ರಾಜಸ್ಥಾನ್ ರಾಯಲ್ಸ್ ಟೀಮ್ ನಿಂದ ಕನ್ನಡಿಗರು ಔಟ್: ಇಲ್ಲಿದೆ ನೋಡಿ ತಂಡಗಳ ಲೀಸ್ಟ್

ಕ್ರೀಡೆ

ಐಪಿಎಲ್ 2022ರ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿ ಚಾಂಪಿಯನ್ ಕಿರೀಟ್ ಮಿಸ್ ಮಾಡಿ ಕೊಂಡಿತ್ತು. ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ಮತ್ತಷ್ಟು ಬಲಿಷ್ಠ ತಂಡ ಕಟ್ಟಲು ಸಜ್ಜಾಗಿದೆ. ಡಿಸೆಂಬರ್ 23ರ ಮಿನಿ ಹರಾಜಿನಲ್ಲಿ ಕೆಲ ಪ್ರಮುಖ ಆಟಗಾರರನ್ನು ಖರೀದಿಸಲು ತಯಾರಿ ನಡೆಸಿದೆ. ಇದೀಗ ತಂಡದಲ್ಲಿದ್ದ ಕನ್ನಡಿಗ ಕರುಣ್ ನಾಯರ್ ಸೇರಿದಂತೆ 9 ಕ್ರಿಕೆಟಿಗರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ.

2022ರ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ 9 ವಿದೇಶಿ ಕ್ರಿಕೆಟಿಗರನ್ನು ಖರೀದಿಸಿತ್ತು. ಈ ಪೈಕಿ ಐವರನ್ನು ಬಿಡುಗಡೆ ಮಾಡಿದೆ.  ಜೇಮ್ಸ್ ನೀಶಮ್, ನಥನ್ ಕೌಲ್ಟರ್ ನೈಲ್, ಕಾರ್ಬಿನ್ ಬೊಶ್ ಸೇರಿದಂತೆ ಪ್ರಮುಖ ವಿದೇಶಿ ಕ್ರಿಕೆಟಿಗರು ತಂಡದಿಂದ ಹೊರಬಿದ್ದಿದ್ದಾರೆ. ಆದರೆ ತಂಡದಲ್ಲಿದ್ದ ಮತ್ತಿಬ್ಬರು ಕನ್ನಡಿಗರನ್ನು ರಾಜಸ್ಥಾನ ರಾಯಲ್ಸ್ ಉಳಿಸಿಕೊಂಡಿದೆ. ದೇವದತ್ ಪಡಿಕ್ಕಲ್ ಹಾಗೂ ಕೆಸಿ ಕಾರ್ಯಪ್ಪ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಉಳಿದಿಕೊಂಡಿರುವ ಕನ್ನಡಿಗರಾಗಿದ್ದಾರೆ.

ರಾಜಸ್ಥಾನ ರಾಯಲ್ಸ್ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ
ಅನುನಯ್ ಸಿಂಗ್, ಕೊರ್ಬಿನ್ ಬಾಶ್, ಡರಿಲ್ ಮಿಚೆಲ್, ಜೇಮ್ಸ್ ನೀಶಮ್, ಕರುಣ್ ನಾಯರ್, ನಥನ್ ಕೌಲ್ಟರ್ ನೈಲ್, ರಸಿ ವ್ಯಾಂಡರ್ ಡಸೆನ್, ಶುಭಂ ಗರ್ವಾಲ್, ತೇಜಸ್ ಬರೂಕಾ

ಟ್ರೇಡಿಂಗ್ ಮೂಲಕ ಖರೀದಿಸಿದ ಆಟಗಾರರ ಪಟ್ಟಿ
ರಾಜಸ್ಥಾನ ರಾಯಲ್ಸ್ ಟ್ರೇಡಿಂಗ್ ಮೂಲಕ ಯಾವುದೇ ಆಟಗಾರರನ್ನು ಖರೀದಿಸಿಲ್ಲ

ರಾಜಸ್ಥಾನ ರಾಯಲ್ಸ್ ತಂಡದಲ್ಲಿನ ಬಾಕಿ ಹಣ
13.2 ಕೋಟಿ ರೂಪಾಯಿ

ಬಾಕಿ ಉಳಿದಿರುವ ವಿದೇಶಿ ಆಟಗಾರರ ಕೋಟಾ
4

ತಂಡ ಉಳಿಸಿಕೊಂಡ ಆಟಗಾರರ ಪಟ್ಟಿ
ಸಂಜು ಸ್ಯಾಮ್ಸನ್(ನಾಯಕ), ಯಶಸ್ವಿ ಜೈಸ್ವಾಲ್, ಶಿಮ್ರೋನ್ ಹೆಟ್ಮೆಯರ್, ದೇವದತ್ ಪಡಿಕ್ಕಲ್, ಜೋಸ್ ಬಟ್ಲರ್, ಧುರ್ವ್ ಜುರೆಲ್, ರಿಯಾನ್ ಪರಾಗ್, ಪ್ರಸಿದ್ಧ್ ಕೃಷ್ಣ, ಟ್ರೆಂಟ್ ಬೋಲ್ಟ್, ಒಬೆಡ್ ಮೆಕೊಯ್, ನವದೀಪ್ ಸೈನಿ, ಕುಲ್ದೀಪ್ ಸೇನ್, ಕುಲ್ದೀಪ್ ಯಾದವ್, ಆರ್ ಅಶ್ವಿನ್, ಯಜುವೇಂದ್ರ ಚಹಾಲ್, ಕೆಸಿ ಕಾರ್ಯಪ್ಪ

ರಾಜಸ್ಥಾನ ರಾಯಲ್ಸ್ ತಂಡದ ಪ್ರಮುಖ ಬ್ಯಾಟಿಂಗ್ ಸ್ಟ್ರೆಂಥ್ ನಾಯಕ ಸಂಜು ಸ್ಯಾಮ್ಸನ್ ಹಾಗೂ ಜೋಸ್ ಬಟ್ಲರ್. ಇವರ ಜೊತೆಗೆ ದೇವದತ್ ಪಡಿಕ್ಕಲ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್ ಕಾಣಿಕ ನೀಡಲಿದ್ದಾರೆ. ಆದರೆ ರಾಜಸ್ಥಾನ ರಾಯಲ್ಸ್ ತಂಡದಲ್ಲಿನ ಏಕೈಕ ಸಮಸ್ಯೆ ಸ್ಥಿರ ಪ್ರದರ್ಶನ ನೀಡುವಲ್ಲಿ ವೈಫಲ್ಯ. ಕಳೆದ ಆವೃತ್ತಿಯಲ್ಲಿ ಹಲವು ಸಮಸ್ಯೆಗಳಿಗೆ ಉತ್ತರ ಹುಡುಕಿಕೊಂಡು ಕಣಕ್ಕಿಳಿದಿತ್ತು. ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಮುಗ್ಗರಿಸಿತ್ತು.