ಶಿವಮೊಗ್ಗ: ಕುಮಾರಸ್ವಾಮಿ ಹೋದ ಕಡೆಯಲ್ಲಾ ಜನರು ಸೇರುತ್ತಾರೆ, ಆದ್ರೆ ಅದು ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆಯಾಗುವುದಿಲ್ಲ ಎಂಬ ಮಾತು ಈ ಚುನಾವಣೆಯಲ್ಲಿ ಬದಲಾಗಲಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಹೇಳಿದ್ದಾರೆ, 2008ರ ಬಳಿಕ ಮೊದಲ ಬಾರಿಗೆ ಜೆಡಿಎಸ್ ಪಕ್ಷ ಚುನಾವಣೆಗೆ ಮುನ್ನ ಪಕ್ಷ ಸಂಘಟನೆ ಮಾಡುತ್ತಿದ್ದು, ನಮ್ಮ ಪಂಚರತ್ನ ಯೋಜನೆಯ ಐದು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ರಾಜ್ಯದ ಜನತೆ ಜೆಡಿಎಸ್ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ನೀಡುವಂತೆ ಮನವಿ ಮಾಡಿದ್ರು.
ಕಳೆದ ಎರಡು ದಿನಗಳಿಂದ ರಾಜ್ಯ ಬಿಜೆಪಿಯ ಭದ್ರಕೋಟೆ ಶಿವಮೊಗ್ಗದಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆ ಜೆಡಿಎಸ್ ನಾಯಕರ ನಿರೀಕ್ಷೆಗಿಂತ ಅಧಿಕವಾಗಿ ಜನರು ಸೇರುತ್ತಿರುವ ಕಾರಣ ಭರ್ಜರಿ ರೆಸ್ಪಾನ್ಸ್ ದೊರಕಿದೆ.. ಪಂಚ ರತ್ನ ರಥಯಾತ್ರೆ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ಮುನ್ನಡೆಯುತ್ತಿರುವ ಮಾಜಿ ಸಿಎಂ ಸ್ವಾಮಿಯವರಿಗೆ ತಾವು ಭೇಟಿ ನೀಡುತ್ತಿರುವ ಗ್ರಾಮಗಳಲ್ಲಿ ಅದ್ಬುತ ಮನ್ನಣೆ ದೊರೆಯುತ್ತಿದೆ..ಬಿಎಸ್ ಯಡಿಯೂರಪ್ಪ,ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವು ಘಟಾನುಘಟಿ ನಾಯಕರ ತವರೂರಲ್ಲಿ ಪಂಚರತ್ನ ಯಾತ್ರೆ ಮೂಲಕ ಜೆಡಿಎಸ್ ದಳಪತಿ ಮತಬೇಟೆ ಮಾಡುತ್ತಿದ್ದು ಬಿಜೆಪಿ ನಾಯಕರ ನಿದ್ದೆಗೆಡಿಸಿದೆ. ಶಿವಮೊಗ್ಗದ ಮಲವಗೊಪ್ಪದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿಯವರು .. ನಾನು ಕಳೆದ 70 ದಿನಗಳಿಂದ ಪಂಚರತ್ನ ಯಾತ್ರೆ ಮಾಡುತ್ತಿದ್ದೇನೆ ಪಂಚರತ್ನ ರಥಯಾತ್ರೆ ಮೂಲಕ ಹಳ್ಳಿಗಳ ನಿಜವಾದ ಚಿತ್ರಣದ ಮಾಹಿತಿ ಪಡೆಯಲು ಸಹಕಾರಿಯಾಗಿದೆ..ನಮ್ಮ ಐದು ಕಾರ್ಯಕ್ರಮಗಳನ್ನು ಅನುಷ್ಠಾನ ತರಲು ನಮಗೆ ಮತ ನೀಡಿ ಎಂದು ಕೇಳುತ್ತಿದ್ದೇವೆ.. ನಮ್ಮ ರಥಯಾತ್ರದ ಬಗ್ಗೆಪ್ರಹ್ಲಾದ್ ಜೋಶಿ ಹಾಗೂ ಕಾಂಗ್ರೇಸ್ ನವರು ಲೇವಡಿ ಮಾಡಿದ್ದಾರೆ ಅದಕ್ಕೆ ಚುನಾವಣೆಯಲ್ಲಿ ಉತ್ತರ ನೀಡಲಾಗುತ್ತದೆ ಎಂದು.
ಇನ್ನು ಬಿಜೆಪಿ ಪಕ್ಷ ಜಲ ಮೀಷನ್ ಯೋಜನೆಯ ಜಾರಿಗೆ ತಂದಿದ್ದರು, ಯಾವುದೇ ಪ್ರಯೋಜನವಾಗಿಲ್ಲ, ರಾಣೆಬೆನ್ನೂರು ಭಾಗದಲ್ಲಿ ಜಲಮಿಷನ್ ಯೋಜನೆ ಪೈಪ್ ಗಳಲ್ಲಿ ನೀರುಬಾರದೆ ಎಷ್ಟು ವರ್ಷಗಳಾಯಿತು,ಜಲಮೀಷನ್ ಹೆಸರಿನಲ್ಲಿ ಚನ್ನಾಗಿದ್ದ ಕಾಂಕ್ರೀಟ್ ರಸ್ತೆಯನ್ನು ಹಾಳು ಮಾಡಿದ್ದಾರೆ, ಪ್ರತಿ ನಿತ್ಯ ನನ್ನ ಬಳಿ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿರುವ ನೂರಾರು ಜನರು ಬರುತ್ತಾರೆ, ಅವರೆಲ್ಲರ ಚಿಕಿತ್ಸೆ ಒಂದುವರೆ ಕೋಟಿಯಷ್ಟು ಆಗುತ್ತೆ, ಅಷ್ಟುಂದು ಹಣ ನಾನು ಎಲ್ಲಿಂದ ಕ್ರೋಡೀಕರಿಸಲಿ, ನಾನೇನು ಶಿಕ್ಷಣ ಸಂಸ್ಥೆಗಳನ್ನು ಮಾಡಿಲ್ಲ. ನನ್ನ ಬಳಿ 45 ಎಕರೆ ಜಮೀನು ಇದೆ ಅದಕ್ಕೂ ನೂರಾರು ಸಮಸ್ಯೆಗಳಿದೆ,ನಾನೆ ಮುಖ್ಯಮಂತ್ರಿಯಾಗಿದ್ದರು ನನ್ನ ಜಮೀನು ಸಮಸ್ಯೆ ಬಗೆ ಹರಿಸಿಕೊಳ್ಳಲು ಸಾಧ್ಯವಾಗಿಲ್ಲ. ಪ್ರತಿಯೊಂದು ಗ್ರಾಮಪಂಚಾಯ್ತಿಯಲ್ಲಿ ಅಸ್ಪತ್ರೆಗಳನ್ನು ತೆರೆಯುವ ಮೂಲಕ ಚಿಕಿತ್ಸೆ ನೀಡಲಾಗುತ್ತೆ ಎಂದು..ಇದೇ ವೇಳೆ ..ನಮ್ಮಪಕ್ಷವನ್ನು ಬಿಜೆಪಿ ಕಾಂಗ್ರೇಸ್ ನವರು ಬಿ ಟೀ ಎಂದು ಹೆಳುತ್ತಾರೆ. ನಾವು ನಾಡಿನ ಜನತೆಯ ಬಿ ಟೀಮ್..ಯಾವ ಪಕ್ಷಗಳ ಬಿ ಟೀಮ್ ಅಲ್ಲ.. ಚುನಾವಣೆ ಮುಗಿದ ಬಳಿಕ ನಮ್ಮನ್ನು ಅವರು ಹುಡುಕಿಕೊಂಡು ಬರುತ್ತಾರೆ , ನಾವು ಅವರನ್ನು ಹುಡುಕಿಕೊಂಡು ಹೋಗಿಲ್ಲ.
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ಲಕ್ಷಾಂತ ಕೋಟಿ ಸಾಲ ಮಾಡಿದ್ದಾರೆ.ಪ್ರತಿ ವರ್ಷ ಮಾಡಿರುವ ಸಾಲಕ್ಕೆ 38 ಸಾವಿರ ಕೋಟಿ ಬಡ್ಡಿ ಕಟ್ಟಲಾಗುತ್ತಿದೆ, ಈ ಕ್ರೆಡಿಟ್ ಅನ್ನು ಎರಡು ರಾಷ್ಟ್ರೀಯ ಪಕ್ಷಗಳು ಪಡೆಯಬೇಕು. ಮತಪಡೆಯಲಿಕ್ಕೆ ರಾಷ್ಟ್ರೀಯ ಪಕ್ಷಗಳು ಹಲವರು ಘೋಷಣೆ ಮಾಡುತ್ತಿದ್ದಾರೆ.. ಇವೆಲ್ಲವು ರಾಜ್ಯದ ಭೋಕ್ಕಸಕ್ಕೆ ನಷ್ಟ ಮಾಡುವಂತಹ ಯೋಜನೆಗಳು ಮತದಾರರು ಎಚ್ಚರದಿಂದ ಇರಬೇಕು ಎಂದ್ರು..ಜೊತೆಗೆ ಐಎಎಸ್ ಅಧಿಕಾರಿಗಳ ವರ್ಗಾವಣೆ ವಿಚಾದರ ಬಗ್ಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ರೋಹಿಣಿ ಸಿಂಧೂರಿ ಹಾಗೂ ರೂಪ ಅವರನ್ನ ಸಸ್ಪೆಂಡ್ ಮಾಡಬೇಕು ಎಂದ್ರು.
ಒಟ್ಟಾರೆ ಶಿವಮೊಗ್ಗದಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆಗೆ ಅತ್ಯದ್ಭುತ ರೆಸ್ಪಾನ್ಸ್ ದೊರೆಯುತ್ತಿದೆ..ಒಂದು ವಾರದಲ್ಲಿ ಹಾಸನ ಸೇರಿದಂತೆ ರಾಜ್ಯದ ಕೆಲವು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳನನ್ನು ಪ್ರಕಟ ಮಾಡಲಾಗುತ್ತಿದ್ದು ಜನರು ಈ ಬಾರಿ ಜೆಡಿಎಸ್ ಪಕ್ಷಕ್ಕೆ ಕೈ ಹಿಡಿಯಬೇಕೆಂದು ಮನವಿ ಮಾಡಿದ್ರು.