ಅಮೆರಿಕಾ ಮೂಲದ ಕಂಪನಿ ಜಾನ್ಸನ್ ಎಂಡ್ ಜಾನ್ಸನ್ ಕಂಪನಿಯ ಬೇಬಿ ಪೌಡರ್ ಕ್ಯಾನ್ಸರ್ಗೆ ಕಾರಣವೆಂದು ಆರೋಪಿಸಿರುವ ಸಾವಿರಾರು ಸಂತ್ರಸ್ತರಿಗೆ 8.9 ಬಿಲಿಯನ್ ಡಾಲರ್ ಪರಿಹಾರ ಪಾವತಿಸಲು ಕಂಪನಿ ಒಪ್ಪಿಕೊಂಡಿದೆ.
ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಟಾಲ್ಕ್ ಉತ್ಪನ್ನಗಳನ್ನು ಬಳಸುವುದರಿಂದ ತಾವು ಅಂಡಾಶಯದ ಕ್ಯಾನ್ಸರ್ ಪೀಡಿತರಾಗಿದ್ದೇವೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದು, ಈ ಮಹಿಳೆಯ ಪರವಾಗಿ ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪನ್ನು ಪರಿಶೀಲಿಸಬೇಕು ಅಥವಾ ರದ್ದು ಪಡಿಸಬೇಕು ಎಂದು ಜಾನ್ಸನ್ ಮತ್ತು ಜಾನ್ಸನ್ ಕಂಪನಿಯು ಅಮೆರಿಕ ಸುಪ್ರೀಂ ಕೋರ್ಟ್ಗೆ ಪರಿಶೀಲನಾ ಅರ್ಜಿ ಸಲ್ಲಿಸಿತ್ತು.
ಪ್ರಕರಣದಲ್ಲಿ ಉನ್ನತ ಮಟ್ಟದ ವಕೀಲರು ವಾದ-ಪ್ರತಿವಾದ ಮಂಡಿಸಿದ್ದು, ಅಸಾಮಾನ್ಯ ಮೈತ್ರಿಗಳಲ್ಲಿ, ಮಾಜಿ ಸ್ವತಂತ್ರ ಸಲಹೆಗಾರ ಕೆನ್ನೆತ್ ಸ್ಟಾರ್ ಸೇರಿದಂತೆ ಹಲವಾರು, ಜಾನ್ಸನ್ ಆ್ಯಂಡ್ ಜಾನ್ಸನ್ ವಿರುದ್ಧ ಮೊಕದ್ದಮೆ ಹೂಡಿದ ಮಹಿಳೆಯ ಪರ ನಿಂತಿದ್ದರು.
ಪೌಡರ್ ಬಳಕೆಯಿಂದ ಆಗುವ ಹಾನಿಯ ಕುರಿತು ಕಂಪನಿಗೆ ಗೊತ್ತಿದ್ದರು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಈ ಉತ್ಪನ್ನಗಳ ಸುರಕ್ಷತೆಯನ್ನು ದಶಕಗಳಿಂದ ತಪ್ಪಾಗಿ ನಿರೂಪಿಸಲಾಗಿದೆ ಎಂದು ಬರ್ಲಿಸನ್ ತಮ್ಮ ತೀರ್ಪಿನಲ್ಲಿ ತಿಳಿಸಿದ್ದರು. ಇದೀಗ ಕಂಪೆನಿ ಸಂತ್ರಸ್ತರಿಗೆ 8.9 ಬಿಲಿಯನ್ ಡಾಲರ್ ಪರಿಹಾರ ನೀಡುವುದಾಗಿ ಘೋಷಿಸಿದೆ. ಸಂಸ್ಥೆಯು ಎಂದಿಗೂ ತಪ್ಪನ್ನು ಒಪ್ಪಿಕೊಂಡಿರಲಿಲ್ಲ. ಆದರೆ ಮೇ 2020 ರಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ಅದರ ಟಾಲ್ಕ್ ಆಧಾರಿತ ಬೇಬಿ ಪೌಡರ್ ಮಾರಾಟವನ್ನು ನಿಲ್ಲಿಸಿದೆ.