ಹೇಮಾ ಸಮಿತಿಯ ವರದಿ ಹೊರ ಬಿದ್ದ ಬಳಿಕ ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಅಲ್ಲೋಲ ಕಲ್ಲೋಲ ಆಗಿದೆ. ಈಗಾಗಲೇ ಸಾಕಷ್ಟು ಹಿರಿಯ ತಲೆಗಳ ತಲೆದಂಡವಾಗಿದೆ. ಈ ಮಧ್ಯೆ ಸ್ಯಾಂಡಲ್ವುಡ್ನಲ್ಲಿಯೂ ಹೇಮಾ ರೀತಿಯಲ್ಲಿ ಸಮಿತಿ ರಚನೆ ಆಗಬೇಕು ಎಂದ ಫಿಲ್ಮ್ ಚೇಂಬರ್ ಸಭೆ ಆಯೋಜಿಸಿದೆ. ಈ ಮೀಟಿಂಗ್ನಲ್ಲಿ ಭಾಗಿಯಾದ ಭಾವನಾ ರಾಮಣ್ಣ ಫೈರ್ ಸಂಸ್ಥೆ ವಿರುದ್ಧ ಗರಂ ಆಗಿದ್ದಾರೆ. ಹೇಮಾ ಸಮಿತಿ ರೀತಿ ಕನ್ನಡ ಚಿತ್ರರಂಗಕ್ಕೆ ಕಮಿಟಿ ಬೇಡ, ಆ ಕೂಗು ನಮ್ಮ ಇಂಡಸ್ಟ್ರಿಯಲ್ಲಿ ಕೇಳಿ ಬಂದಿಲ್ಲ ಎಂದಿದ್ದಾರೆ.
ಮಹಿಳಾ ಆಯೋಗದ ಹಾಗೂ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಮಾನ ಮನಸ್ಕರು ಗ್ರೂಪ್ ಮಾಡ್ಕೊಂಡು, ಅದಕ್ಕೆ `ಫೈರ್’ ಎಂದು ಹೆಸರಿಟ್ಟು ಸಂಸ್ಥೆ ಎಂದು ಬಿಂಬಿಸಿದ್ದಾರೆ. ಕಾಸ್ಟಿಂಗ್ ಕೌಚ್ನ ಆ ಕೂಗು ನಮ್ಮ ಇಂಡಸ್ಟ್ರಿಯಲ್ಲಿ ಕೇಳಿ ಬಂದಿಲ್ಲ. ಹೆಣ್ಣು ಅಂದಾಗ ಸಮಸ್ಯೆಗಳು ಬರೋದು ಸಹಜನೇ, ಸಿನಿಮಾರಂಗ ಅಂದ್ಮೇಲೆ ಅದು ಇದ್ದೇ ಇರುತ್ತೆ. ಇನ್ನೂ 100 ಮದುವೆಯಲ್ಲಿ 10 ಮದುವೆ ಉಳಿದರೆ ಹೆಚ್ಚಾಗಿದೆ. ಬೇರೇ ರೀತಿಯ ಅಭಿಪ್ರಾಯಗಳಿಂದ ಹೀಗೆ ಆಗುತ್ತಿದೆ. ಚಿತ್ರರಂಗದಲ್ಲೂ ಹಾಗೆ ಅಲ್ಲಿ ಕೆಟ್ಟದ್ದು ಇದೆ ಅಂದರೆ ಅಲ್ಲಿ ಕೆಲಸ ಮಾಡಲು ಹೋಗಬೇಡಿ ಎಂದು ಭಾವನಾ ಹೇಳಿದ್ದಾರೆ.
ವಾಣಿಜ್ಯ ಮಂಡಳಿ, ಕಲಾವಿದರ ಸಂಘ, ನಿರ್ಮಾಪಕರ ಸಂಘ ಇದೆ ಅಲ್ಲಿ ಸಮಸ್ಯೆ ಬಂದು ಹೇಳಬಹುದು. ಅದಕ್ಕಾಗಿ ಬೇರೆ ಸಂಘ ಮಾಡಬೇಕು ಅಂತ ಏನಿಲ್ಲ ಎಂದಿದ್ದಾರೆ. `ಫೈರ್’ ಸಂಸ್ಥೆ ಅವರ ಮಾತು ಕೇಳಬೇಡಿ, ಅವರ ಈ ಚಿತ್ರರಂಗದವರಲ್ಲ ಅಂತಾ ಹೇಳೋಕೆ ಹೊರಟಿದ್ದಾರೆ. ಈ ವೇಳೆ, ಹೇಮಾ ಸಮಿತಿ ರೀತಿ ಕನ್ನಡ ಚಿತ್ರರಂಗಕ್ಕೆ ಕಮಿಟಿ ಬೇಡ, ಆ ಕೂಗು ನಮ್ಮ ಇಂಡಸ್ಟ್ರಿಯಲ್ಲಿ ಕೇಳಿ ಬಂದಿಲ್ಲ ಎಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ನಡೆಯುತ್ತಿಲ್ಲ. ಇಲ್ಲಿ ಹೇಮಾ ಕಮಿಟಿಯಂತೆ ಮಾಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ ಭಾವನಾ ರಾಮಣ್ಣ.