ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ಇತ್ತೀಚೆಗೆ ಹೊಸ ಫೋಟೋ ಶೂಟ್ ಮಾಡಿಸಿದ್ದು ರಾಣಿಯಂತೆ ಕಂಗೊಳಿಸಿದ್ದಾರೆ.
ದುಬಾರಿ ವಸ್ತ್ರ ಹಾಗೂ ದುಬಾರಿ ಆಭರಣಗಳನ್ನ ಧರಿಸಿ ನಟಿ ಕ್ಯಾಮೆರಾಗೆ ಫೋಸ್ ನೀಡಿದ್ದಾರೆ.
ಹೆಸರಾಂತ ಆಭರಣದ ಬ್ಯಾಂಡ್ಗಾಗಿ ರಾಗಿಣಿ ವಿಶೇಷ ಉಡುಗೆ ಧರಿಸಿಕೊಂಡು ಆಭರಣಗಳನ್ನ ಹಾಕಿಕೊಂಡು ಫೋಟೋ ಶೂಟ್ ಮಾಡಿಸಿದ್ದಾರೆ.
ರಾಗಿಣಿ ದ್ವಿವೇದಿ ಆಭರಣದ ಫೋಟೋ ಶೂಟ್ ಅಲ್ಲಿ ವಿವಿಧ ರೀತಿಯ ಆಭರಣ ಮತ್ತು ಉಡುಗೆಯನ್ನ ಧರಿಸಿಕೊಂಡು ಫೋಸ್ ಕೊಟ್ಟಿದ್ದಾರೆ. ಪ್ರತಿ ಪೋಸ್ನಲ್ಲೂ ವಿವಿಧ ಹಾವ-ಭಾವಗಳನ್ನ ರಾಗಿಣಿ ಪ್ರದರ್ಶಿಸಿದ್ದಾರೆ.
ಸ್ಯಾಂಡಲ್ವುಡ್ ಸಿನಿರಂಗದಲ್ಲಿ ಸಾಕಷ್ಟು ಬೇಡಿಕೆ ಉಳಿಸಿಕೊಂಡಿರೋ ರಾಗಿಣಿ ಒಂದಷ್ಟು ಪ್ರೋಜೆಕ್ಟ್ಗಳನ್ನ ಒಪ್ಪಿಕೊಂಡಿದ್ದಾರೆ. ಇತ್ತೀಚಿಗೆ ರಾಗಿಣಿ ಬಿಂಗೋ ಚಿತ್ರದ ಶೂಟಿಂಗ್ ಅಲ್ಲೂ ಭಾಗಿ ಆಗಿದ್ದರು.
ವೀರಮದಕರಿ ಸಿನಿಮಾದ ಮೂಲಕ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ರಾಗಿಣಿ ಸದ್ಯ ಬಹುಭಾಷೆಯಲ್ಲಿ ಮಿಂಚುತ್ತಿದ್ದಾರೆ.