ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ದಿನಾಂಕ 20-02-2024 ರಂದು ಅಧಿಸೂಚಿಸಲಾಗಿತ್ತು. ಆದರೆ ಅರ್ಜಿ ಲಿಂಕ್ ಅನ್ನು ಈವರೆಗೆ ಬಿಡುಗಡೆ ಮಾಡಿರಲಿಲ್ಲ. ಏಪ್ರಿಲ್ 05 ರಂದು ಆನ್ಲೈನ್ ಅರ್ಜಿಗೆ ಲಿಂಕ್ ಹಾಗೂ ಅರ್ಜಿ ಸಲ್ಲಿಸಲು ಹೊಸ ವೇಳಾಪಟ್ಟಿ ಎರಡನ್ನೂ ಬಿಡುಗಡೆ ಮಾಡಿದೆ. ದ್ವಿತೀಯ ಪಿಯುಸಿ ಮುಗಿಸಿ ಸರ್ಕಾರಿ ಹುದ್ದೆಗಾಗಿ ಮುನ್ನೋಡುತ್ತಿರುವ ಆಕಾಂಕ್ಷಿಗಳು ಈಗ ತಪ್ಪದೇ ಆನ್ಲೈನ್ ಅರ್ಜಿ ಸಲ್ಲಿಸಿ.
ಗ್ರಾಮ ಆಡಳಿತ ಅಧಿಕಾರಿ ಅರ್ಜಿಗೆ ಹೊಸ ವೇಳಾಪಟ್ಟಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 05-04-2024
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 04-05-2024
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 07-05-2024 (ಬ್ಯಾಂಕ್ ಕೆಲಸದ ವೇಳೆ ವರೆಗೆ)
ಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಹಾಕುವ ವಿಧಾನ.
– ಮುಖಪುಟದಲ್ಲಿ ನೇಮಕಾತಿ>> ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ-2024′ ಆಯ್ಕೆ ಮಾಡಿ ಕ್ಲಿಕ್ ಮಾಡಿ.
– ಕೆಇಎ’ಯ ಮತ್ತೊಂದು ವೆಬ್ಪುಟ ತೆರೆಯುತ್ತದೆ.
– ‘VA ನೇಮಕಾತಿ ಆನ್ಲೈನ್ ಅರ್ಜಿ ಸಲ್ಲಿಕೆ ಲಿಂಕ್’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ಈ ಹಂತದಲ್ಲಿ ತೆರೆದ ಪುಟದಲ್ಲಿ ಮೊದಲಿಗೆ ಅರ್ಜಿ ಸಲ್ಲಿಸಲು ನೀಡಲಾದ ಲಿಂಕ್ ಕ್ಲಿಕ್ ಮಾಡಿ.
– ಪ್ರಸ್ತುತ ತೆರೆಯುವ ವೆಬ್ಪೇಜ್ನಲ್ಲಿ ಕೇಳಲಾದ ವಿವರಗಳನ್ನು ನೀಡಿ ಅರ್ಜಿ ಸಲ್ಲಿಸಿ.
– ನಂತರ ನಿಮ್ಮ ಭಾವಚಿತ್ರ ಅಪ್ಲೋಡ್ ಮಾಡಬೇಕು.
– ಮುಂದಿನ ಹಂತದಲ್ಲಿ ಶುಲ್ಕ ಪಾವತಿ ಮಾಡಬೇಕು. ಶುಲ್ಕ ಪಾವತಿ ಯಶಸ್ವಿಯಾದ ನಂತರ ಅರ್ಜಿ ಪ್ರಿಂಟ್ ತೆಗೆದುಕೊಳ್ಳಬಹುದು.
ಅರ್ಜಿ ಶುಲ್ಕ ವಿವರ
ಸಾಮಾನ್ಯ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.750.
ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ವಿಕಲ ಚೇತನ ಅಭ್ಯರ್ಥಿಗಳಿಗೆ ರೂ.500.
ಹುದ್ದೆ ಹೆಸರು : ಗ್ರಾಮ ಆಡಳಿತ ಅಧಿಕಾರಿ (VA – ಗ್ರಾಮ ಲೆಕ್ಕಿಗ)
ಹುದ್ದೆಗಳ ಸಂಖ್ಯೆ : 1000
ವೇತನ ಶ್ರೇಣಿ : Rs.21400-42000.
ಪಿಂಚಣಿ ಸೌಲಭ್ಯ : ಪಿಂಚಣಿ ರಹಿತ (ಎನ್ಪಿಎಸ್).
ವಿದ್ಯಾರ್ಹತೆ
ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆ ಪಾಸ್. ಅಥವಾ
ಸಿಬಿಎಸ್ಇ /ಎನ್ಐಓಎಸ್ ನಡೆಸುವ ಹೆಚ್ಎಸ್ಸಿ / ಐಸಿಎಸ್ಇ ನಡೆಸುವ 12ನೇ ತರಗತಿ ಪಾಸ್ ಅರ್ಹತೆ. ಅಥವಾ
3 ವರ್ಷಗಳ ಡಿಪ್ಲೊಮ ಅಥವಾ 2 ವರ್ಷಗಳ ಐಟಿಐ ಕೋರ್ಸ್ ಅಥವಾ 2 ವರ್ಷಗಳ ಯಾವುದೇ ವೃತ್ತಿ ಶಿಕ್ಷಣ ಡಿಪ್ಲೊಮ (ಜೆಓಸಿ / ಜೆಓಡಿಸಿ /