ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೂರ್ ಪುತ್ರಿ ಶ್ರೀದೇವಿ ಬಾಲಿವುಡ್ ಜೊತೆಗೆ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಜೂನಿಯರ್ ಎನ್ಟಿಆರ್ಗೆ ಜೋಡಿಯಾಗಿ ನಟಿಸುವ ಮೂಲಕ ಪರಭಾಷೆಯಲ್ಲೂ ಜಾನ್ವಿ ಚಾಪೂ ಮೂಡಿಸಿದ್ದಾರೆ.
ಜಾನ್ವಿ ಕಪೂರ್ ನಟನೆಯ ದೇವರ ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಆಗಿದ್ದು ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೂ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಮಧ್ಯೆ ಜಾನ್ವಿ ಸಖತ್ತಾಗಿ ಫೋಟೋ ಶೂಟ್ ಮಾಡಿಸಿದ್ದಾರೆ.
ಜಾನ್ವಿ ಕಪೂರ್ ಅವರವಾಗಿರುವ ಮಿರ ಮಿರ ಮಿಂಚುವ ಸೀರೆ ಉಟ್ಟು ಮಿಂಚಿದ್ದಾರೆ. ನಟಿಯ ಬ್ಲೌಸ್ ಕೂಡಾ ತುಂಬಾ ಆಕರ್ಷಕವಾಗಿತ್ತು. ನಟಿ ಇದಕ್ಕೆ ಸ್ಟೋನ್ ನೆಕ್ಲೆಸ್ ಧರಿಸಿದ್ದಾರೆ. ಆಕರ್ಷಕವಾಗಿ ಮೇಕಪ್ ಮಾಡಿ ತುಂಬಾ ಮುದ್ದಾಗಿ ಕಾಣಿಸಿದ್ದಾರೆ. ನಟಿಯ ಫೋಟೋಸ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜಾನ್ವಿ ಲುಕ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ನಟಿ ಮಲ್ಟಿ ಕಲರ್ ಸೀರೆ ಉಟ್ಟು ಮುದ್ದಾಗಿ ಕಾಣಿಸಿದ್ದಾರೆ. ಸಿಂಪಲ್ ಆಗಿ ಆಭರಣ ಧರಿಸಿಕೊಂಡು ನಟಿ ಕ್ಯೂಟ್ ಆಗಿ ಕಾಣಿಸಿದ್ದಾರೆ. ಅವರ ಫೋಟೋಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಇದು ಮಿನುಗುತ್ತಿರಬೇಕಾದ ಸೀಸನ್. ನನಗೆ ಒಂದು ಕಾರಣ ಬೇಕು ಅಂತಲ್ಲ ಎಂದು ನಟಿ ಜಾನ್ವಿ ಕಪೂರ್ ಅವರು ಫೋಟೋಗೆ ಕ್ಯಾಪ್ಶನ್ ಹಾಕಿ ಡೈಮಂಡ್ ಎಮೋಜಿಯನ್ನು ಕೂಡಾ ಹಾಕಿದ್ದರು. ನಟಿ ಸುಮಾರು 10 ಫೋಟೋಗಳನ್ನು ಒಟ್ಟಿಗೆ ಶೇರ್ ಮಾಡಿದ್ದಾರೆ.
ಜಾನ್ವಿ ಕಪೂರ್ ಅವರ ಫೋಟೋಗೆ ತಂದೆ ಬೋನಿ ಕಪೂರ್ ಅವರು ಕಮೆಂಟ್ ಮಾಡಿದ್ದಾರೆ. ಕಷ್ಟಪಟ್ಟು ಕೆಲಸ ಮಾಡುವ ನನ್ನ ಚಂದದ ಮಗಳೆ, ನಿನ್ನಲ್ಲಿರುವ ಎನರ್ಜಿ ಅಮೇಜಿಂಗ್ ಆಗಿದೆ. ಎರಡು ತಿಂಗಳಿಂದ ನೀನು ನಿನ್ನನ್ನೇ ರುಬ್ಬುತ್ತಿದ್ದಿ. ಆ ಕಡೆ ಈ ಕಡೆ ಅಂತರ ನಗರಗಳಿಂದ ನಗರಗಳಿಗೆ ಓಡಾಡುತ್ತಿದ್ದಿ. ಆದರೂ ಇಷ್ಟೊಂದು ಮುದ್ದಾಗಿ ಕಾಣುವಲ್ಲಿ ಯಶಸ್ವಿಯಾಗಿದ್ದಿ ಎಂದು ಬೋನಿ ಕಪೂರ್ ಕಮೆಂಟ್ ಮಾಡಿದ್ದಾರೆ.
ಬೋನಿ ಕಪೂರ್ ಅವರು ಮಗಳ ಫೋಟೋಗಳಿಗೆ ಕಮೆಂಟ್ ಮಾಡುವಾಗ ರೆಡ್ ಹಾರ್ಟ್ ಎಮೋಜಿಗಳನ್ನು ಹಾಕಿದ್ದಷ್ಟೇ ಅಲ್ಲದೆ ಫೈರ್ ಎಮೋಜಿಗಳನ್ನು ಕೂಡಾ ಹಾಕಿದ್ದರು. ಅವರ ಕಮೆಂಟ್ಗೆ ನೆಟ್ಟಿಗರು ಪ್ರೀತಿ ತೋರಿಸಿ ತಂದೆಯ ಪ್ರೀತಿಗೆ ಸರಿಸಾಟಿ ಏನು ಎಂದಿದ್ದಾರೆ.
ಜಾನ್ವಿ ಕಪೂರ್ ಅವರು ತಂದೆಯ ಕಮೆಂಟ್ಗೆ ಪ್ರತಿಕ್ರಿಯಿಸಿದ್ದಾರೆ. ಲವ್ ಯೂ ಪಾಪ ಎಂದು ಪ್ರತಿಕ್ರಿಯಿಸಿದ್ದಾರೆ. ನಟಿಯ ಫೋಟೋಗಳಿಗೆ 5 ವರೆ ಲಕ್ಷಕ್ಕೂ ಅಧಿಕ ಲೈಕ್ಸ್ ಹರಿದು ಬಂದಿದೆ. ನೆಟ್ಟಿಗರು ಈ ಫೋಟೋಗಳಿಗೆ ಫೈರ್ ಎಮೋಜಿ ಹಾಗೂ ಹಾರ್ಟ್ ಎಮೋಜಿ ಕಮೆಂಟ್ ಮಾಡಿದ್ದಾರೆ.
ಜಾನ್ವಿ ಕಪೂರ್ ನಟಿಯಾಗಿ ಚಿತ್ರರಂಗದಲ್ಲಿ ತನ್ನನ್ನು ತಾನು ಸಾಬೀತುಪಡಿಸಲು ಶ್ರಮಿಸುತ್ತಿದ್ದಾರೆ. ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಈ ನಡುವೆ ನಟಿಯ ದೇವರ ಸಂಭಾವನೆ ಸುದ್ದಿಯಾಗುತ್ತಿದೆ. ನಟಿ ದೇವರ ಸಿನಿಮಾಗೆ 5 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಮಿಲಿ, ಮಿಸ್ಟರ್ ಅಂಡ್ ಮಿಸ್ ಮಹಿ ಸಿನಿಮಾಗಳಲ್ಲಿ ನಟಿಸಿರುವ ಜಾನ್ಹವಿ ಲೇಡಿ ಓರಿಯೆಂಟೆಡ್ ಸಿನಿಮಾಗಳಿಗೆ ವಿಶೇಷ ಆದ್ಯತೆ ನೀಡುತ್ತಿದ್ದಾರೆ. ಜಾನ್ವಿ ಮಾಮೂಲಿ ಭಿನ್ನವಾದ ಪಾತ್ರಗಳನ್ನು ಆಯ್ಕೆ ಮಾಡುವ ಮೂಲಕ ಚಿತ್ರರಂಗದಲ್ಲಿ ತನ್ನ ಛಾಪು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.