ಕೊಪ್ಪಳ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಚುನಾವಣೆ ಆಯೋಗದಿಂದ ಅಧಿಕೃತವಾಗಿ ದೊರೆತ ಫುಟ್ಬಾಲ್ ಚಿನ್ಹೆ ದೊರಕಿದ ಮೇಲೆ ಇಂದು ಪ್ರಥಮವಾಗಿ ಗಂಗಾವತಿ ಕ್ಷೇತ್ರದ ಹೆಬ್ಬಾಗಿಲು ಆನೆಗುಂದಿ ಭಾಗದ ಕಡೆಬಾಗಿಲು, ಗೂಗಿಬಂಡಿ, ಗೂಗಿಬಂಡಿ ಕ್ಯಾಂಪ್, ಬಸವನದುರ್ಗ, ಕೃಷ್ಣಾಪುರ್ ಡಗ್ಗಿ ಕ್ಯಾಂಪ್, ಬಂಡಿಬಸಪ್ಪ ಕ್ಯಾಂಪ್, ಸಾಯಿನಗರ(ವಿಪ್ರ), ರಾಯಲುನಗರ, ನಾಗರಹಳ್ಳಿ, ವಡ್ಡರಹಟ್ಟಿ ಕ್ಯಾಂಪ್ ಗ್ರಾಮಗಳಿಗೆ ಭೇಟಿ ನೀಡಿ ಪಕ್ಷದ ಪ್ರಣಾಳಿಕೆ ಮತ್ತು ಅಭಿವೃದ್ಧಿಯ ವಿಚಾರಗಳನ್ನು ತಿಳಿಸಿದರು.
ಈ ವೇಳೆ ಸಂಗಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೂಗಿಬಂಡಿ, ಗೂಗಿಬಂಡಿ ಕ್ಯಾಂಪ್ ಮತ್ತು ಸಂಗಾಪೂರ ಗ್ರಾಮಗಳ ಗ್ರಾ. ಪಂ. ಸದಸ್ಯರು ಗಳಾದ ಲಕ್ಷ್ಮವ್ವ ಹನುಮಂತಪ್ಪ ಗುಂಟೂರು, ಬಿ ಗೋಪಿ, ಮತ್ತು ತಾಳೂರು ಸತ್ಯನಾರಾಯಣ ಪಕ್ಷದ ಶಾಲು ಹಾಕಿಸಕೊಂಡು ಅಧಿಕೃತವಾಗಿ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕರಾದ ಮನೋಹರ ಗೌಡ ಹೇರೂರು, ಗ್ರಾಮೀಣ ಘಟಕದ ಅಧ್ಯಕ್ಷ ದುರ್ಗಪ್ಪ ಆಗೋಲಿ, ಪಕ್ಷದ ಮುಖಂಡರಾದ ಸೈಯದ್ ಜಿಲಾನಿ ಪಾಷ, ಜೋಗದ ದುರ್ಗಪ್ಪ ನಾಯಕ್, ಯಮನೂರು ಚೌಡ್ಕಿ ಇನ್ನೂ ಮುಂತಾದ ಪಕ್ಷದ ಹಿರಿಯ ಕಿರಿಯ ಮುಖಂಡರು ಹಾಗು ಕಾರ್ಯಕರ್ತರು ಇದ್ದರು
ಗಂಗಾವತಿಯಲ್ಲಿ ನಡೆದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಚಾರ ಮತ್ತು ಸೇರ್ಪಡೆ ಕಾರ್ಯಕ್ರಮದಲ್ಲಿ ಪಕ್ಷದ ಸಂಸ್ಥಾಪಕರಾದ ಶ್ರೀ ಗಾಲಿ ಜನಾರ್ಧನ ರೆಡ್ಡಿಯವರ ಸಮ್ಮುಖದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನ ಪ್ರಮುಖ ಯುವ ನಾಯಕರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಯೂತ್ ಐಕಾನ್ ಎಂದೇ ಗುರುತಿಸಿಕೊಂಡ ರಾಜೇಶ್ ಕುಮಾರ್ ತಂಡದೊಂದಿಗೆ ಬಿಜೆಪಿಯ ಎಸ್ಟಿ ಮೋರ್ಚಾ ನಗರ ಘಟಕ ಅಧ್ಯಕ್ಷ ಮಂಜುನಾಥ್ ಕೊಲ್ಕಾರ್ ನೇತೃತ್ವದಲ್ಲಿ ಕಲ್ಲಪ್ಪ ಕ್ಯಾಂಪ್, ಸಿದ್ದಿಕೇರಿ, ಸಿದ್ದಿಕೇರಿ ಕ್ಯಾಂಪ್, ಹೀರೇಸೂಳಿಕೇರಿ, ದಾಸನಾಳ್, ಹೀರೆಜಂತಕಲ್, ಬಸಾಪಟ್ಟಣ, ಒಣಬಳ್ಳಾರಿ ಗ್ರಾಮಗಳಿಂದ ಮತ್ತು
ಕಾಂಗ್ರೆಸ್ ಯುವ ಮುಖಂಡ ಷಣ್ಮುಖ ಮಳ್ಳಿಕೇರಿ, ಶೇಖರ್ ನಾಯಕ, ಮಂಜುನಾಥ್ ಕೊಲ್ಕರ್, ಷಣ್ಮುಖ ಮಳ್ಳಿಕೇರಿ, ಭೀಮಣ್ಣ ಗುಡ್ಡೆದಕಲ್ಲು, ನಾಗರಾಜ್ ಕಲ್ಲೂರು, ಬಿ ಸಿ ನಾಗೇಶ್, ಸೋಮಣ್ಣ, ಹುಲುಗಪ್ಪರವರ ನೇತೃತ್ವದಲ್ಲಿ ಒಟ್ಟು 1500 ಕ್ಕೂ ಹೆಚ್ಚು ಹಿರಿಯರು ಅಭಿಮಾನಿಗಳು ಯುವಕರು ಪಕ್ಷದ ವಿಚಾರಧಾರೆಗಳನ್ನು ಅರಿತು ಜೊತೆಗೆ ಕ್ಷೇತ್ರದಲ್ಲಿ ಶಾಂತಿಗಾಗಿ ಮೇಲೆ ಸ್ವಯಂ ಸೇರ್ಪಡೆಗೊಂಡರು.
ಹಾಗೆ ಪಕ್ಷದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಹಿರಿಯ ಮತ್ತು ಕಿರಿಯ ಪದಾಧಿಕಾರಿಗಳು ಹಾಗೂ ಅಪಾರ ಅಭಿಮಾನಿಗಳು ಉಪಸ್ಥಿತರಿದ್ದರು