ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯದಲ್ಲಿಯೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪ್ರಕರಣ ಸಂಬಂಧ ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಮಂದಿಯನ್ನು ಬಂಧಿಸಲಾಗಿದೆ. ಅವರಲ್ಲಿ ಐದು ಜನರಿಗೆ ಜಾಮೀನು ನೀಡಲಾಗಿದೆ. ಆದ್ರೆ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇನ್ನೂ ಕೆಲವರಿಗೆ ಜಾಮೀನು ಅರ್ಜಿ ವಜಾ ಗೊಳಿಸಲಾಗಿದೆ. ಈ ಮಧ್ಯೆ ರೇಣುಕಾಸ್ವಾಮಿ ಪತ್ನಿ ಸಹನಾ ಗಂಡು ಮಗುವಿಗೆ ಜನ್ಮನೀಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ನಡೆದ ಸಂದರ್ಭದಲ್ಲಿ ಸಹನಾ ಗರ್ಭೀಣಿಯಾಗಿದ್ದರು. ರೇಣುಕಾಸ್ವಾಮಿ ಕಮೃತಪಟ್ಟ ನಾಲ್ಕು ತಿಂಗಳ ಬಳಿಕ ಸಹನಾ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗನನ್ನು ಕಳೆದುಕೊಂಡಿರೋ ರೇಣುಕಾಸ್ವಾಮಿ ಪೋಷಕರಿಗೆ ಮೊಮ್ಮಗನ ಆಗಮನ ಖುಷಿ ನೀಡಿದೆ.
ಅಕ್ಟೋಬರ್ 16ರಂದು ಬೆಳಗ್ಗೆ ಜಾವ 7ಗಂಟೆ 1 ನಿಮಿಷಕ್ಕೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಸಹನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಿಗದಿತ ದಿನಾಂಕಕ್ಕಿಂತ ಒಂದು ವಾರ ಮೊದಲೇ ಮಗು ಜನನವಾಗಿದೆ ಎನ್ನಲಾಗಿದೆ. ಮಗುವನ್ನು ಅಬ್ಜರ್ವೇಶನ್ ನಲ್ಲಿ ಇಡಲಾಗಿದೆ.
ರೇಣುಕಾಸ್ವಾಮಿಗೆ ಗಂಡು ಮಗು ಆಗಿರುವ ಸುದ್ದಿ ದರ್ಶನ್ ಅವರಿಗೆ ತಿಳಿಸಿದೆ. ಜೈಲು ಸಿಬ್ಬಂದಿ ದರ್ಶನ್ ಗೆ ಮಾಹಿನಿ ನೀಡಿದ್ದು, ವಿಷಯ ತಿಳಿದ ದರ್ಶನ್, ಹೌದಾ.. ಒಳ್ಳೇದಾಗಲಿ ಎಂದು ಹೇಳಿದ್ದಾರಂತೆ. ಮಗುವಾದ ದಿನವೇ ಸಿಬ್ಬಂದಿ ನಟ ದರ್ಶನ್ ಗೆ ಮಾಹಿತಿ ನೀಡಿದ್ದಾರಂತೆ.
ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಬಳ್ಳಾರಿ ಜೈಲಲ್ಲಿರೋ ನಟ ದರ್ಶನ್ ಗೆ ರೇಣುಕಾಸ್ವಾಮಿಗೆ ಮಗನ ಸುದ್ದಿ ಸಿಕ್ಕಿದೆ ಎಂದು ಹೇಳಲಾಗಿದೆ. ಮಗುವಾದ ದಿನವೇ ಸಿಬ್ಬಂದಿಯಿಂದ ದರ್ಶನ್ ಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ. ರೇಣುಕಾಸ್ಚಾಮಿ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆಂದು ಮಾಹಿತಿ ಕೊಟ್ಟಿದ್ದಾರಂತೆ. ಬ್ಯಾರಕ್ ಹೊರಗಿದ್ದ ದರ್ಶನ್ ಗೆ ಸಿಬ್ಬಂದಿ ರೇಣುಕಾಸ್ವಾಮಿಯ ಮಗುವಿನ ಕುರಿತು ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ. ಸಿಬ್ಬಂದಿ ಹೇಳ್ತಿದ್ದಂತೆ ಒಳ್ಳೆಯದಾಗಲಿ ಎಂದು ನಟ ದರ್ಶನ್ ಹೇಳಿದ್ದಾರಂತೆ. ನಟ ದರ್ಶನ್ ಪ್ರತಿಕ್ರಿಯಿಸಿ ಒಳ್ಳೆಯದಾಗಲಿ ಅವರಿಗೆ ಎಂದು ಹೇಳಿದ್ದಾರಂತೆ.