ಕಮಲಾ ಹ್ಯಾರಿಸ್ ಅಮೆರಿಕಾದ ಆಡಳಿತ ನಡೆಸಲು ಅನರ್ಹರಾಗಿದ್ದಾರೆ. ಅವರು ತೀವ್ರಗಾಮಿ ಎಡಪಂಥೀಯ ಮನೋಸ್ಥಿತಿಯವರು ಎಂದು ಅಮೆರಿಕದ ಮಾಜಿ ಅಧ್ಯಕ್ಷ ಹಾಲಿ ರಿಪಬ್ಲಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಟ್ರಂಪ್, ಮೂರುವರೆ ವರ್ಷಗಳಿಂದ ಕಮಲಾ ಹ್ಯಾರಿಸ್ ಅವರು ಜೋ ಬೈಡೆನ್ ಮಾಡಿದ ದುರಂತದ ಚಾಲನಾ ಶಕ್ತಿಯಾಗಿದ್ದಾರೆ.
ಅವರೆನಾದರೂ ಅಧಿಕಾರಕ್ಕೆ ಬಂದರೆ ನಮ್ಮ ದೇಶವನ್ನು ನಾಶಮಾಡುತ್ತಾರೆ. ಅಮೆರಿಕವನ್ನು ನಾಶ ಮಾಡಲು ನಾವು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹ್ಯಾರಿಸ್ಗೆ ಹಾಕುವ ಒಂದು ಮತ ಇನ್ನೂ ನಾಲ್ಕು ವರ್ಷಗಳ ಅಪ್ರಾಮಾಣಿಕತೆ, ಅಸಮರ್ಥತೆ, ದೌರ್ಬಲ್ಯ ಮತ್ತು ವೈಫಲ್ಯಕ್ಕೆ ಹಾಕುವ ಮತವಾಗುತ್ತದೆ ಎಂದು ಟ್ರಂಪ್ ಹೇಳಿದರು.
ಕಮಲಾ ಹ್ಯಾರಿಸ್ ಮುಟ್ಟಿದ್ದೆಲ್ಲವೂ ದುರಂತವಾಗುತ್ತದೆ ಎಂದು ಆರೋಪಿಸಿದ ಅವರು, ಉಕ್ರೇನ್ ದಾಳಿ ಮಾಡದಂತೆ ರಷ್ಯಾವನ್ನುತಡೆಯಲು ಕಮಲಾ ಹ್ಯಾರಿಸ್ ಅವರನ್ನು ಯುರೋಪ್ಗೆ ಕಳುಹಿಸಿದಾಗ ಏನಾಯ್ತು? ಅವರು ತೆರಳಿದ ಐದು ದಿನಗಳ ನಂತರ ರಷ್ಯಾ ದಾಳಿ ಮಾಡುವ ಮೂಲಕ ಉತ್ತರಿಸಿತು. ಪುಟಿನ್ ಏನಿಲ್ಲವೆಂಬಂತೆ ಅವರನ್ನು ನೋಡಿ ನಕ್ಕರು. ಕಮಲಾ ಮುಟ್ಟಿದ್ದೆಲ್ಲವೂ ಸಂಪೂರ್ಣ ವಿಪತ್ತಿಗೆ ಕಾರಣವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು