ಹೋಳಿ ಹಬ್ಬಕ್ಕೆ ಇನ್ನೇನು ದಿನಗಣನೆ ಶುರುವಾಗಿದೆ. ಅದ್ರೇ ಈಗ ಹಬ್ಬದ ಆಚರಣೆಗೆ ಜಲಕಂಠಕ ಎದುರಾಗಿದೆ. ಜಲ ಅಭಾವದ ಹಿನ್ನೆಲೆ ಬೆಂಗಳೂರಿಗರು ಹೋಳಿ ಆಚರಣೆಯಲ್ಲಿ ಒಂದು ನಿರ್ಧಾರ ಮಾಡಿಕೊಂಡಿದ್ದಾರೆ. ಏನದು..!? ಹೋಳಿ ಹಬ್ಬಕ್ಕೆ ಆಗಿರುವ ಜಲಕಂಠಕ ಏನು ಅಂತ ಹೇಳ್ತೀವಿ ಈ ಸ್ಟೋರಿ ನೋಡಿ..
ರಾಜ್ಯದಲ್ಲಿ ಮಳೆ ಅಭಾವ ಬೇಸಿಗೆ ಆರಂಭದಲ್ಲೇ ಎಫೆಕ್ಟ್ ಶುರುವಾಗಿದೆ. ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಗರದಲ್ಲಿ ಶುರುವಾಗಿದೆ. ನೀರು ಕೊಡಿ ನೀರು ಕೊಡಿ ಅಂತ ಸರ್ಕಾರಕ್ಕೆ ಜನ ಕೇಳುತ್ತಿದ್ದಾರೆ. ಇರೋ ಬರೋ ಬೋರ್ ಬೆಲ್ ಗಳು ಬತ್ತಿಹೋಗಿವೆ. ಇದರ ಜೊತೆಗೆ ಇನ್ಮೇಲೆ ಶುರುವಾಗುವ ಸಾಲು ಸಾಲು ಹಬ್ಬಗಳ ಕಥೆ ಏನು ಅನ್ನೋದು ಬೆಂಗಳೂರಿಗರಿಗೆ ತಲೆನೋವಾಗಿದೆ ಇನ್ನೇನು ಕೆಲವೇ ದಿನಗಳಲ್ಲಿ ಬರುವ ಹೋಳಿ ಹಬ್ಬ ನೀರಿಲ್ಲದೇ ಹೇಗೆ ಆಚರಿಸೋದು ಅನ್ನೋ ಪ್ರಶ್ನೆ ಕಾಡುತ್ತಿದೆ ಇದಕ್ಕೆ ಬೆಂಗಳೂರಿನ ವ್ಯಾಪಾರಿಗಳು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಅದೇ ಡ್ರೈ ಹೋಳಿ ಆಚರಣೆ.
ಹೌದು ನೀರು ಪೋಲು ಮಾಡದೇ ಡ್ರೈ ಹೋಳಿ ಹಬ್ಬ ಆಚರಣೆ ಮಾಡುವಂತೆ ಮೆಸೇಜ್ ಕ್ಯಾಂಫೇನ್ ಶುರುವಾಗಿದೆ. ಇನ್ನು ಹೋಳಿ ಆಚರಣೆಗೆ ಹೆಸರಾದ ಎಸ್ ಪಿ ರೋಡ್, ಅವೆನ್ಯೂ ರೋಡ್ ವ್ಯಾಪಾರಿಗಳೇ ಈ ನಿರ್ಧಾರ ಮಾಡಿದ್ದಾರೆ. ಈ ಬಾರಿ ಮಳೆ ತುಂಬಾ ಕಡಿಮೆಯಾಗಿದೆ, ಈ ಹಿನ್ನೆಲೆ ಹೋಳಿ ನಮ್ಮ ಸಂಸ್ಕೃತಿಯ ಹಬ್ಬ. ಅದನ್ನ ಆಚರಣೆ ಮಾಡೋಣ ಅದ್ರೇ ಹಬ್ಬದ ನೆಪದಲ್ಲಿ ನೀರು ಪೋಲು ಮಾಡೋದು ಬೇಡ. ಡ್ರೈ ಹೋಳಿ ಆಚರಣೆ ಮಾಡೋಣ ಎಂದು ಎಸ್ ಪಿ ರೋಡ್ ಅಸೋಸಿಯೇಷನ್ ನಿಂದ ಡ್ರೈ ಹೋಳಿ ಅಭಿಯಾನವನ್ನ ಶುರು ಮಾಡಿದ್ದಾರಂತೆ. ಸುಮಾರು 1500 ಕ್ಕೂ ಹೆಚ್ಚು ವ್ಯಾಪಾರಿಗಳು ಈ ಅಸೋಸಿಯೇಷನ್ ನಲ್ಲಿದ್ದಾರೆ. ಇದರ ಜೊತೆಗೆ ಬೇರೆ ಅಸೋಸಿಯೇಷನ್ ಗಳಿಗೂ ಈ ಮೆಸೇಜ್ ಕಳುಹಿಸಲುಸಹ ನಿರ್ಧಾರ ಮಾಡಿದ್ದಾರೆ.
ಒಟ್ಟಾರೆ ಹೋಳಿ ಆಚರಣೆಯೂ ಬಿಡಬಾರದು. ನೀರನ್ನೂ ಪೋಲು ಮಾಡದೇ ಹಬ್ಬದ ಆಚರಣೆ ಮಾಡೋಣ ಅನ್ನೋ ಅಭಿಯಾನ ಚೆನ್ನಾಗೇ ಇದೆ. ಇದಕ್ಕೆ ಜನ ಯಾವ ರೀತಿ ಸ್ಪಂದಿಸ್ತಾರೆ ಕಾದು ನೋಡಬೇಕು..