15ನೇ ಬೆಂಗಳೂರು ಚಿತ್ರೋತ್ಸವಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬೆಂಗಳೂರು ಚಿತ್ರೋತ್ಸವಕ್ಕೆ ಮತ್ತಷ್ಟು ಬಲ ನೀಡಿದ್ದಾರೆ. ಈ ವೇಳೆ ಶಿವಣ್ಣ ಕಾಂತಾರ ಹಾಗೂ ಕೆಜಿಎಫ್ ನಂತಹ ಸಿನಿಮಾಗಳಿಂದ ಕನ್ನಡ ಸಿನಿಮಾ ವಿಶ್ವಮಟ್ಟದವರೆಗೆ ಮುಟ್ಟಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.
ಕಾಂತಾರ, ಕೆಜಿಎಫ್ನಿಂದ ಕನ್ನಡ ಸಿನಿಮಾ ವಿಶ್ವಮಟ್ಟದವರೆಗೆ ಮುಟ್ಟಿದೆ ಅಂದರೆ ನಾವೆಲ್ಲಾ ಹೆಮ್ಮೆ ಪಡುವ ವಿಚಾರ. ಕನ್ನಡ ಭಾಷೆ ಬಂದು 90 ವರ್ಷ ಆಯ್ತು ಇಂಡಸ್ಟ್ರಿಗೆ ಬಂದು. ಇದರಲ್ಲಿ ನನ್ನದು ಕೂಡ 38 ವರ್ಷ ಸೇವೆ ಇದೆ ಅನ್ನೋದು ಖುಷಿಯಿದೆ. ಈ ಸಂಭ್ರಮದಲ್ಲಿ ನಾನು ಭಾಗಿಯಾಗಿರೋದು ಖುಷಿಯಿದೆ ಎಂದು ಶಿವಣ್ಣ ಬೆಂಗಳೂರು ಚಿತ್ರೋತ್ಸವದಲ್ಲಿ ಮಾತನಾಡಿದ್ದಾರೆ.
ಫೆ.29ರಿಂದ ಮಾರ್ಚ್ 7ರವರೆಗೂ ಸಿನಿಮಾ ಹಬ್ಬ ನಡೆಯಲಿದ್ದು,ಫಿಲ್ಮ್ ಫೆಸ್ಟಿವಲ್ಗೆ 200 ಸಿನಿಮಾಗಳು ಬಂದಿವೆ. ಅದರಲ್ಲಿ ಕನ್ನಡ ಸಿನಿಮಾಗಳು ಕೂಡ ಇದೆ ಎಂಬುದು ಹೆಮ್ಮೆಯ ವಿಷಯವಾಗಿದೆ.