ಕಲಘಟಗಿ: ತುರ್ತು ಅಪಘಾತ ಸಂಭವಿಸಿದಾಗ ಪ್ರತಿಯೊಬ್ಬ ವ್ಯಕ್ತಿಗೂ ರಕ್ತದ ಅವಶ್ಯಕತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಶಿಬಿರದ ಮುಖಾಂತರ ನೀಡಿದ ಎಷ್ಟು ರಕ್ತದಾನಿಗಳ ಸಹಕಾರ ಅಮೂಲ್ಯವಾಗಿದೆ ಎಂದು ಹಿರಿಯ ದಿವಾಣ ನ್ಯಾಯಾಧೀಶರಾದ ರವೀಂದ್ರ ಹೊನ್ನೂಲಿ ತಿಳಿಸಿದರು.
ಅವರು ಪಟ್ಟಣದ ನ್ಯಾಯಾಲಯ ಸಭಾಂಗಣದಲ್ಲಿ ವಕೀಲರ ಸಂಘ ಹಾಗೂ ಕಾನೂನು ಸೇವಾ ಸಮಿತಿ ಕಲಘಟಗಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಶಾ ದಾಮಜಿ ಜಾದವಜಿ ಚೇಡಾ ಸ್ಮಾರಕ ಹಾಗೂ ರಾಷ್ಟೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿ ಸಂಯೋಗದೊಂದಿಗೆ ಪ್ರತಿಯೊಬ್ಬರು ರಕ್ತ ನೀಡುವ ಮುಖಾಂತರ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಕಿರಿಯ ದಿವಾಣಿ ನ್ಯಾಯಾಧೀಶರಾದ ಗಣೇಶ್ ಎನ್, ವಕೀಲ ಸಂಘದ ಅಧ್ಯಕ್ಷ ಅಣ್ಣಪ್ಪ ಓಲೆಕಾರ್, ದತ್ತಮೂರ್ತಿ ಕುಲಕರ್ಣಿ, ವಿಬಿ ಶಿವನಗೌಡರ್, ರವೀಂದ್ರ ತೋಟಗಂಟಿ. ಕೆ ಬಿ ಗುಡಿಹಾಳ, ಬಿ ವಿ ಪಾಟೀಲ್, ಎಂ ಎಂ. ಚಲವಾದಿ, ಎಂಜಿ ಚೌದರಿ, ಶೋಭಾ ಬಳಿಗೇರ, ಸೀಮಾ ಪಾಟೀಲ್, ಗೀತಾ ಮಟ್ಟಿ, ಚೈತ್ರ ಕೋಟಿ, ನ್ಯಾಯಾಲಯದ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.