ಬಾಲಿವುಡ್ ನಟಿ ಕಂಗನಾ ರಾಣವತ್ ನಿತ್ಯ ಒಂದಲ್ಲ ಒಂದು ಹೇಳಿಕೆಯ ಮೂಲಕ ವಿವಾದ ಸೃಷ್ಟಿಸುತ್ತಲೆ ಇರುತ್ತಾರೆ. ಯಾವುದಾದರು ಒಂದು ವಿಷಯವನ್ನು ಹಿಡಿದುಕೊಂಡರೆ ಅದನ್ನು ಬಿಡುವ ನಟಿಯಲ್ಲ ಕಂಗನಾ. ಇದೀಗ ಬಾಲಿವುಡ್ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹಾರ್ ವಿರುದ್ಧದ ವಾಗ್ದಾಳಿಯನ್ನು ಕಂಗನಾ ರಣಾವತ್ ಮುಂದುವರೆಸಿದ್ದಾರೆ.
ಕಂಗನಾ, ಕರಣ್ ಜೋಹರ್ ವಿರುದ್ಧ ನಿರಂತರವಾಗಿ ಪೋಸ್ಟ್ ಮಾಡುತ್ತಿದ್ದು, ಇದೀಗ ಅವರನ್ನು ‘ಚಾಚಾ ಚೌಧರಿ’ ಎಂದು ಜರಿದಿದ್ದಾರೆ. ನಾನು ನಿರ್ಮಾಪಕಿಯಾಗಿ ಯಶಸ್ವಿಯಾದರೆ ನಿನ್ನ ಮುಖಕ್ಕೆ ಉಜ್ಜುತ್ತೇನೆ ಎಂದು ಕರಣ್ ಜೋಹರ್ ವಿರುದ್ಧ ಕಂಗನಾ ಗುಡುಗಿದ್ದಾರೆ.
ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಂಗನಾ, ನೇರವಾಗಿ ಬಾಲಿವುಡ್ ಮಾಫಿಯಾ ಬಗ್ಗೆ ಮಾತನಾಡಿದ್ದರು. ಅದರಲ್ಲಿ ಕರಣ್ ಕೂಡ ಇದ್ದಾರೆ ಎಂದಿದ್ದಾರೆ. ಈ ಮಾತು ಸಾಕಷ್ಟು ವಿವಾದವನ್ನು ಎಬ್ಬಿಸಿತ್ತು. ಅಲ್ಲಿಂದ ಕಂಗನಾ ಮತ್ತು ಕರಣ್ ಹಾವು ಮುಂಗಸಿ ರೀತಿಯಲ್ಲಿ ಕಿತ್ತಾಡುವುದಕ್ಕೆ ಶುರು ಮಾಡಿದರು. ಕರಣ್ ಬಗ್ಗೆ ಯಾರೇ ನೆಗೆಟಿವ್ ಕಾಮೆಂಟ್ ಮಾಡಿದರೂ, ಕಂಗನಾ ಅವರ ಪರವಾಗಿ ನಿಂತುಕೊಳ್ಳುತ್ತಾರೆ.
ಇತ್ತೀಚೆಗಷ್ಟೇ ಕಂಗನ, ಕರಣ್ ವಿರುದ್ಧ ಗರಂ ಆಗಿದ್ದರು. 2016ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅನುಷ್ಕಾ ಶರ್ಮಾ ಮತ್ತು ಕರಣ್ ಜೋಹಾರ್ ವೇದಿಕೆಯ ಮೇಲಿದ್ದರು. ಆ ಸಮಯದಲ್ಲಿ ಕರಣ್ ಮಾತನಾಡುತ್ತಾ, ‘ಅನುಷ್ಕಾಳ ಕರಿಯರ್ ನಾಶ ಮಾಡಬೇಕು ಎಂದುಕೊಂಡಿದ್ದೆ’ ಎನ್ನುತ್ತಾರೆ. ಅದಕ್ಕೆ ಅವರು ಕಾರಣವನ್ನೂ ಕೊಡುತ್ತಾರೆ. ಅನುಷ್ಕಾ ನಟನೆಯ ಚೊಚ್ಚಲು ಚಿತ್ರಕ್ಕೆ ಆಯ್ಕೆ ಆಗುವ ಮುನ್ನ, ಅವರ ಫೋಟೋವನ್ನು ನಿರ್ದೇಶಕರು ನನ್ನ ಬಳಿ ತಂದಿದ್ದರು. ಅನುಷ್ಕಾ ಫೋಟೋ ನೋಡಿ, ಇವರು ಬೇಡ ಅಂದಿದ್ದೆ. ನನ್ನ ಹತ್ತಿರವೇ ಒಬ್ಬಳು ನಾಯಕಿ ಇದ್ದಾಳೆ ಎಂದೂ ಹೇಳಿದ್ದೆ. ಕೊನೆಗೂ ಅನುಷ್ಕಾ ಅವರೇ ಆಯ್ಕೆಯಾದರು’ ಎಂದಿದ್ದರು. ಇದೀಗ ಕಂಗನಾ ಮತ್ತೆ ಕರಣ್ ಜೋಹರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.