ಕನ್ನಡ ಚಿತ್ರರಂಗದ ಸಮಸ್ಯೆಗಳನ್ನು ಚರ್ಚೆ ಮಾಡುವುದಕ್ಕೆಂದು ಗೋವಾಗೆ ತೆರಳಿದ್ದು ನಿರ್ಮಾಪಕರು ಗಲಾಟೆ ಮಾಡಿಕೊಂಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಹಾಗೂ ನಿರ್ದೇಶಕರ ಸಂಘದ ಪದಾಧಿಕಾರಿಗಳು ಗೋವಾ ಪ್ರವಾಸ ಬೆಳೆಸಿದ್ದು ಈ ವೇಳೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.
ಗೋವಾದ ಹಿಬೀಸ್ ರೆಸಾರ್ಟ್ ನಲ್ಲಿ ಚರ್ಚೆ ನಡೆಯುವಾಗ ಮಾತಿಗೆ ಮಾತು ಬೆಳೆದು ಸಣ್ಣದಾಗಿ ಗಲಾಟೆ ಶುರುವಾಗಿದೆ. ಬಳಿಕ ಗಲಾಟೆ ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ನಿರ್ಮಾಪಕರಾದ ರಥಾವರ ಮಂಜುನಾಥ್, ಎ.ಗಣೇಶ್ ಹಾಗೂ ಸತೀಶ್ ಆರ್ಯ ನಡುವೆ ಮಾತಿನ ಚಕಮಕಿ ನಡೆದು ಗಲಾಟೆಯಲ್ಲಿ ಮುಕ್ತಾವಾಗಿದೆ.
ಗಲಾಟೆಯ ನಂತರ ಸತೀಶ್ ಆರ್ಯ, ಎ.ಗಣೇಶ್ ಹಾಗೂ ರಥಾವರ ಮಂಜುನಾಥ್ ಅವರನ್ನು ಬೆಂಗಳೂರಿಗೆ ವಾಪಸ್ಸು ಕಳುಹಿಸಲಾಗಿದೆಯಂತೆ. ಗೋವಾ ಟ್ರಿಪ್ಗೆ ಹೋದ ನಿಯೋಗದ ಸದಸ್ಯರು, ಪದಾಧಿಕಾರಿಗಳು ಬಳಿಕ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಎನ್.ಎಂ.ಸುರೇಶ್, ಉಮೇಶ್ ಬಣಕಾರ್, ಆಸ್ಕರ್ ಕೃಷ್ಣ, ಭಾಮಾ ಹರೀಶ್, ಭಾಮಾ ಗಿರೀಶ್, ಟೇಸಿ ವೆಂಕಟೇಶ್, ಸತೀಶ್ ಆರ್ಯ, ರಥಾವರ ಮಂಜುನಾಥ್, ಎ.ಗಣೇಶ್ ಸೇರಿ ಮುಂತಾದವರು ಗೋವಾ ಪ್ರವಾಸಕ್ಕೆ ತೆರಳಿದ್ದರು.