ನಟಿ ತಮನ್ನಾ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಬೇರೆಯವರ ಜೊತೆಗೆ ತಮ್ಮ ಖಾಸಗಿ ವಿಚಾರವನ್ನು ಕಂಗನಾ ಸದಾ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಪ್ರೀತಿ, ಪ್ರೇಮ, ಡೇಟಿಂಗ್, ಸೆಕ್ಸ್ ಹೀಗೆ ಪ್ರತಿಯೊಂದನ್ನು ಖುಲಂ ಖುಲ್ಲವಾಗಿ ನಟಿ ಹೇಳಿಕೊಳ್ಳುತ್ತಿರುತ್ತಾರೆ. ಇದೀಗ ಬೋಲ್ಡ್ ನಟಿ ತನ್ನ ವಿಚಿತ್ರ ಬಯಕೆಯೊಂದನ್ನು ಹೇಳಿಕೊಂಡಿದ್ದು, ಅದು ಭಯಾನಕ ಆಗಿದೆ.
ಕಂಗನಾ ರಣಾವತ್ ಬಾಲಿವುಡ್ ನ ಅನೇಕ ನಟರ ಜೊತೆ ಡೇಟಿಂಗ್ ಮಾಡಿದ್ದಾರೆ. ಯಾರೆಲ್ಲ ತಮಗೆ ಮೋಸ ಮಾಡಿದ್ದಾರೆ ಎನ್ನುವುದನ್ನೂ ಹೇಳಿಕೊಂಡಿದ್ದಾರೆ. 16ನೇ ವಯಸ್ಸಿನಲ್ಲೇ ಶುರುವಾದ ಪ್ರೀತಿ-ಪ್ರೇಮಕ್ಕೆ ಈವರೆಗೂ ಅವರು ಲೆಕ್ಕವಿಟ್ಟಿಲ್ಲವಂತೆ. ಆದರೆ, ಅವರಾಗಿಯೇ ಯಾರಿಗೂ ಕೈಕೊಟ್ಟಿಲ್ಲವಂತೆ. ಇದೀಗ ಪ್ರೀತಿ ಮಾಡಿ ತಾನೇ ಯಾರಿಗಾದರೂ ಕೈ ಕೊಡಬೇಕು ಅನಿಸುತ್ತಿದೆಯಂತೆ.
ನಾನು ಪ್ರತಿಯೊಬ್ಬರ ಜೊತೆ ನಿಯತ್ತಾಗಿ ಕಮಿಟ್ ಆಗಿರುತ್ತಿದ್ದೆ. ಅವರು ನನಗೆ ಮೋಸ ಮಾಡಿ ಕೈ ಕೊಡುತ್ತಿದ್ದರು. ಮತ್ತೆ ಅವರು ನನ್ನ ಹತ್ತಿರಕ್ಕೆ ಬರುವ ಹೊತ್ತಿನಲ್ಲಿ ಮತ್ತೊಬ್ಬರ ಜೊತೆ ನಾನು ಕಮಿಟ್ ಆಗಿರುತ್ತಿದ್ದೆ. ನಾನು ಯಾರಿಗೂ ಈ ವಿಷಯದಲ್ಲಿ ನೋವು ಮಾಡಲಿಲ್ಲ. ನನಗೆ ಎಲ್ಲರೂ ತೊಂದರೆ ಕೊಟ್ಟರು. ನಾನೀಗ ಈ ವಿಷಯದಲ್ಲಿ ಯಾರಿಗಾದರೂ ಮೋಸ ಮಾಡಬೇಕು, ನೋವು ಮಾಡಬೇಕು ಎಂದು ಅನಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ.