ಹೆಣ್ಣು ಮಕ್ಕಳಿಗೆ ಪ್ರವೇಶ ನಿರ್ಬಂಧಿಸಿದ ಜಾಮಾ ಮಸೀದಿ: ಮಹಿಳಾ ಆಯೋಗ ನೋಟಿಸ್

ರಾಷ್ಟ್ರೀಯ

ನವದೆಹಲಿ: ದೆಹಲಿಯ ಜಾಮಾ ಮಸೀದಿಗೆ ಮಹಿಳೆಯರ ಪ್ರವೇಶವನ್ನು ನಿಷೇಧಿಸುವ ವಿಷಯದ ಕುರಿತು ದೆಹಲಿ ಮಹಿಳಾ ಆಯೋಗವು ಮಸೀದಿಯ ಇಮಾಮ್‌ಗೆ ನೋಟಿಸ್ ನೀಡಲು ನಿರ್ಧರಿಸಿದೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲಾ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಜಾಮಾ ಮಸೀದಿಗೆ ಮಹಿಳೆಯರ ಪ್ರವೇಶವನ್ನು ತಡೆಯುವ ನಿರ್ಧಾರ ಸಂಪೂರ್ಣವಾಗಿ ತಪ್ಪು. ಪುರುಷನಿಗೆ ಪ್ರಾರ್ಥನೆ ಮಾಡುವ ಹಕ್ಕು ಎಷ್ಟು ಇದೆಯೋ ಅಷ್ಟೇ ಹಕ್ಕು ಮಹಿಳೆಗೂ ಇದೆ.

ನಾನು ಜಾಮಾ ಮಸೀದಿಯ ಇಮಾಮ್‌ಗೆ ನೋಟಿಸ್ ನೀಡುತ್ತಿದ್ದೇನೆ. ಈ ರೀತಿ ಮಹಿಳೆಯರ ಪ್ರವೇಶವನ್ನು ನಿಷೇಧಿಸುವ ಹಕ್ಕು ಯಾರಿಗೂ ಇಲ್ಲ.’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಜಾಮಾ ಮಸೀದಿಯ ಎಲ್ಲಾ 3 ಪ್ರವೇಶ ದ್ವಾರಗಳ ಮೇಲೆ ಸೂಚನಾ ಫಲಕವನ್ನು ಹಾಕಲಾಗಿದೆ. ಅದರಲ್ಲಿ ‘ಜಾಮಾ ಮಸೀದಿಗೆ ಹುಡುಗಿಯರು ಅಥವಾ ಮಹಿಳೆಯರು ಏಕಾಂಗಿಯಾಗಿ ಬರುವಂತಿಲ್ಲ’ ಎಂದು ಬರೆಯಲಾಗಿದೆ.