ಖ್ಯಾತ ಕೈಗಾರಿಕೋದ್ಯಮಿ, ಅಜಾತಶತ್ರು ರತನ್ ಟಾಟಾ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರತನ್ ಟಾಟಾ 86ನೇ ವಯಸ್ಸಿನಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಟಾಟಾ ನಿಧನಕ್ಕೆ ಅವರ ಮಾಜಿ ಪ್ರೇಯಸಿ ಸಿಮಿ ಗರೆವಾಲ್ ಭಾವುಕ ಪೋಸ್ಟ್ ಮಾಡಿದ್ದಾರೆ.
ರತನ್ ಟಾಟಾ ಅವರ ಹಠಾತ್ ನಿಧನದ ಪ್ರತಿಯೊಬ್ಬರು ಕಂಬನಿ ಮಿಡಿದಿದ್ದಾರೆ.ರತನ್ ಅವರಿಂದ ಇಂದು ಲಕ್ಷಾಂತರ ಕುಟುಂಬದಲ್ಲಿ ನೆಮ್ಮದಿಯಾಗಿ ಜೀವನ ನಡೆಸುತ್ತಿವೆ. ಜನ ಸಾಮಾನ್ಯರಿಂದ ಹಿಡಿದು ಅಗರ್ಭ ಶ್ರೀಮಂತರು ಕೂಡ ರತನ್ ಟಾಟಾರನ್ನು ಮೆಚ್ಚಿಕೊಂಡಿದ್ದಾರೆ. ಟಾಟಾ ನಿಧನಕ್ಕೆ ಪ್ರತಿಯೊಬ್ಬರು ಕಂಬನಿ ಮಿಡಿಯುತ್ತಿದ್ದಾರೆ.
ರತನ್ ಟಾಟಾ ಅವರ ನಿಧನದಿಂದ ಬಾಲಿವುಡ್ ಹಿರಿಯ ನಟಿ ಸಿಮಿ ಗರೆವಾಲ್ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಸಿಮಿ ಅವರು ರತನ್ ಟಾಟಾ ಅವರ ನಿಧನದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಬರೆಯುವ ಮೂಲಕ ಭಾವಪೂರ್ಣ ವಿದಾಯ ಹೇಳಿದ್ದಾರೆ.
ರತನ್ ಜೊತೆಗಿನ ಫೋಟೊವೊಂದನ್ನು ಹಂಚಿಕೊಂಡಿರುವ ಸಿಮಿ, ನೀವು ಹೋಗಿದ್ದೀರೆಂದು ಎಲ್ಲರೂ ಹೇಳುತ್ತಿದ್ದಾರೆ, ನೀವು ನಮ್ಮ ಜೊತೆ ಇಲ್ಲ ಎನ್ನುವ ಸತ್ಯವನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟ, ಹೋಗಿಬನ್ನಿ ನನ್ನ ಸ್ನೇಹಿತ ಎಂದು ಬರೆದುಕೊಂಡಿದ್ದಾರೆ. ಪ್ರಸಿದ್ಧ ಕೈಗಾರಿಕೋದ್ಯಮಿ ರತನ್ ಟಾಟಾ ಅವರೊಂದಿಗಿನ ಸಂಬಂಧದ ಬಗ್ಗೆ 2011 ರಲ್ಲಿ ನೀಡಿದ ಸಂದರ್ಶನದಲ್ಲಿ ಖ್ಯಾತ ಹಿಂದಿ ಸಿನಿಮಾ ನಟಿ ಸಿಮಿ ಸ್ವತಃ ಬಹಿರಂಗಪಡಿಸಿದ್ದರು.
ರತನ್ ಪರಿಪೂರ್ಣ ವ್ಯಕ್ತಿ, ಹಾಸ್ಯ ಪ್ರಜ್ಞೆ ಕೂಡ ಚೆನ್ನಾಗಿತ್ತು, ಸಭ್ಯರು, ಎಂದೂ ಶ್ರೀಮಂತಿಕೆ ತೋರ್ಪಡಿಸಿರಲಿಲ್ಲ ಎಂದು ಸಿಮಿ ಹೇಳಿದ್ದರು. ಸಿಮಿ ಹಾಗೂ ರತನ್ ಸಾಕಷ್ಟು ಆತ್ಮೀಯವಾಗಿದ್ದರೂ ಅವರ ಪ್ರೀತಿ ಹೆಚ್ಚು ದಿನ ಉಳಿಯಲಿಲ್ಲ, ಸಿಮಿ ಬೇರೊಬ್ಬರನ್ನು ಮದುವೆಯಾದರು, ಸಾಕಷ್ಟು ವರ್ಷಗಳ ಕಾಲ ಸಿಮಿ ಹಾಗೂ ರತನ್ ಒಳ್ಳೆಯ ಸ್ನೇಹಿತರಾಗಿದ್ದರು.