ಬೆಂಗಳೂರು:- ರಾಜ್ಯೋತ್ಸವಕ್ಕೆ ಕನ್ನಡ ಧ್ವಜ ಕಡ್ಡಾಯ ಹಿನ್ನೆಲೆ, ಬಾವುಟಗಳಿಗೆ ಭಾರೀ ಬೇಡಿಕೆ ಬಂದಿದೆ.1ನೇ ತಾರೀಖಿನಂದು ಎಲ್ಲಾ ಶಾಲೆ- ಕಾಲೇಜುಗಳು, ಕಾರ್ಖಾನೆಗಳು ಮತ್ತು ಐಟಿಬಿಟಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ಬಾವುಟ ಹಾರಿಸಲೇಬೇಕೆಂದು ಡಿಸಿಎಂ ಡಿ.ಕೆ ಶಿವಕುಮಾರ್ ಆದೇಶಿಸಿದ್ದಾರೆ.
ಈ ನಿಟ್ಟಿನಲ್ಲಿ ಕನ್ನಡ ಬಾವುಟಗಳಿಗೆ ಭಾರೀ ಬೇಡಿಕೆ ಬಂದಿದೆ.
ಈ ಬಾರಿಯ ನ.1ಕ್ಕೆ ಕರ್ನಾಟಕ ಏಕೀಕರಣಗೊಂಡು 50 ವರ್ಷವಾಗಲಿದೆ. ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಎಲ್ಲಾ ಶಾಲೆ-ಕಾಲೇಜು, ಕಂಪನಿಗಳು, ಐಟಿಬಿಟಿ ಕಂಪನಿಗಳು ಹಾಗೂ ಕಾರ್ಖಾನೆಗಳು ಕೂಡ ನವೆಂಬರ್ 1ರಂದು ಕನ್ನಡ ಬಾವುಟ ಹಾರಿಸಲೇಬೇಕೆಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಇನ್ನೇನೂ ನ.1ಕ್ಕೆ ಕೇವಲ 15 ದಿನಗಳು ಬಾಕಿ ಉಳಿದಿವೆ.
ಇನ್ನೂ ಈ ಕನ್ನಡ ಬಾವುಟಗಳು ಕಾಟನ್, ಪಾಲಿಸ್ಟರ್, ಸಿಲ್ಕ್ ಬಟ್ಟೆಗಳಲ್ಲಿ ತಯಾರಾಗುತ್ತಿವೆ. ಒಂದೊಂದಕ್ಕೆ ಒಂದೊಂದು ಬೆಲೆ ಇದೆ. ನಗರದ ಖಾದಿ ಭಂಡಾರ ಸೇರಿದಂತೆ ಬೇರೆ ಬೇರೆ ಖಾಸಗಿ ಅಂಗಡಿಗಳಲ್ಲಿ ಕನ್ನಡ ಬಾವುಟಗಳ ಬೆಲೆ ಹೆಚ್ಚಾಗಿದೆ. 200 ರೂ.ನಿಂದ 700 ರೂ. ªಬಾವುಟಗಳು ಮಾರಾಟವಾಗುತ್ತಿವೆ.