ಬೆಂಗಳೂರು : ರಾಷ್ಟ್ರಕವಿ ಕುವೆಂಪು ಹೇಳಿರುವಂತೆ ಕನ್ನಡವೇ ಸತ್ಯ..ಕನ್ನಡವೇ ನಿತ್ಯ..ನಮ್ಮ ಈ ವಸತಿ ಸಮುಚ್ಛಯದಲ್ಲಿ ೧೫ಕ್ಕೂ ಹೆಚ್ಚು ರಾಜ್ಯದವರಿದ್ದರೂ ಒಟ್ಟಾಗಿ ಕೂಡಿದಾಗ ಕನ್ನಡವನ್ನೇ ಮಾತಾನಾಡುತ್ತೇವೆ ಎಂದು ರೆಡಿಯಂಟ್ ಜಾಸ್ಮಿನ್ ಟೆರಸ್ ಅಪಾರ್ಟ್ಮೆಂಟ್ ಅಸೋಸಿಯೇಶನ್ ಅಧ್ಯಕ್ಷ ಸೋನಾಚಲಂ ತಿಳಿಸಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಆರ್.ಜೆ.ಟಿ. ಅಪಾರ್ಟ್ಮೆಂಟ್ ಅಸೋಸಿಯೇಶನ್ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೇರವೇರಿಸಿ ಅವರು ಮಾತನಾಡಿದರು. ಕನ್ನಡ ನೆಲ ಜಲದ ಕುರಿತು ಮಾತನಾಡಿದ ವಿಜಯ್ ನಾಯಕ್, ಒಂದು ನಾಡು..
ಹಲವು ಬೀಡು ಎನ್ನುವಂತೆ ಕರ್ನಾಟಕ ಎಂದರೇ ಕೇವಲ ಬೆಂಗಳೂರು ಅಷ್ಟೇ ಅಲ್ಲ. ಕರ್ನಾಟಕದ ಮಡಿಲಲ್ಲಿ ಅನೇಕ ನಿಸರ್ಗ ತಾಣಗಳು, ಶ್ರೀಮಂತ ಪರಂಪರೆಯ ಸಾಂಸ್ಕೃತಿಕ ತಾಣಗಳು, ಪ್ರವಾಸಿ ಸ್ಥಳಗಳ, ನಿಸರ್ಗ ತಾಣಗಳಿವೆ ಅವುಗಳೆಲ್ಲವನ್ನು ನೋಡಿಬರಬೇಕೆಂದು ನೇರೆದಿದ್ದ 15 ರಾಜ್ಯಕ್ಕೂ ಹೆಚ್ಚು ಜನರಿಗೆ ಕರ್ನಾಟಕದ ತಾಣಗಳನ್ನು ಪರಿಚಯಿಸಿ ಕೊಟ್ಟರು.
ಅಸೋಸಿಯೇಶನ್ನ ಕಾರ್ಯದರ್ಶಿ ಭಾರತಿ, ಖಜಾಂಚಿಯಾದ ಶರತ್, ಹಿರಿಯರಾದ ವಿಜಯ್ ಪಾಟೀಲ್, ಮಂಜುನಾಥ್ ಬಂಡಿ, ಸೇರಿದಂತೆ ಹಲವರು ಕನ್ನಡದ ಹಿರಿಮೆ ಗರಿಮೆ ಕುರಿತು ನೆರೆದಿದ್ದ ಜನತೆಗೆ ತಿಳಿಸಿಕೊಟ್ಟರು. ಇದೇ ವೇಳೆ ಅಪಾರ್ಟ್ಮೆಂಟ್ನ ಮೂವರು ಹಿರಿಯ ನಾಗರಿಕರಿಗೆ ಗೌರವ ಸನ್ಮಾನ ಮಾಡಲಾಯಿತು.