ರಾಮನಗರ: ಜಿಲ್ಲೆ ಮರುನಾಮಕರಣಕ್ಕೆ ವಿರೋಧ ಮಾಡುತ್ತಿರುವುದು ಜೆಡಿಎಸ್ನವರಲ್ಲ ಬದಲಾಗಿ ಹಾಸನದವರು ಎಂದು ಪರೋಕ್ಷವಾಗಿ ಕುಮಾರಸ್ವಾಮಿಗೆ ಮಾಗಡಿ ಶಾಸಕ ಹೆಚ್ಸಿ ಬಾಲಕೃಷ್ಣ ತಿರುಗೇಟು ನೀಡಿದ್ದಾರೆ.
ಜಿಲ್ಲೆ ಮರುನಾಮಕರಣಕ್ಕೆ ಜೆಡಿಎಸ್ ವಿರೋಧ ವಿಚಾರ ಕುರಿತು ಮಾಗಡಿಯಲ್ಲಿ ಮಾತನಾಡಿದ ಅವರು, ಹಾಸನದವರಿಗೆ ಬೆಂಗಳೂರಿನ ಗಮ್ಮತ್ತು ಗೊತ್ತಿಲ್ಲ. ಆದ್ದರಿಂದ ಇದಕ್ಕೆ ವಿರೋಧ ಮಾಡುತ್ತಿದ್ದಾರೆ. ನಮಗೂ ಬೆಂಗಳೂರಿಗೂ ಅವಿನಾಭಾವ ಸಂಬಂಧ ಇದೆ. ನಾವು ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯವರೇ. ರಾಮನಗರವೇ ಜಿಲ್ಲಾ ಕೇಂದ್ರವಾಗಿರುತ್ತದೆ. ಆದರೆ ಬೆಂಗಳೂರು ದಕ್ಷಿಣ ಎಂಬ ಹೆಸರು ಬದಲಾವಣೆಗೆ ಮನವಿ ಮಾಡಿದ್ದೇವೆ ಎಂದರು.