ಬೆಂಗಳೂರು: ತಲಘಟ್ಟಪುರದಲ್ಲಿ ಜೂ.28ರಂದು ನಡೆದಿದ್ದ ಅರುಣ್ ಕುಮಾರ್ ಎನ್ನುವ ವ್ಯಕ್ತಿ ಕೊಲೆ ಪ್ರಕರಣವನ್ನು ಪೊಲೀಸರು 40 ಗಂಟೆಗಳಲ್ಲಿ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರುಣ್ ಕುಮಾರ್ನನ್ನು ಕೊಲೆ ಮಾಡಿದ್ದು ಬೇರೆ ಯಾರು ಅಲ್ಲ ತಾಳಿ ಕಟ್ಟಿದ ಹೆಂಡತಿನೇ.
ಪತ್ನಿ ರಂಜಿತಾ ಎನ್ನುವಾಕೆ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಪತಿ ಅರುಣ್ ಕುಮಾರ್ನನ್ನು ಕೊಲೆ ಮಾಡಿದ್ದಾಳೆ. ಈ ಸಂಬಂಧ ಇದೀಗ ತಲಘಟ್ಟಪುರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಪತ್ನಿ ರಂಜಿತಾ, ಪ್ರಿಯಕರ ಗಣೇಶ್, ಶರತ್ ಶಿವಾನಂದ, ದೀಪು ಬಂಧಿತ ಆರೋಪಿಗಳು.
ಆರೋಪಿ ಗಣೇಶ್, ರಂಜಿತಾ ನಡುವೆ ಅಕ್ರಮ ಸಂಬಂಧ ಇತ್ತು. ಆದ್ರೆ, ತಮ್ಮಿಬ್ಬರ ಲವ್ವಿಡವ್ವಿಗೆ ಪತಿ ಅರುಣ್ ಕುಮಾರ್ ಅಡ್ಡಿಯಾಗಿದ್ದ. ಈ ಹಿನ್ನೆಲೆಯಲ್ಲಿ ರಂಜಿತಾ ಜೂ.28ರಂದು ಪ್ರಿಯಕರ ಜತೆ ಸೇರಿ ಪತಿ ಅರುಣ್ನನ್ನು ಕೊಲೆ ಮಾಡಿಸಿದ್ದಳು ಎಂದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ. ಜೂ.28ರಂದು ಅರುಣ್ ಕುಮಾರ್ ಕೊಲೆಯಾಗಿತ್ತು. ಈ ಬಗ್ಗೆ ಬೆಂಗಳೂರಿನ ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಬೆನ್ನತ್ತಿದ್ದ ಪೊಲೀಸರಿಗೆ ಕೊಲೆಯಾದ ವ್ಯಕ್ತಿಯ ಪತ್ನಿ ಮೇಲೆ ಅನುಮಾನ ಬಂದಿದ್ದು, ಕೂಡಲೇ ಆಕೆಯನ್ನು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಟಾಬಯಲಾಗಿದೆ.