ದಕ್ಷಿಣ ಭಾರತದ ಖ್ಯಾತಿ ನಟಿ ಕಾಜಲ್ ಅಗರ್ವಾಲ್ ಚಿತ್ರರಂಗದಲ್ಲಿ ಸಾಕಷ್ಟು ಭೇಡಿಕೆ ಕಾಯ್ದುಕೊಂಡಿದ್ದಾರೆ. ಮದುವೆಯಾಗಿ ಮಗುವಾದ ಬಳಿಕವೂ ನಟಿಗೆ ಕೊಂಚವೂ ಡಿಮ್ಯಾಂಡ್ ಕಮ್ಮಿಯಾಗಿಲ್ಲ.
ಮಗುವಾದ ಬಳಿಕ ಕೊಂಚ ದಿನಗಳ ಕಾಲ ಮಗನ ಆರೈಕೆಯಲ್ಲಿ ತೊಡಗಿಕೊಂಡಿದ್ದ ನಟಿ ಇದೀಗ ಮತ್ತೆ ಫೀಲ್ಡ್ ಗೆ ಎಂಟ್ರಿಕೊಟ್ಟಿದ್ದಾರೆ. ಮತ್ತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗೆ ನಟಿ ಬಣ್ಣ ಹಚ್ಚುತ್ತಿದ್ದಾರೆ.
ಸಾಮಾನ್ಯವಾಗಿ ಮದುವೆಯ ಬಳಿಕ ಮಗು ಪಡೆಯಲು ನಟಿಯರು ಕೆಲ ವರ್ಷ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಕಾಜೋಲ್ ಮದುವೆಯಾದ ಒಂದು ವರ್ಷದೊಳಗೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಕೆಲ ದಿನಗಳಲ್ಲಿಯೇ ಮತ್ತೆ ನಟನೆಗೆ ಕಂಬ್ಯಾಕ್ ಮಾಡಿದ್ದರು.
ಸದ್ಯ ತಾಯ್ತನವನ್ನು ಎಂಜಾಯ್ ಮಾಡುತ್ತಿರುವ ಕಾಜಲ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಆಗಾಗಿ ತಮ್ಮ ಹೊಸ ಹೊಸ ಫೋಟೋಗಳನ್ನು ಸಾಮಾಜಿಕ ಜಾಲಾ ತಾಣದಲ್ಲಿ ಶೇರ್ ಮಾಡುತ್ತಿರುತ್ತಾರೆ. ಅಮ್ಮನಾದರೂ ನಟಿಯ ಸೌಂದರ್ಯ ಕೊಂಚವೂ ಮಾಸದ್ದು ನೋಡಿ ಅಭೀಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ.
ಕೆಲವರು ನಿಮಗೆ 38 ವರ್ಷ ಎಂದು ನಂಬಲಾಗುತ್ತಿಲ್ಲ ಎಂದು ಕಮೆಂಟ್ ಹಾಕುತ್ತಿದ್ದಾರೆ. ಇನ್ನು ಕೆಲವರು ನೀವು ನಿಜವಾಗಿ ಮದುವೆಯಾಗಿದ್ದೀರಾ..? ಅಷ್ಟೊಂದು ಸುಂದರಿ ಎಂದು ಆಕೆಯ ಸೌಂದರ್ಯವನ್ನು ಹೊಗಳುತ್ತಿದ್ದಾರೆ. ನಟಿ ಆಕರ್ಷಕವಾದ ಹಳದಿ ಬಣ್ಣದ ಪ್ರಿಂಟೆಡ್ ಫ್ರಾಕ್ನಲ್ಲಿ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ.
ನಂದಮೂರಿ ಕಲ್ಯಾಣ್ ರಾಮ್ ನಟನೆಯ ಲಕ್ಷ್ಮಿ ಕಲ್ಯಾಣಂ ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿಕೊಟ್ಟ ಕಾಜಲ್ ಸ್ವಲ್ಪ ಸಮಯದಲ್ಲೇ ಸ್ಟಾರ್ ಪಟ್ಟಕೇರಿದರು. ಸಾಕಷ್ಟು ಖ್ಯಾತ ನಟರ ಜೊತೆ ಸ್ಕ್ರೀನ್ ಶೇರ್ ಮಾಡುವ ಮೂಲಕ ಸಾಕಷ್ಟು ಹೆಸರು ಮಾಡಿದರು.
2009 ರಲ್ಲಿ ರಾಮ್ ಚರಣ್ ತೇಜ್ ಜೊತೆ ರಾಜಮೌಳಿ ನಿರ್ದೇಶನದ ಮಗಧೀರ ಅವರ ವೃತ್ತಿಜೀವನದ ಮಹತ್ವದ ತಿರುವು ಆಯಿತು. ಕಾಜಲ್ ಟಾಲಿವುಡ್ನಲ್ಲಿ ಕ್ರೇಜಿ ಹೀರೋಯಿನ್ ಆಗಿದ್ದಾರೆ. ಆ ಸಿನಿಮಾ ಅವರ ವೃತ್ತಿ ಜೀವನದಲ್ಲಿಯೇ ಅತಿ ದೊಡ್ಡ ಹಿಟ್ ಆಗಿ ಹೊರ ಹೊಮ್ಮಿತು. ಸಿನಿಮಾ ಬ್ಲಾಕ್ ಬಸ್ಟರ್ ಎನಿಸಿಕೊಂಡಿತು.
ಇತ್ತೀಚೆಗೆ ಭಗವಂತ್ ಕೇಸರಿ ಚಿತ್ರದಲ್ಲಿ ನಟಿಸಿದ್ದ ಕಾಜಲ್ ಮದುವೆಯ ನಂತರವೂ ಸಿನಿಮಾ ಮಾಡುತ್ತಿದ್ದಾರೆ. ಪ್ರಸ್ತುತ ಅವರ ಕೈಯಲ್ಲಿ ಇಂಡಿಯನ್ 2 ಸೇರಿದಂತೆ ಕೆಲವು ಚಿತ್ರಗಳಿವೆ. ಕಾಜಲ್ ಬೆಳ್ಳಿತೆರೆಗೆ ಕಮ್ ಬ್ಯಾಕ್ ಮಾಡಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ನಟಿ ಕಮ್ ಬ್ಯಾಕ್ಗಾಗಿ ಸಾಕಷ್ಟು ಶ್ರಮ ವಹಿಸುತ್ತಿದ್ದು ಮತ್ತೊಂದು ದೊಡ್ಡ ಬ್ರೇಕ್ ಗಾಗಿ ಕಾಯುತ್ತಿದ್ದಾರೆ.