ಫುಡ್ ಪಾಯಿಸನ್ ನಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟಿ ಜಾನ್ವಿ ಕಪೂರ್ ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಟಿಯ ಆರೋಗ್ಯದ ಕುರಿತು ತಂದೆ ಬೋನಿ ಕಪೂರ್ ಮಾಹಿತಿ ನೀಡಿದ್ದಾರೆ.
ಫುಡ್ ಪಾಯಿಸನ್ನಿಂದ ಜಾನ್ವಿ ಕಪೂರ್ ಜು.18ರಂದು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ನಿರಂತರ ಕೆಲಸ ಮತ್ತು ಓಡಾಟದಿಂದ ಧಣಿದಿದ್ದ ನಟಿ ಆರೋಗ್ಯ ಹದಗೆಟ್ಟಿತ್ತು. ಅವರಿಗೆ 3 ದಿನಗಳ ಕಾಲ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದರು. ಈಗ ಆರೋಗ್ಯದಲ್ಲಿ ಚೇತರಿಕೆ ಕಂಡಿರುವ ಹಿನ್ನೆಲೆ ಜು.20ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಈ ಬೆನ್ನಲ್ಲೇ ಮಾಧ್ಯಮಕ್ಕೆ ಪ್ರತಿಕ್ರಿಯಸಿದ ತಂದೆ ಬೋನಿ ಕಪೂರ್, ಈಗ ಮಗಳು ಆರಾಮ ಆಗಿದ್ದಾಳೆ. ಆರೋಗ್ಯ ಸುಧಾರಿಸಿದ್ದು, ಮಗಳು ಡಿಸ್ಚಾರ್ಜ್ ಆಗಿದ್ದಾಳೆ ಎಂದಿದ್ದಾರೆ. ಅಂದಹಾಗೆ, ಆಸ್ಪತ್ರೆಯಲ್ಲಿದ್ದ ವೇಳೆ ತಂಗಿ ಖುಷಿ ಕಪೂರ್ ಮತ್ತು ಜಾನ್ವಿ ಬಾಯ್ಫ್ರೆಂಡ್ ಶಿಖರ್ ಅವರನ್ನು ನೋಡಿಕೊಂಡಿದ್ದಾರೆ.