ಚುನಾವಣಾ ಪ್ರಚಾರದ ವೇಳೆ ಅಮೆರಿಕದ ಮಾಜಿ ಅಧ್ಯಕ್ಷ, ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಗಾಯಗೊಂಡಿರುವ ಟ್ರಂಪ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಪೆನ್ಸಿಲ್ವೇನಿಯಾದ ಬಟ್ಲರ್ನಲ್ಲಿ ನಡೆದ ದಾಳಿಯಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಿಂದ ಅವರ ಬಲಕಿವಿಗೆ ಗಾಯವಾಗಿದ್ದು, ಟ್ರಂಪ್ ಬೆಂಬಲಿಗರೊಬ್ಬರು ಮೃತಪಟ್ಟಿದ್ದಾರೆ.
ಹತ್ಯೆ ಯತ್ನದ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್, ‘ದೇವರ ದಯೆಯಿಂದ ಬದುಕುಳಿದಿದ್ದು, ಅಮೆರಿಕನ್ನರು ಒಂದಾಗುವಂತೆ ಕರೆ ನೀಡಿದ್ದಾರೆ. ಊಹಿಸಲಾಗದ್ದನ್ನು ನಡೆಯದಂತೆ ತಡೆಯುವವನು ದೇವರು ಮಾತ್ರ. ಕೆಟ್ಟದು ಗೆಲ್ಲದಂತೆ ಅಮೆರಿಕನ್ನರು ಒಗ್ಗಟ್ಟಿನಿಂದ ನಿಲ್ಲುವಂತೆ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದ್ದಾರೆ.
“ಈ ಕ್ಷಣದಲ್ಲಿ ನಾವು ಒಗ್ಗಟ್ಟಾಗಿ ನಿಲ್ಲುವುದು ಮತ್ತು ಅಮೆರಿಕನ್ನರಾಗಿ ನಮ್ಮ ನಿಜವಾದ ಪಾತ್ರವನ್ನು ತೋರಿಸುವುದು, ದೃಢವಾಗಿ ಉಳಿಯುವುದು ಮತ್ತು ಕೆಟ್ಟದು ಗೆಲ್ಲಲು ಬಿಡದಿರುವುದು ಪ್ರಮುಖವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೇ, ವಿಸ್ಕಾನ್ಸಿನ್ನ ಮಿಲ್ವಾಕೀಯಲ್ಲಿ ಇಂದು ನಡೆಯಲಿರುವ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸುವುದಾಗಿ ಅವರು ಖಚಿತಪಡಿಸಿದ್ದಾರೆ.
ಇನ್ನೂ ನನ್ನ ಬಲಕಿವಿಯ ಮೇಲ್ಭಾಗಕ್ಕೆ ಗುಂಡು ಹಾರಿಸಲಾಗಿದೆ. ಒಂದು ರೀತಿಯ ಶಬ್ದ ಕೇಳಿ ಏನೋ ನಡೆಯುತ್ತದೆ ಎಂದು ತಕ್ಷಣವೇ ಅರಿಯಿತು. ನಂತರ ಗುಂಡು ಬಲಕಿವಿಯ ಚರ್ಮ ಕತ್ತರಿಸಿರುವುದು ತಿಳಿಯಿತು ಎಂದು ಅವರು ದಾಳಿ ಅನುಭವ ಕುರಿತು ಪ್ರತಿಕ್ರಿಯಿಸಿದ್ದಾರೆ.
ಈ ಮಧ್ಯೆ ಟ್ರಂಪ್ ತಂಡವು ಇತ್ತೀಚೆಗೆ ಕೋರಿದ್ದ ಹೆಚ್ಚುವರಿ ಭದ್ರತೆ ಮನವಿಯನ್ನು ನಿರಾಕರಿಸಲಾಗಿದೆ ಎಂಬ ವರದಿಗಳನ್ನು ಯುಎಸ್ ಸೀಕ್ರೆಟ್ ಸರ್ವೀಸ್ ನಿರಾಕರಿಸಿದೆ. ಇದು ಸಂಪೂರ್ಣವಾಗಿ ಸುಳ್ಳು. ವಾಸ್ತವವಾಗಿ, ಟ್ರಂಪ್ ಪ್ರಚಾರಕ್ಕಾಗಿ ನಾವು ಹೆಚ್ಚಿನ ಭದ್ರತೆ, ತಂತ್ರಜ್ಞಾನ ಹೊಂದಿದ್ದಾಗಿ ಸೀಕ್ರೆಟ್ ಸರ್ವೀಸ್ ವಕ್ತಾರ ಆಂಥೋನಿ ಗುಗ್ಲಿಯೆಲ್ಮಿ ಸಾಮಾಜಿಕ ಮಾಧ್ಯಮದ ಮೂಲಕ ಸ್ಪಷ್ಟಪಡಿಸಿದ್ದಾರೆ.