ಡಾರ್ಲಿಂಗ್ ಪ್ರಭಾಸ್, ದೀಪಿಕಾ ಪಡುಕೋಣೆ, ಬಿಗ್ ಬಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಕಲ್ಕಿ 2898 ಎಡಿ’ ಚಿತ್ರ ಜೂನ್ 27ರಂದು ಬಿಡುಗಡೆಯಾಗಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ಬಗ್ಗೆ ಪ್ರೇಕ್ಷಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಇದೀಗ ಕಲ್ಕಿ ಚಿತ್ರದಲ್ಲಿ ವಿಲನ್ ಆಗಿ ನಟಿಸಿರುವ ಕಮಲ್ ಹಾಸನ್ 7 ನಿಮಿಷ ನಟಿಸಿದಕ್ಕೆ 20 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಸಿನಿಮಾದ ಆರಂಭದಲ್ಲಿ ಹಣ್ಣು ಹಣ್ಣು ಮುದುಕನ ಪಾತ್ರದಲ್ಲಿ ಕಮಲ್ ಎಂಟ್ರಿ ಕೊಡ್ತಾರೆ. ಆದರೆ ಚಿತ್ರದ ಅಂತ್ಯದಲ್ಲಿ ಅವರ ನಿಜವಾದ ಲುಕ್ ರಿವೀಲ್ ಆಗುತ್ತದೆ. ಅದನ್ನು ನೋಡಿಯೇ ಫ್ಯಾನ್ಸ್ ದಂಗಾಗಿದ್ದಾರೆ. ಡೈರೆಕ್ಟರ್ ನಾಗ್ ಅಶ್ವಿನ್ ಕತೆ ಮಾಡಿದಾಗಲೇ ಯಾಸ್ಕಿನ್ ಪಾತ್ರವಿತ್ತಂತೆ ಆದರೆ ಯಾರು ಈ ಪಾತ್ರ ಸೂಕ್ತ ಎಂದು ಫೈನಲ್ ಆಗಿರಲಿಲ್ಲವಂತೆ.
ಬಳಿಕ ಚಿತ್ರೀಕರಣ ಪ್ರಾರಂಭಿಸಿದ ವೇಳೆ, ಕೊಂಚ ಅಳುಕಿನಿಂದಲೇ ಕಮಲ್ ಹಾಸನ್ರನ್ನು ಯಾಸ್ಕಿನ್ ಪಾತ್ರಕ್ಕೆ ಕೇಳಿದ್ರಂತೆ ನಾಗ್ ಅಶ್ವಿನ್. ಆದರೆ ಕಮಲ್ ಖುಷಿಯಿಂದಲೇ ಈ ಪಾತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆದರೆ ಮೂರೇ ದೃಶ್ಯ, 7 ನಿಮಿಷ 4 ಸೆಕೆಂಡ್ ನಟಿಸಿದ ಕಮಲ್ ಹಾಸನ್ಗೆ ನಿರ್ಮಾಪಕ ಅಶ್ವಿನ್ ದತ್ 20 ಕೋಟಿ ರೂ. ಸಂಭಾವನೆ ನೀಡಿರೋದು ಇದೀಗ ವೈರಲ್ ಆಗಿದೆ.
ಅಂದಹಾಗೆ, ‘ಕಲ್ಕಿ 2898 ಎಡಿ’ ಪಾರ್ಟ್ 2ನಲ್ಲಿ ಕಮಲ್ ಹಾಸನ್ ಪಾತ್ರವೇ ಹೈಲೆಟ್. ವಿಲನ್ ಆಗಿರುವ ಕಮಲ್ ಪಾತ್ರದ ಮೇಲೆ ಕಥೆ ಸುತ್ತಲಿದೆಯಂತೆ. ಭಾಗ 2ರಲ್ಲಿ ಯಾರು ಊಹಿಸಿರದ ಸಾಕಷ್ಟು ಟ್ವಿಸ್ಟ್ಗಳು ಎದುರಾಗಲಿದೆ. ಕಲ್ಕಿ ಸಿನಿಮಾದ ಸಕ್ಸಸ್ ನಂತರ ಪಾರ್ಟ್ 2 ಬರಲಿದೆ ಎಂಬ ಸುದ್ದಿ ಕೇಳಿ ಫ್ಯಾನ್ಸ್ ಸಖತ್ ಎಕ್ಸೈಟ್ ಆಗಿದ್ದಾರೆ.