ಬೆಂಗಳೂರು: ಚುನಾವಣೆಗೆ ಮುಂಚಿತವಾಗಿ ಬೆಂಗಳೂರು ನಗರದಲ್ಲಿ ಚುನಾವಣಾ ಅಧಿಕಾರಿಗಳು ಭರ್ಜರಿ ಬೇಟೆ ನಡೆಸಿದ್ದು, ನಗರದಲ್ಲಿ ಈವರೆಗೆ 53.83 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು, ನಗದು ಹಣ, ಉಡುಗೊರೆಗಳು ಜಪ್ತಿಯಾಗಿವೆ. ಚುನಾವಣೆ ಅಕ್ರಮಗಳ ಬಗ್ಗೆ ಬರೋಬ್ಬರಿ 1187 ಎಫ್ಐಆರ್ ದಾಖಲಾಗಿವೆ.
ನಗದು ಹಣ 8.26 ಕೋಟಿ, ಮದ್ಯ 22.16 ಕೋಟಿ ಮೌಲ್ಯ, ಡ್ರಗ್ಸ್ 9.51 ಕೋಟಿ ಮೌಲ್ಯ, ಗೃಹೋಪಯೋಗಿ ವಸ್ತುಗಳು 4.73 ಕೋಟಿ, ಉಡುಗೊರೆ 4.87 ಕೋಟಿ, ವಾಹನಗಳು 4.27 ಕೋಟಿ ಮೌಲ್ಯದ್ದಾಗಿವೆ. ಈ ಬಗ್ಗೆ 1187 ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಚುನಾವಣಾ ಅಕ್ರಮಗಳ ಬಗ್ಗೆ ನಿಗಾ ಇಟ್ಟಿರುವ ಎಂಸಿಸಿ ಸ್ವ್ಕಾಡ್ ಮತ್ತು ಪೊಲೀಸರು ಮಾರ್ಚ್ 29ರಿಂದ ಈವರೆಗೆ ದಾಖಲೆ ಪ್ರಮಾಣದ ಹಣ, ಮದ್ಯ, ಉಡುಗೊರೆ, ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಚುನಾವಣೆ ಸಮೀಪಿಸುತ್ತಿರುವಂತೆ ಇನ್ನಷ್ಟು ಹೆಚ್ಚಿನ ನಿಗಾ ಇಡಲು ಸೂಚಿಸಲಾಗಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಾದ ಮಾ.29ರಿಂದ ಈವರೆಗೆ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿರುವ ನಗದು ಸೇರಿ ವಿವಿಧ ವಸ್ತುಗಳ ಮೌಲ್ಯ 100 ಕೋಟಿ ರೂಪಾಯಿ ಗಡಿ ದಾಡಿದೆ.