ಬೆಂಗಳೂರು: ಐಎಎಸ್ ಅಧಿಕಾರಿ ಕಮ್ ‘ಬಾ ನಲ್ಲೆ ಮಧುಚಂದ್ರಕೆ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿರುವ ಕೆ.ಶಿವರಾಮ್ (K.Shivaram) ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅನಾರೋಗ್ಯದಿಂದಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು ಅವರನ್ನು ನೋಡಲು ಇಂದು (ಫೆಬ್ರವರಿ 29) ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಆಸ್ಪತ್ರೆಗೆ ಬಂದಿದ್ದರು
ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಫೆ.3ರಂದು ಕೆ.ಶಿವರಾಮ್ ಅವರನ್ನು ದಾಖಲಾಗಿದ್ದರು. ಕಳೆದ 6 ದಿನಗಳ ಹಿಂದೆ ಶಿವರಾಮ್ಗೆ ಹೃದಯಾಘಾತವಾಗಿದೆ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನಡೆಯುತ್ತಿದೆ ಎನ್ನಲಾಗಿದೆ. ಇದೀಗ ಮಾವನನ್ನು ನೋಡಲು ನಟ ಪ್ರದೀಪ್ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ, ಬಿಪಿ ಏರುಪೇರಾಗಿತ್ತು. ಈಗಲೂ ಅವರ ಬಿಪಿ ನಾರ್ಮಲ್ ಆಗ್ತಿಲ್ಲ. ಅವರ ಸ್ಥಿತಿ ಕ್ರಿಟಿಕಲ್ ಆಗಿದೆ ಎಂದು ನಟ ಪ್ರದೀಪ್ ಮಾಹಿತಿ ನೀಡಿದ್ದಾರೆ. ಅವರ ಆರೋಗ್ಯಕ್ಕಾಗಿ ಇಷ್ಟಪಡುವಂತಹ ಅಭಿಮಾನಿಗಳು ದೇವರನ್ನು ಪ್ರಾರ್ಥಿಸಿ ಎಂದು ಪ್ರದೀಪ್ ಮನವಿ ಮಾಡಿದ್ದಾರೆ.