ಕಲಘಟಗಿ : ಕಲಘಟಗಿ ತಾಲೂಕಿನಲ್ಲಿ ಈಗಾಗಲೇ ಕಬ್ಬು ಕಟಾವಿಗೆ ಬಂದಿದ್ದು ತಾಲೂಕಿನಲ್ಲಿ ಹಲವಾರು ಸಕ್ಕರೆ ಕಾರ್ಖಾನೆಗಳು ಕಟಾವಿಗಾಗಿ ಆಗಮಿಸಿವೆ. ಈಗಾಗಲೇ ಕಟಾವು ಪ್ರಾರಂಭ ಮಾಡಿದ್ದೂ ಕಬ್ಬಿಗೆ ನಿಗದಿತ ದರ ಇಲ್ಲದೆ ಇರುವುದರಿಂದ ರೈತರು ದರ ನಿಗದಿ ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅದರಂತೆ ಇಂದು ತಾಲೂಕ ಪಂಚಾಯತ್ ಸಭಾಭವನದಲ್ಲಿ ತಹಶೀಲ್ದಾರ ವೀರೇಶ್ ಮುಳಗುಂದಮಠರವರು ಕಬ್ಬು ಬೆಳೆಗಾರರನ್ನು ಹಾಗೂ ಸಕ್ಕರೆ ಖಾರ್ಕಾನೆ ಸಿಬ್ಬಂದಿಯನ್ನು ಕರೆಯಿಸಿ ಸಭೆ ನಡೆಸಿದರು.
ಸಭೆಯಲ್ಲಿ ಕಬ್ಬಿನ ಬಿಲ್ಲು ತಡವಾಗಿ ಹಾಕುತ್ತಿರುವ ಸಕ್ಕರೆ ಖಾರ್ಖಾನೆಗಳಿಗೆ ಕಬ್ಬು ತೆಗೆದುಕೊಂಡ ಹದಿನೈದು ದಿನಗಳ ಒಳಗೆ ಬಿಲ್ಲು ಹಾಕುವಂತೆ ರೈತರು ಸೂಚನೆ ನೀಡಿದರು. ಅದೆ ರೀತಿ ಕಬ್ಬಿನ ದರವನ್ನು ಮುಂಚಿತವಾಗಿ ತಿಳಿಸಲು ಹೇಳಿದ್ದು ಅಧಿಕಾರಿಗಳಿಗು ಇದರ ಬಗ್ಗೆ ಮಹಿತಿ ನೀಡಲು ತಿಳಿಸಿದರು.
ಈ ಸಂಧರ್ಭದಲ್ಲಿ ಉಳವಪ್ಪ ಬಳಗೇರ್, ವಸಂತ ದಾಖಪ್ಪನವರ, ಸಿದ್ದಯ್ಯ ಕಟ್ಟೂರಮಠ, ಈಶ್ವರ ಜಯನಗೌಡ್ರು, ಬಸವರಾಜ ರೊಟ್ಟಿ, ಅಣ್ಣಪ್ಪ ಸುಬ್ಬಣ್ಣನವರ, ಶಂಭು ಬಳಿಗೇರ್, ಮಂಜಯ್ಯ ಅಣ್ಣಿಗೇರಿ, ಶರಣು ಬನ್ನಿಕೊಪ್ಪ, ಬಸವರಾಜ ಹ್ಯಾಟಿ, ಬಸಾಗರ, ಬಸಾಗರ, ಸಿಧಗರ ನಾಗಡಣ್ಣವರ, ಶಂಕ್ರಪ್ಪ ತಿಪ್ಪೂಡಣ್ಣವರ, ಶಂಕ್ರದ. ಸೂರ್ಯವಂಶಿ, ಪ್ರವೀಣ ಉಪಸ್ಥಿತರಿದ್ದರು.