ಕಳೆದ ಕೆಲ ದಿನಗಳಿಂದ ಯುಎಇನಲ್ಲಿ ಭೀಕರ ಮಳೆಯಾಗುತ್ತಿದೆ. ಇದರಿಂದ ಜನ ಕಂಗಲಾಗಿದ್ದು ಶಾರ್ಜಾ ಮತ್ತು ದುಬೈನ ಹಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನಜೀವನ ಅಸ್ತವ್ಯಸ್ತವಾಗಿದೆ. ಇದರಿಂದ ಜನರಿಗೆ ಊಟ, ನೀರು ಔಷಧಿಯ ಸಮಸ್ಯೆ ಎದುರಾಗಿರಾಗಿದೆ. ಇದರನ್ನು ಮನಗಂಡು ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ ನೆರವಿನ ಕಾರ್ಯಾಚರಣೆ ಕೈಗೊಂಡಿದೆ.
ದುಬೈ ಇಂಡಿಯನ್ ಕಾನ್ಸುಲೇಟ್ ಅನುಮತಿ ಮತ್ತು ಸಹಯೋಗದಲ್ಲಿ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ ಕಳೆದ ಮೂರ ದಿನಗಳಿಂದ ರಕ್ಷಣಾ ಬೋಟ್ ನಲ್ಲಿ ಊಟ, ನೀರು, ರೇಷನ್ ಗಳನ್ನು ಸಂಕಷ್ಟದಲ್ಲಿರುವ ಅನಿವಾಸಿ ಭಾರತೀಯರಿಗೆ ಮಾತ್ರವಲ್ಲದೆ ನೂರಾರು ವಿದೇಶಿಯರಿಗೂ ಭೇದವಿಲ್ಲದೇ ನೆರವಿನ ಹಸ್ತನೀಡಿದೆ. ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಮುನ್ಸಿಪಾಲಿಟಿ ವಾಹನ ಚಾಲಕರಿಗೂ ಸ್ಥಳದಲ್ಲೇ ಊಟದ ವ್ಯವಸ್ಥೆ ಕಲ್ಪಿಸಿದೆ.
ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ನ ಹಿದಾಯತ್ ಅಡ್ಡೂರು, ಕೆಎನ್ಆರೈ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಒಕ್ಕಲಿಗರ ಸಂಘ ದುಬೈ ಅಧ್ಯಕ್ಷ ಕಿರಣ್ ಗೌಡ, ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ ನಾಗರಾಜಪ್ಪ, ಉಪಾಧ್ಯಕ್ಷ ದಯಾ ಕಿರೋಡಿಯನ್, ದುಬೈ ಅನಿವಾಸಿ ಕನ್ನಡಿಗರು ಸ್ಥಾಪಕ ಇಮ್ರಾನ್ ಖಾನ್ ಎರ್ಮಾಳ್, ಸಮೀರ್ ಉದ್ಯಾವರ, ಫಿರೋಜ್, ಬಿಸಿಸಿಐ ಯುಎಇ ಪ್ರಧಾನ ಕಾರ್ಯದರ್ಶಿ ಅನ್ವರ್ ಹುಸೈನ್, ಓವರ್ಸೀಸ್ ಮೂವೀಸ್ ನ ದೀಪಕ್ ಸೋಮಶೇಖರ್, ಏಮ್ ಇಂಡಿಯಾ ಫೌಂಡೇಶನ್ ಮುಝಫ್ಫರ್ ಶೇಖ್, ಯೂಸುಫ್ ಶೇಖ್, ಬಾಹರ್ ಅಲ್ ನೂರ್ ನ ಇಸ್ಮಾಯಿಲ್, ಗಲ್ಫ್ ಗೆಳೆಯರು ತಂಡದ ಸಾಗರ್ ಶೆಟ್ಟರ್ ಆಹಾರ ಸಾಮಗ್ರಿಗಳನ್ನು ವ್ಯವಸ್ಥೆ ಮಾಡಿ, ಜನರಿಗೆ ತಲುಪಿಸುವ ಕಾರ್ಯ ನಡೆಸಿದೆ. ಪರಿಸ್ಥಿತಿ ಸಂಪೂರ್ಣವಾಗಿ ಸುಧಾರಿಸುವ ವರೆಗೂ ಈ ನೆರವಿನ ಕಾರ್ಯ ಮುಂದುವರೆಸುವುದಾಗಿ ತಂಡದ ಸದಸ್ಯರು ಹೇಳಿದ್ದಾರೆ.