ಒಟ್ಟಾವಾ: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂದು ಆರೋಪಿಸಿ ವಿವಾದಕ್ಕೆ ಸಿಲುಕಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಜನಪ್ರಿಯತೆ ಕುಸಿದಿರುವುದು ಸಮೀಕ್ಷೆಯಲ್ಲಿ ಕಂಡು ಬಂದಿದೆ.
ಕೆನಡಾದ 50 ವರ್ಷದ ರಾಜಕೀಯ ಇತಿಹಾಸದಲ್ಲಿ ಟ್ರುಡೊ ಅವರು ‘ಅತ್ಯಂತ ಕಳಪೆ ಪ್ರಧಾನಿ’ ಎಂಬುದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಜನರ ಅಭಿಪ್ರಾಯವಾಗಿದೆ
‘ಕೆನಡಾದ ಉತ್ತಮ ನಾಯಕರು ಯಾರು’, ‘ಮುಂದಿನ ಪ್ರಧಾನಿ ಯಾರಾಗಬೇಕು’ ಎಂಬ ಕುರಿತು ಇತ್ತೀಚಿಗೆ ನಡೆದ ಸಮೀಕ್ಷೆಯಲ್ಲಿ ಟ್ರುಡೊ ಅವರಿಗಿಂತ ಕನ್ಸರ್ವೇಟಿವ್ ಪಕ್ಷದ ಮುಖಂಡ ಹಾಗೂ ಕೆನಡಾದ ಪ್ರತಿಪಕ್ಷ ನಾಯಕ ಪಿಯರೆ ಪೊಯಿಲಿವ್ರೆ ಅವರೇ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಶೇ 40ರಷ್ಟು ಜನರು, ಪಿಯರೆ ತಮ್ಮ ಪ್ರಧಾನಿಯಾಗಬೇಕು ಎಂದು ಬಯಸಿದ್ದಾರೆ.
ಜನಮತ ಅಭಿಪ್ರಾಯದಲ್ಲಿ, ಈಗಲೇ ಚುನಾವಣೆ ನಡೆದರೆ ಪಿಯರೆ ಶೇ 39ರಷ್ಟು ಮತ ಗಳಿಸಿದರೆ, 2015ರಲ್ಲಿ ಚುನಾಯಿತರಾದ ಲಿಬರಲ್ ಪಕ್ಷದ ನಾಯಕ ಪ್ರಧಾನಿ ಟ್ರುಡೊ ಶೇ 30ರಷ್ಟು ಮತಗಳನ್ನು ಪಡೆದುಕೊಂಡಿದ್ದಾರೆ ಎಂದು ಕೆನಡಾ ಗ್ಲೋಬಲ್ ನ್ಯೂಸ್ ವರದಿ ಮಾಡಿದೆ.