸ್ಟ್ ಆಗಿರೋ ನೌಕರರು 14 ಗಂಟೆ ಕೆಲಸ ಹೇಗ್ ಮಾಡ್ತಾರೆ ಅನ್ನೋದೆ ಬಿಗ್ ಚಾಲೆಂಜ್.