ಬಾಲಿವುಡ್ನ ಬ್ಯೂಟಿಫುಲ್ ನಟಿ ಜಾನ್ವಿ ಕಪೂರ್ ಸದಾ ತನ್ನ ಫ್ಯಾಷನ್ ನಿಂದಲೇ ಗಮನ ಸೆಳೆಯುತ್ತಿರುತ್ತಾರೆ. ದಕ್ಷಿಣ ಭಾರತದ ಸಾಕಷ್ಟು ಬೇಡಿಕೆ ಕಾಯ್ದುಕೊಂಡಿರುವ ನಟಿ ಇದೀಗ ಅನಂತ್ ಅಂಬಾನಿ ಹಾಗೂ ರಾಧಿಕಾ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ನವಿಲಿನಂತೆ ಸಿಂಗಾರಗೊಂಡ ನೆರೆದಿದ್ದವರ ಗಮನ ಸೆಳೆದಿದ್ದಾರೆ.
ತಾಯಿ ಶ್ರೀದೇವಿಯಂತೆ ಜಾನ್ವಿ ಕೂಡ ಸುಂದರಿ ಅನ್ನೋದಲ್ಲಿ ಎರಡು ಮಾತಿಲ್ಲ. ಅಮ್ಮನನ್ನು ಮೀರಿಸುವ ಸೌಂದರ್ಯವತಿ ಈ ಜಾನ್ವಿ ಕಪೂರ್. ತನ್ನ ಅದ್ಭುತ ಸೌಂದರ್ಯದಿಂದ ಬೆರಗುಗೊಳಿಸುವ ಜಾನ್ವಿ ಕಪೂರ್ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿದ್ದಾರೆ.
ಜಾನ್ವಿ ಸದಾ ಒಂದಲ್ಲ ಒಂದು ಫೋಟೋಗಳನ್ನು ಸೊಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಲೆ ಇರುತ್ತಾರೆ. ಈಕೆಯ ಒಂದೇ ಒಂದು ಫೋಟೋಗಾಗಿ ಅಭಿಮಾನಿಗಳು ಕ್ಯೂ ನಿಂತಿರ್ತಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ನಟಿ ಜಾನ್ವಿ ಕಪೂರ್ ಈ ಮಧ್ಯೆ ಬಿಡುವು ಮಾಡಿಕೊಂಡು ಅನಂತ್ ಅಂಬಾನಿ ಹಾಗೂ ರಾಧಿಕಾ ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ರು.
ಇತ್ತೀಚೆಗಷ್ಟೇ ಅನಂತ್-ರಾಧಿಕಾ ಅವರ ವಿವಾಹಪೂರ್ವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಾನ್ವಿಕಪೂರ್ ರಾಯಲ್ ಬ್ಲೂ ಎ-ಲೈನ್ ಲೆಹೆಂಗಾದಲ್ಲಿ ಇಲ್ಯೂಷನ್ ನೆಕ್ ಲೈನ್ ಬ್ಲೌಸ್ ನೊಂದಿಗೆ ಮಿಂಚುತ್ತಿದ್ರು. ಜಾನ್ವಿಯ ನವಿಲು ಗರಿ ಲುಕ್ ಲೆಹೆಂಗಾ ಎಲ್ಲರ ಗಮನ ಸೆಳೆದಿತ್ತು.
ಅನಂತ್ ಹಾಗೂ ರಾಧಿಕಾ ಮದುವೆಯ ಸಂಗೀತ ಕಾರ್ಯಕ್ರಮಕ್ಕೆ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಹಾಜರಾಗಿದ್ದರು. ಎಲ್ಲರಲ್ಲೂ ಎದ್ದು ಕಾಣುವಂತಿದ್ದಿದ್ದು ನಟಿ ಜಾನ್ವಿ ಕಪೂರ್. ಆಕೆಯ ಸೌಂಧರ್ಯಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದು ಆಕೆ ಧರಿಸಿದ್ದ ನವಿಲಿನಂತ ಡ್ರಸ್.
ಮನೀಷ್ ಮಲ್ಹೋತ್ರಾ ಸಿದ್ಧಪಡಿಸಿದ ಈ ಲೆಹೆಂಗಾವನ್ನು ಜಾಮ್ನಗರದಲ್ಲಿ ಹೆಜ್ಜೆಗೊಂದು ಸಿಗುವ ನವಿಲುಗಳಿಂದ ಪ್ರೇರಿತವಾಗಿ ತಯಾರಿಸಲಾಗಿದೆ ಎಂದು ಜಾನ್ವಿ ಹೇಳಿಕೊಂಡಿದ್ದಾಳೆ.
ಈ ನೀಲಿ, ಹಸಿರು ಬಣ್ಣದ ಅದ್ಧೂರಿ ಲೆಹೆಂಗಾ ಜೊತೆಗೆ ಹಸಿರು ಬಿಳಿ ಹರಳುಗಳ ನೆಕ್ಲೇಸ್ ಹಾಗೂ ಇಯರಿಂಗ್ ಹಾಕಿಕೊಂಡ ನಟಿ ಮತ್ತಷ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಸಮಾರಂಭದಲ್ಲಿ ಜಾನ್ವಿ ಬಾಯ್ಫ್ರೆಂಡ್ ಶಿಖರ್ ಪಹಾರಿಯಾ ಜೊತೆ ನೃತ್ಯ ಮಾಡಿದ್ದು, ಶಿಖರ್ ಆಕೆಯ ಲೆಹೆಂಗಾ ಸರಿಪಡಿಸಿದ ಫೋಟೋಗಳು ವೈರಲ್ ಆಗಿವೆ.