ಜಿಯೋ ತನ್ನ ಬಳಕೆದಾರರಿಗೆ ಜುಲೈ 3 ರಿಂದ ಜಾರಿಗೆ ಬರುವಂತೆ ಹಲವು ಹೊಸ ಅನಿಯಮಿತ ಯೋಜನೆ ಪ್ರಕಟಿಸಿದೆ
ಹೊಸ ಯೋಜನೆಗಳ ಮೂಲಕ ಕಡಿಮೆ ದರಕ್ಕೆ ಇಂಟರ್ನೆಟ್ ಸೇವೆ ಒದಗಿಸುವ ತನ್ನ ಬದ್ಧತೆಯನ್ನು ಕಂಪನಿ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಭಾರತದಲ್ಲಿ ತನ್ನ 5ಜಿ ಸಂಪರ್ಕವು ಬಹಳ ವೇಗವಾಗಿ ಬೆಳೆಯುತ್ತಿದ್ದು 85% ಪ್ರದೇಶಗಳಿಗೆ ತಲುಪಿದೆ ಎಂದು ತಿಳಿಸಿದೆ.
ತಿಂಗಳ ಯೋಜನೆ 189 ರೂ.ಗೆ 2ಜಿಬಿ ಇದ್ದು ವಾರ್ಷಿಕ ಯೋಜನೆ 3,599 ರೂ. ದಿನಕ್ಕೆ 2.5 ಜಿಬಿ ಡೇಟಾ ಸಿಗಲಿದೆ. ದಿನಕ್ಕೆ 2 ಜಿಬಿ ಮತ್ತು ಅದಕ್ಕಿಂತ ಹೆಚ್ಚಿನ 5ಜಿ ಡೇಟಾದ ಎಲ್ಲಾ ಯೋಜನೆಗಳನ್ನೂ ಇದು ಒಳಗೊಂಡಿದೆ.
ಅನಿಯಮಿತ 5ಜಿ ಡೇಟಾ ಸೇವೆಯು ದಿನಕ್ಕೆ 2 ಜಿಬಿ ಅಥವಾ ಅದಕ್ಕಿಂತ ಹೆಚ್ಚಿನದ್ದಕ್ಕೆ ಅನ್ವಯಿಸುತ್ತದೆ ಎಂದು ಕಂಪನಿ ತಿಳಿಸಿದೆ
ಗರಿಷ್ಠ ಗುಣಮಟ್ಟದ, ಕೈಗೆಟಕುವ ಇಂಟರ್ನೆಟ್ ಸೌಲಭ್ಯವು ಡಿಜಿಟಲ್ ಇಂಡಿಯಾದ ಬೆನ್ನೆಲುಬಾಗಿದೆ. ಇದಕ್ಕೆ ಹೆಚ್ಚಿನ ಕೊಡುಗೆ
ನೀಡುತ್ತಿರುವುದಕ್ಕೆ ಜಿಯೋ ಹೆಮ್ಮೆಪಡುತ್ತದೆ. ನಮ್ಮ ದೇಶ ಮತ್ತು ಗ್ರಾಹಕರು ಕಂಪನಿಯ ಆದ್ಯತೆಯಾಗಿದೆ. ಭಾರತಕ್ಕಾಗಿ ಹೂಡಿಕೆ ಮಾಡುವುದನ್ನು ಕಂಪನಿ ಮುಂದುವರಿಸಲಿದೆ ಎಂದು ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಎಂ. ಅಂಬಾನಿ ಹೇಳಿದರು.
ದೇಶದಲ್ಲಿ ಡೇಟಾ ಬಳಕೆ ಮತ್ತು ಸ್ಮಾರ್ಟ್ಫೋನ್ ಬಳಕೆ ಹೆಚ್ಚಿಸಲು ಜಿಯೋ ಕಂಪನಿಯು ಮಹತ್ವದ ಕೊಡುಗೆ ನೀಡುತ್ತಿದೆ. ಕಂಪನಿಯುಜ ದೂರಸಂಪರ್ಕ ಕ್ಷೇತ್ರಕ್ಕೆ ಕಾಲಿಟ್ಟಿದ್ದರಿಂದ ಪ್ರತಿಸ್ಪರ್ಧಿ ಕಂಪನಿಗಳು ರಿಚಾರ್ಜ್ ದರ ತಗ್ಗಿಸುವಂತೆ ಮತ್ತು ಡೇಟಾ ಕೊಡುಗೆಯಲ್ಲಿ ಸುಧಾರಣೆ