ಬೀಜಿಂಗ್: ಎರಡು ವರ್ಷಗಳಿಂದ ಚೀನಾದಿಂದ ಕಣ್ಮರೆಯಾಗಿದ್ದ ಆಲಿಬಾಬಾ ಸಂಸ್ಥಾಪಕ ಜಾಕ್ ಮಾ ಇದೀಗ ಮತ್ತೆ ಚೀನಾಗೆ ಮರಳಿದ್ದಾರೆ ಎಂದು ಸೌತ್ ಚೀನಾ ಮಾನಿಂಗ್ ಪೋಸ್ಟ್ ವರದಿ ಮಾಡಿದೆ.
ಚೀನಾದ ಪ್ರಸಿದ್ಧ ಉದ್ಯಮಿಗಳಲ್ಲಿ ಒಬ್ಬರಾದ ಜಾಕ್ ಮಾ ಅವರು 2021 ರಲ್ಲಿ ಚೀನಾದಿಂದ ಏಕಾಏಕಿ ನಾಪತ್ತೆಯಾಗಿದ್ದರು. ನಂತರದ ದಿನಗಳಲ್ಲಿ ಜಾಕ್ ಮಾ ಆಸ್ಟ್ರೇಲಿಯಾ, ಜಪಾನ್ ಮತ್ತು ಥೈಲಾಂಡ್ ದೇಶಗಳಲ್ಲಿ ಕಾಣಿಸಿಕೊಂಡಿದ್ದ ಬಗ್ಗೆ ವರದಿಯಾಗಿತ್ತು.
ಇದೀಗ ಜಾಕ್ ಮಾ ಹಾಂಗ್ಝೌನಲ್ಲಿ ತಾವು ನಿರ್ಮಿಸಿದ ಹಣಕಾಸು ತಂತ್ರಜ್ಙಾನ ಶಾಲೆಗೆ ಮರಳಿದ್ದಾರೆ ಎಂದು ಯುಂಗು ಎಜುಕೇಷನ್ ಶಾಲೆಯು ತಮ್ಮ ವಿಚಾಟ್ ಖಾತೆಯಲ್ಲಿ ಹೇಳಿಕೊಂಡಿದೆ. ಅಲ್ಲದೇ ಜಾಕ್ ಮಾ ಜೊತೆಗಿನ ಫೋಟೋ ಮತ್ತು ವಿಡಿಯೋಗಳನ್ನು ಕೂಡಾ ಹಂಚಿಕೊಂಡಿದೆ.ಈ ವರದಿ ಪ್ರಕಟವಾದ ನಂತರ ಹಾಂಗ್ಕಾಂಗ್ನಲ್ಲಿ ಆಲಿಬಾಬಾ ಷೇರುಗಳು ಶೆ.4ರಷ್ಟು ಹೆಚ್ಚಿದೆ.