ಕನ್ನಡ ಕಿರುತೆರೆಯಲ್ಲಿ ಮಿಂಚಿ ಸದ್ಯ ತೆಲುಗು ಪ್ರೇಕ್ಷಕರ ಮನ ಗೆದ್ದಿರುವ ನಟಿ ಜ್ಯೋತಿ ರೈ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ. ತಮ್ಮ ಹಾಟ್ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಾಗ್ತಿರುವ ನಟಿ ಇದೀಗ ತಮ್ಮ ಎರಡನೆ ಮದುವೆಯ ಕುರಿತು ಮೌನ ಮುರಿದಿದ್ದಾರೆ.
ತೆಲುಗು ಧಾರಾವಾಹಿಗಳ ಜೊತೆಗೆ ವೆಬ್ ಸೀರಿಸ್ ಹಾಗೂ ಸಿನಿಮಾಗಳಲ್ಲಿಯೂ ಜ್ಯೋತಿ ರೈ ತೊಡಗಿಕೊಂಡಿದ್ದಾರೆ. ಸದ್ಯ ‘ಪ್ರೆಟಿ ಗರ್ಲ್’ ಎನ್ನುವ ವೆಬ್ ಸೀರಿಸ್ನಲ್ಲಿ ಬಣ್ಣ ಹಚ್ಚಿದ್ದು ಸಾಮಾಜಿಕ ಜಾಲಾ ತಾಣದಲ್ಲಿ ಸದಾ ಸಖತ್ ಆಕ್ಟೀವ್ ಆಗಿರುತ್ತಾರೆ.
ನಿರ್ದೇಶಕ ಸುಕು ಪೂರ್ವಜ್ ಜೊತೆ ಕೆಲ ದಿನಗಳಿಂದ ಜ್ಯೋತಿ ರೈ ರಿಲೇಷನ್ಶಿಪ್ನಲ್ಲಿ ಇದ್ದರು.
ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಆತನ ಹೆಸರನ್ನು ತಮ್ಮ ಹೆಸರಿನ ಜೊತೆ ಸೇರಿಸಿಕೊಂಡಿದ್ದರು. ಸುಕು ಪೂರ್ವಜ್ ಜೊತೆ ಆತ್ಮೀಯವಾಗಿರುವ ಫೋಟೊ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಮದುವೆ ಬಗ್ಗೆ ಮಾಹಿತಿ ನೀಡಿರಲಿಲ್ಲ. ಕೆಲ ದಿನಗಳ ಹಿಂದೆ ಎಂಗೇಜ್ಮೆಂಟ್ ಆಗಿದೆ ಎನ್ನುವ ಅರ್ಥದಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಇದೀಗ ಅಧಿಕೃತಪಡಿಸಿದ್ದಾರೆ.
2ನೇ ಪತಿ ಸುಕು ಪೂರ್ವಜ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಜ್ಯೋತಿ ರೈ ಇನ್ಸ್ಟಾ ಸ್ಟೋರಿ ಪೋಸ್ಟ್ ಮಾಡಿದ್ದಾರೆ. “ನಾವಿಬ್ಬರು ಭೇಟಿಯಾಗಿ ಒಂದು ವರ್ಷವಾಗಿದೆ.. ನನ್ನ ಇಡೀ ಜೀವನವೇ ಬದಲಾಗಿದೆ.. ನಾನು ಎಷ್ಟು ಸಂತೋಷವಾಗಿದ್ದೇನೆ ಎಂದು ಪದಗಳಲ್ಲಿ ಹೇಳಲಾರೆ.. ನಿನ್ನ ಪ್ರೀತಿ, ಅಪ್ಪುಗೆ, ಮುತ್ತು, ಬೆಂಬಲ, ಪ್ರೋತ್ಸಾಹ, ನಿನ್ನ ಪಾಸಿಟಿವ್ ಥಾಟ್ಸ್ ಹೀಗೆ ಎಲ್ಲದಕ್ಕೂ ಧನ್ಯವಾದಗಳು.. ನಿನ್ನ ತಾಳ್ಮೆ.. ತೋರಿದ ಎಲ್ಲಾ ಪ್ರೀತಿ, ಕಾಳಜಿ, ನಿಷ್ಠೆಗೆ ಧನ್ಯವಾದಗಳು”
“ನಿನ್ನಿಂದಾಗಿಯೇ ನನ್ನ ಜೀವನ ಪೂರ್ಣವಾಗಿದೆ.. ನಿನ್ನನ್ನು ನನ್ನ ಪತಿಯಾಗಿ ಪಡೆದಿದ್ದು ನನ್ನ ಪುಣ್ಯ.. ಜನ್ಮದಿನದ ಶುಭಾಶಯಗಳು ಡಾರ್ಲಿಂಗ್.. ಲವ್ ಅನ್ಕಂಡೀಷನಲಿ” ಎಂದು ಜ್ಯೋತಿ ತೈ ಬರೆದುಕೊಂಡಿದ್ದು ಪತಿಯ ಜೊತೆಗಿನ ಫೋಟೊ ಹಂಚಿಕೊಂಡಿದ್ದಾರೆ.