ಬೆಂಗಳೂರು:- ಹಿಂದೂಗಳನ್ನು ಅಡಿಯಾಳುಗಳೆಂದ ಜಮೀರ್ ರಾಜೀನಾಮೆ ನೀಡಲಿ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ.
ಸಚಿವ ಜಮೀರ್ ಅಹ್ಮದ್ ಅವರು ಹೈದರಾಬಾದ್ನ ಮುಸ್ಲಿಮರೇ ಸೇರಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಆಡಿದ ಮಾತಿನ ಅರ್ಥ ʻʻಹಿಂದುಗಳು ಮುಸ್ಲಿಮರ ಅಡಿಯಾಳುಗಳುʼ ಎಂದೇ ಆಗಿದೆ. ಹೀಗೆ ಸ್ಪೀಕರ್ ಸ್ಥಾನವನ್ನು ಮುಂದಿಟ್ಟುಕೊಂಡು ಅವರು ಹಿಂದು ಮತ್ತು ಮುಸ್ಲಿಮರ ನಡುವೆ ದ್ವೇಷ ಹುಟ್ಟಿಸುವ ಕೆಲಸ ಮಾಡಿದ್ದಾರೆ, ಇದನ್ನು ಕಾಂಗ್ರೆಸ್ನವರು ಸಮರ್ಥಿಸುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಹಿಂದು ದ್ವೇಷ ಪ್ರಕಟಿಸಿದ ಜಮೀರ್ ಅಹಮದ್ ಖಾನ್ ಅವರನ್ನು ವಜಾಗೊಳಿಸಬೇಕು, ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಬಿಜೆಪಿ ಸದಸ್ಯರು ಸೋಮವಾರ ಬೆಳಗ್ಗೆ ವಿಧಾನಸಭೆಯಲ್ಲಿ ಗದ್ದಲವೆಬ್ಬಿಸಿದರು. ಜಮೀರ್ ಅಹಮದ್ ಖಾನ್ ಪ್ರಶ್ನೆಗೆ ಉತ್ತರ ನೀಡಲು ನಿಂತಾಗ ಆಕ್ಷೇಪಿಸಿದರು. ಬಿಜೆಪಿ ಗದ್ದಲದಿಂದಾಗಿ ಸ್ಪೀಕರ್ ಖಾದರ್ ಅವರು ಸಂಧಾನ ಸಭೆ ನಡೆಸಿದರೂ ಫಲ ದೊರೆಯಲಿಲ್ಲ. ಬಳಿಕವೂ ಪ್ರತಿಭಟನೆ, ಗದ್ದಲ ಮುಂದುವರಿದಿತ್ತು. ಅದರ ನಡುವೆಯೇ ಸದನದ ಕಲಾಪ, ವಿಧೇಯಕಗಳ ಮಂಡನೆ ನಡೆದಿದೆ ಎಂದರು.