ಬಾಲಿವುಡ್ ನಟಿ ಜಾನ್ವಿ ಕಪೂರ್ ತಮ್ಮ ಫ್ಯಾಷನ್ ಸೆನ್ಸ್ನಿಂದ ತಮ್ಮ ಅಭಿಮಾನಿಗಳ ಗಮನ ಸೆಳೆಯುತ್ತಾರೆ.
ಸೀರೆಗಳು, ಬಾಡಿಕಾನ್ ಗೌನ್ಗಳು, ಗೌನ್, ಸ್ಕರ್ಟ್ ಯಾವುದೇ ಇರಲಿ ಆಕೆಯ ಅಂದಕ್ಕೆ ಮೆರುಗು ನೀಡುತ್ತವೆ. ಯಾವುದೇ ಬಟ್ಟೆ ತೊಟ್ಟರೂ ಕೂಡ ಆಕೆಯ ಅಂದಕ್ಕೆ ಒಪ್ಪುತ್ತದೆ.
ವ್ಯಾಲೆಂಟೈನ್ಸ್ ಡೇಗೆ ಪ್ರೇಮಿಗಳು ಸಜ್ಜಾಗುತ್ತಿದ್ದು, ಸೆಲಬ್ರಿಟಿಗಳು ಕೂಡ ತಾವೇನು ಕಮ್ಮಿಯಿಲ್ಲ ಎನ್ನುವಂತೆ ರೆಡಿಯಾಗುತ್ತಿದ್ದಾರೆ. ನಟಿ ಜಾನ್ವಿ ಕಪೂರ್ ರೆಡ್ ಬಾಡಿಕಾನ್ ಡ್ರೆಸ್ ಹಾಕಿಕೊಂಡು ಫೋಟೋಗಳಿಗೆ ಪೋಸ್ ನೀಡಿ ವಿ-ಡೇ ಎನರ್ಜಿ ಎಂದಿದ್ದಾರೆ.
ಈ ಪ್ರೇಮಿಗಳ ದಿನದ ವಿಶೇಷ ಡ್ರೆಸ್ ಜತೆಗೆ ಅವರ ಸ್ಟೈಲಿಂಗ್ ಕೂಡ ಗಮನ ಸೆಳೆಯುತ್ತಿದೆ. ಗಾಢ ಕೆಂಪು ಡ್ರೆಸ್ ಆಫ್-ಶೋಲ್ಡರ್ ನೆಕ್ಲೈನ್ ಹೊಂದಿದೆ. ತೋಳುಗಳಲ್ಲಿ ಲೇಸ್-ಕಸೂತಿ ಬ್ಯಾಂಡ್ಗಳು, ಸ್ಯಾಟಿನ್ ಸ್ಕರ್ಟ್ ಮಾರ್ಮಿಡ್ ಬಾಡಿಕಾನ್ ಆಗಿದೆ.
ರೆಡ್ ಲೇಸ್ ಕಾರ್ಸೆಟ್ ಮ್ಯಾಕ್ಸಿ ಡ್ರೆಸ್ ಜಾನ್ವಿಯ ಅಂದಕ್ಕೆ ಮೆರುಗು ನೀಡಿದೆ. ಸರಣಿ ಫೋಟೋಗಳನ್ನು ಹಂಚಿಕೊಂಡಿರುವ ಅವರಿಗೆ ಫ್ಯಾನ್ಸ್ ಲೈಕ್ ಕಾಮೆಂಟ್ ಮೂಲಕ ತಮ್ಮ ಪ್ರೀತಿ ಹರಿಸುತ್ತಿದ್ದಾರೆ.