ಹುಬ್ಬಳ್ಳಿ ;– ಜೈನ ಮುನಿಗಳ ದೇಹ ಕತ್ತರಿಸಿ ಬೋರ್ವೆಲ್ಗೆ ಹಾಕಿದ್ರು, ಮುಂದೆ ಇಂತಹ ಕೃತ್ಯ ಮರುಕಳಿಸದಂತೆ ನೋಡಿಕೊಳ್ತೀವಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಈ ಸಂಬಂಧ ಹುಬ್ಬಳ್ಳಿಯಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ್, ಕೊಲೆ ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಜೈನಮುನಿ ಹತ್ಯೆ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ನಮ್ಮ ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನದಲ್ಲಿ ಇಂತಹ ಕೃತ್ಯ ಮರುಕಳಿಸದಂತೆ ನೋಡಿಕೊಳ್ತೀವಿ ಎಂದು ಭರವಸೆ ಕೊಟ್ಟಿದ್ದಾರೆ.
ಅಪರಾಧಿಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಇದೆ. ಇದು ಸ್ವಾಭಾವಿಕ ಪದ್ದತಿ, ಇದರಲ್ಲಿ ತಾರತಮ್ಯ ಪ್ರಶ್ನೆ ಇಲ್ಲ. ಘಟನೆ ಆದ ಮೇಲೆ ಅರೆಸ್ಟ್ ಮಾಡಿದ್ದಾರೆ. ದೇಹ ಕತ್ತರಿಸಿ ಬೋರ್ವೆಲ್ಗೆ ಹಾಕಿದ್ರು. ನಾನು ನಮ್ಮ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ. ವರೂರಲ್ಲಿ ಜೈನ ಮುನಿಗಳು ಉಪವಾಸ ಕೂತಿದ್ದಾರೆ. ಅವರ ಬೇಡಿಕೆ ಕೇಳುತ್ತೇನೆ. ಮುಂದಿನ ದಿನದಲ್ಲಿ ಈ ರೀತಿ ಆಗದಂತೆ ನೋಡಿಕೊಳ್ತೀವಿ. ನಮ್ಮ ಇಲಾಖೆ ಸಮರ್ಥವಾಗಿದೆ. ಅರೆಸ್ಟ್ ಮಾಡಿದ್ದಾರೆ, ತನಿಖೆ ಶುರುವಾಗಿದೆ. ಸಿಬಿಐಗೆ ಕೊಡೋ ಅಗತ್ಯ ಕಾಣಲ್ಲ. ನಮ್ಮ ಇಲಾಖೆಯ ತನಿಖೆ ಮುಗಿದ ಮೇಲೆ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದು ಹೇಳಿದ್ದಾರೆ.