ಕಂಪ್ಲಿ: ತಾಲೂಕಿನ ಪುರಸಭೆ ಚುನಾವಣಾಧಿಕಾರಿಗಳ ಕಛೇರಿಯಲ್ಲಿ 91-ಕಂಪ್ಲಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ರಾಜುನಾಯಕ ಅವರು ಚುನಾವಣಾಧಿಕಾರಿ ಡಾ.ಎನ್.ನಯನ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಿದರು.ಉದ್ಭವ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಎತ್ತಿನಬಂಡಿಗಳ ಮೂಲಕ ಪ್ರಮುಖ ರಸ್ತೆಗಳಲ್ಲಿ ತಾಷ ರಂಡೋಲ್ ಕಲಾ ತಂಡಗಳ ಹಾಗೂ ಅಪಾರ ಕಾರ್ಯಕರ್ತರೊಂದಿಗೆ ಪುರಸಭೆ ಕಛೇರಿಗೆ ತೆರಳಿ ನಾಮ ಪತ್ರ ಸಲ್ಲಿಸಿದರು. ಸೂಚಕರಾಗಿ ವಿಧಾನ ಪರಿಷತ್ ಸದಸ್ಯಟಿ.ಎ.ಶರವಣ,ದೇವೆಂದ್ರಗೌಡ,ಹೇಮಯ್ಯಸ್ವಾಮಿ,ಹೇಮರೆಡ್ಡಿ,ಇದ್ದರು.
ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿ ಕುಮಾರಸ್ವಾಮಿ, ಜೆಡಿಎಸ್ಗೆ ಬಲತುಂಬುವ ಕಾರ್ಯದಲ್ಲಿ ಹಗಲು ರಾತ್ರಿಯನ್ನೇ ಶ್ರಮ ಹಾಕುವ ಮೂಲಕ ಪಕ್ಷ ಸಂಘಟಿಸುತ್ತಿದ್ದಾರೆ. ಆ ಮೂಲಕ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಹೊಸ ಹುರುಪು ಮೂಡಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.ರಾಷ್ಟ್ರೀಯ ಪಕ್ಷಗಳಿಂದ ಸಮಾನ ದೂರ ಕಾಯ್ದುಕೊಂಡಿರುವ ಜೆಡಿಎಸ್, ಆರೋಪ ಮತ್ತು ಪ್ರತ್ಯಾರೋಪಗಳಿಗಿಂತ ಹೆಚ್ಚಾಗಿ ಜನರ ಸಮಸ್ಯೆ ಆಲಿಸಿ ಪರಿಹಾರ ರೂಪಿಸುವ ಕಡೆಗೆ ಗಮನ ಹರಿಸಿರುವುದು ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಪಂಚರತ್ನ ರಥಯಾತ್ರೆಗೆ ದೊರೆಯುತ್ತಿರವ ಜನ ಬೆಂಬಲವನ್ನು ಗಮನಿಸಿದರೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಾಕಿಕೊಂಡಿರುವ ನಿಗದಿತ ಗುರಿಯನ್ನು ಜೆಡಿಎಸ್ ತಲುಪತ್ತೇವೆ ಎಂದರು.
ನಾಮಪತ್ರ ಸಲ್ಲಿಸಿದ ನಂತರ ಕಂಪ್ಲಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ರಾಜುನಾಯಕ ಮಾತನಾಡಿ, ರೈತರ ಪರ ಕೆಲಸ ಮಾಡುವ ಪಕ್ಷವಾಗಿದ್ದು ರಾಜ್ಯದಲ್ಲಿ ಸಾಲಮನ್ನ ಮಾಡಿದ ಜೆಡಿಎಸ್ ಅವಧಿಯ ಸರ್ಕಾರ ಭ್ರಷ್ಟಾಚಾರರಹಿತ ಆಡಳಿತ ನೀಡುವುದು ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯ. ಕನ್ನಡಿಗರ ಪಕ್ಷವಾದ ಜೆಡಿಎಸ್ನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು, ಮುಖಂಡರು ಶ್ರಮಿಸಬೇಕಿದೆ ಎಂದರು.
ನಂತರ ಜೆಡಿಎಸ್ ಬಳ್ಳಾರಿ ಜಿಲ್ಲಾ ಗೌರವಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಮಾತನಾಡಿ, ಕಂಪ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಕಳೆದ 15 ವರ್ಷದಿಂದ ಉತ್ತಮ ನಾಯಕನ ಕೊರತೆ ಕಾಡುತ್ತಿತ್ತು. ಈ ಬಾರಿಯ ಚುನಾವಣೆಯಲ್ಲಿ ಜನ ಸೇವೆ ಮಾಡುವ ಹಂಬಲ ಹೊತ್ತಿರುವ ರಾಜು ನಾಯಕ ಅಭ್ಯರ್ಥಿಯಾಗಿರುವುದು ಸಂತಸ ತಂದಿದೆ. ಕ್ಷೇತ್ರದ ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿಗಾಗಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷದ ಸಂಘಟನೆ ಗಟ್ಟಿಗೊಳಿಸಲು ಹಾಗೂ ಜನರಿಗೆ ಪಕ್ಷದ ಪಂಚರತ್ನ ಯೋಜನೆಯ ಕುರಿತು ತಿಳಿಸಲು ಮುಂದಾಗಬೇಕು.ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಯೋಜನೆಗಳನ್ನು ಅನುಷ್ಟಾನಗೊಳಿಸಲು ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ನೀಲಿನಕ್ಷೆ ತಯಾರಿಸಿದ್ದಾರೆ. ಕಂಪ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಸ್ಪರ್ಧಿಸಿರುವ ಅಭ್ಯರ್ಥಿ ರಾಜುನಾಯಕರನ್ನು ಗೆಲ್ಲಿಸಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜುನಾಯಕ ಪತ್ನಿ ದೀಪಶ್ರೀರಾಜುನಾಯಕ,ತಮ್ಮನಪತ್ನಿ ರುಕ್ಮಿಣಿಕೃಷ್ಣನಾಯಕ ರೈತ ಮುಖಂಡ ಬಿ.ವಿ.ಗೌಡ ಜನತಾದಳ(ಜಾತ್ಯಾತೀತ) ಪಕ್ಷದ ಮುಖಂಡರಾದ ಆಯೋಧಿವೆಂಕಟೇಶ್,ಅಂಬಣ್ಣ ,ಜಗದೀಶಪೂಜಾರ,ಇರ್ಫಾನ,ಮುಜಾಹಿದ್ ಉಪಸ್ಥಿತರಿದ್ದರು.ಐಟಿಬಿಪಿ ಭದ್ರತಾ ಪಡೆ ಹಾಗೂ ಪೊಲೀಸ್ ಇಲಾಖೆಯಿಂದ ಬಿಗಿಬಂದೋಬಸ್ತ್ ಏರ್ಪಡಿಸಲಾಗಿತ್ತು. ಬಂದೋಬಸ್ತ್ ನಲ್ಲಿ ಪಿಐ ಸುರೇಶ ತಳವಾರ,ಪಿಎಸ್ಐಗಳಾದ ವಿಜಯಪ್ರತಾಪ,ಶಾರವ್ವ ದೊಡ್ಡಾಣಿ ಪಾಲ್ಗೊಂಡಿದ್ದರು.