ಕಾಲಿವುಡ್ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ಇದೇ ಮೊದಲ ಬಾರಿಗೆ ಅಭಿಮಾನಿಯ ವಿರುದ್ಧ ಬಹಿರಂಗವಾಗಿ ಗರಂ ಆಗಿದ್ದಾರೆ. ಇದೇ ರೀತಿ ಮಾಡ್ತಾ ಇದ್ದರೆ ನಿಮ್ಮ ಮೊಬೈಲ್ ಒಡೆದು ಹಾಕ್ತೀನಿ ಎಂದು ಎಚ್ಚರಕೆ ನೀಡಿದ್ದಾರೆ. ಸದ್ಯ ನಯನತಾರಾ ಕೋಪ ಮಾಡಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇತ್ತೀಚೆಗಷ್ಟೇ ನಟಿ ನಯನತಾರಾ ಪತಿ ವಿಘ್ನೇಶ್ ಶಿವನ್ ಜೊತೆ ಕುಂಭಕೋಣಂ ಬಳಿಯ ಕಾಮಾಕ್ಷಿ ಅಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ನೆಚ್ಚಿನ ನಟಿ ಬಂದಿರುವ ವಿಚಾರ ಸ್ಥಳೀಯರಿಗೆ ತಿಳಿಯುತ್ತಿದ್ದಂತೆಯೇ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ. ಈ ವೇಳೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಶಾಂತವಾಗಿ ಇರುವಂತೆ ಎಷ್ಟೇ ಮನವಿ ಮಾಡಿದರೂ ಅಭಿಮಾನಿಗಳು ಕೇಳದಿದ್ದಾಗ ಅನಿವಾರ್ಯವಾಗಿ ಗರಂ ಆಗಿದ್ದಾರೆ.
ಸೆಲ್ಪಿ ತೆಗೆದುಕೊಳ್ಳಲು ಎಲ್ಲರೂ ಸಾಲಾಗಿ ಬರುವಂತೆ ಮನವಿ ಮಾಡಿಕಪಂಡರು ಅಭಿಮಾನಿಗಳು ಕೇಳಿಲ್ಲ. ಪರಿಸ್ಥಿತಿಯನ್ನು ಅರಿತ ಅವರು ಸಮಾಧಾನ ಮಾಡಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಹಾಗಾಗಿ ತರಾತುರಿಯಲ್ಲಿ ಪೂಜೆ ಮುಗಿಸಿ ಹೊರಟಿದ್ದಾರೆ. ಈ ಸಂದರ್ಭದಲ್ಲಿ ವಿಡಿಯೋ ಮಾಡುತ್ತಾ ಬಂದ ಅಭಿಮಾನಿಯ ವಿರುದ್ಧ ಗರಂ ಆದ ನಯನಾ, ಮೊಬೈಲ್ ಒಡೆದು ಹಾಕುವುದಾಗಿ ಎಚ್ಚರಿಸಿದ್ದಾರೆ.
ನಿರಂತರವಾಗಿ ಆ ಅಭಿಮಾನಿ ವಿಡಿಯೋ ಮಾಡುತ್ತಲೇ ಅವರ ಹಿಂದೆ ಸಾಗಿದ್ದಾನೆ. ಅದನ್ನು ಗಮನಿಸಿದ ನಯನತಾರಾ ಮೊದಲು ಮನವಿ ಮಾಡಿಕೊಂಡಿದ್ದಾರೆ. ವಿಡಿಯೋ ನಿಲ್ಲಿಸುವಂತೆ ಹೇಳಿದ್ದಾರೆ. ಅವನು ನಿಲ್ಲಿಸದೇ ಹೋದಾಗ ಖಡಕ್ ಆಗಿಯೇ ಎಚ್ಚರಿಕೆ ನೀಡಿದ್ದು ಆ ಬಳಿಕ ವಿಡಿಯೋ ಮಾಡುವುದನ್ನು ನಿಲ್ಲಿಸಿದ್ದಾನೆ.