ಹೊಸದಿಲ್ಲಿ: ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಪದಾರ್ಪಣೆ ಟೆಸ್ಟ್ ಪಂದ್ಯದಲ್ಲಿಯೇ ಶತಕ (171 ರನ್) ಸಿಡಿಸಿ ಹಲವು ದಾಖಲೆ ಬರೆದಿದ್ದ ಯಂಗ್ ಸೆನ್ಷನಲ್ ಯಶಸ್ವಿ ಜೈಸ್ವಾಲ್ ಭಾರತದ ಭವಿಷ್ಯದ ಸೂಪರ್ ಸ್ಟಾರ್ ಆಟಗಾರ ಎಂದು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್ ಗುಣಗಾಣ ಮಾಡಿದ್ದಾರೆ.
ಡೊಮಿನಿಕಾದ ವಿಂಡ್ಸರ್ ಪಾರ್ಕಕನಲ್ಲಿ ಯಶಸ್ವಿ ಜೈಸ್ವಾಲ್ (171 ರನ್) ರೆಡ್ ಬಾಲ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಈ ಪಂದ್ಯದಲ್ಲೇ ನಾಯಕ ರೋಹಿತ್ ಶರ್ಮಾ (103) ಜೊತೆಗೂಡಿ ಆರಂಭಿಕ ವಿಕೆಟ್ಗೆ 229 ರನ್ ಜೊತೆಯಾಟ ನೀಡಿ ದಾಖಲೆ ಬರೆದಿದ್ದರು. ಆ ಮೂಲಕ ಭಾರತ ತಂಡಕ್ಕೆ ಇನಿಂಗ್ಸ್ ಹಾಗೂ 141 ರನ್ ಗೆಲುವಿಗೆ ನೆರವಾಗಿದ್ದರು. ರವಿಚಂದ್ರನ್ ಅಶ್ವಿನ್ (131 ಕ್ಕೆ 12) ಬೌಲಿಂಗ್ ಹಾಗೂ ಜೈಸ್ವಾಲ್ ಶತಕದ ನೆರವಿನಿಂದ 2 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆ ಪಡೆದಿದೆ.
ತಮ್ಮ ಪದಾರ್ಪಣೆ ಪಂದ್ಯದಲ್ಲೇ ಶತಕ (171 ರನ್) ಸಿಡಿಸಿದ್ದ ಯಶಸ್ವಿ ಜೈಸ್ವಾಲ್ ಅವರನ್ನು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್ ಗುಣಗಾಣ ಮಾಡಿದ್ದಾರೆ ಹಾಗೂ ಟೀಮ್ ಇಂಡಿಯಾದ ಭವಿಷ್ಯದ ಸ್ಟಾರ್ ಆಟಗಾರರಾಗುತ್ತಾನೆಂದು ಎಂದು ಶ್ಲಾಘಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಯಶಸ್ವಿ ಜೈಸ್ವಾಲ್ ಅವರ ಬ್ಯಾಟಿಂಗ್ ಕೌಶಲವನ್ನು ಶ್ಲಾಘಿಸಿದ ಎಬಿ ಡಿ ವಿಲಿಯರ್ಸ್, “ಯಶಸ್ವಿ ಜೈಸ್ವಾಲ್ ತಮ್ಮ ಮೊದಲ ಟೆಸ್ಟ್ ಪಂದ್ಯದಿಂದಲೇ ದೊಡ್ಡ ಆಟಗಾರನಂತೆ ಕಂಡಿದ್ದಾರೆ. ಯುವ ಆಟಗಾರರಿಗೆ ತಮ್ಮ ಆರಂಭಿಕ ಟೆಸ್ಟ್ ಪಂದ್ಯದಲ್ಲೇ ಶತಕ ಗಳಿಸುವಂತಹ ಅವಕಾಶ ಯಾವಾಗಲೂ ಸಿಗುವುದಿಲ್ಲ. ಇಂತಹ ಸಂದರ್ಭಗಳು ತುಂಬಾ ಅಪರೂಪ. ಐಪಿಎಲ್ ಟೂರ್ನಿಯಲ್ಲಿ ನಾನು ಮೊದಲ ಬಾರಿ ಈ ಆಟಗಾರನನ್ನು ನೋಡಿದಾಗ ಆತನಲ್ಲಿ ವಿಶೇಷವಾಗಿರುವುದು ಏನೋ ಅಡಗಿದೆ ಎಂಬ ಭಾವನೆ ಮೂಡಿತ್ತು. ಆತ ನನಗೆ ಉಳಿದ ಆಟಗಾರರಿಗಿಂತ ವಿಶೇಷವಾಗಿ ಕಾಣಿಸುತ್ತಾನೆ,” ಎಂದು ಎಬಿ ಡಿ ಡಿವಿಲಿಯರ್ಸ್ ಗುಣಗಾನ ಮಾಡಿದ್ದಾರೆ.
ಭಾರತದ ಪರ ಪದಾರ್ಪಣೆ ಪಂದ್ಯದಲ್ಲೇ 150ಕ್ಕೂ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ ಎಂಬ ಖ್ಯಾತಿಗೆ ಯಶಸ್ವಿ ಜೈಸ್ವಾಲ್ (171 ರನ್) ಪಾತ್ರರಾಗಿದ್ದಾರೆ. ರೋಹಿತ್ ಶರ್ಮಾ (177 ರನ್) ಹಾಗೂ ಶಿಖರ್ ಧವನ್ (187 ರನ್) ಮುಂಚೂಣಿ ಈ ಸಾಧನೆ ಮಾಡಿದ್ದಾರೆ.
ಹದಿನಾರನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 48ರ ಸರಾಸರಿಯಲ್ಲಿ ಯಶಸ್ವಿ ಜೈಸ್ವಾಲ್ 625 ರನ್ ಬಾರಿಸಿದ್ದು, ಒಂದು ಶತಕ ಹಾಗೂ 5 ಅರ್ಧಶತಕ ಸಿಡಿಸಿದ್ದರು. 16 ಪ್ರಥಮ ದರ್ಜೆ ಪಂದ್ಯಗಳಿಂದ 10 ಶತಕ, 2 ಅರ್ಧಶತಕ ನೆರವಿನಿಂದ 84ರ ಸರಾಸರಿಯಲ್ಲಿ 2016 ರನ್ಗಳನ್ನು ಕಲೆ ಹಾಕಿದ್ದಾರೆ.