ಕಾಂತಾರ ಸಿನಿಮಾದ ಮೂಲಕ ದೇಶ, ವಿದೇಶದಲ್ಲಿ ಸದ್ದು ಮಾಡಿದ್ದ ನಟಿ ಸಪ್ತಮಿ ಗೌಡಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬರ್ತಡೇ ಸಂಭ್ರಮದಲ್ಲಿರುವ ಬ್ಯೂಟಿಗೆ ಅಭಿಮಾನಿಗಳು, ಸ್ನೇಹಿತರು ಹಾಗೂ ಚಿತ್ರರಂಗದವರು ಶುಭಾಶಯಗಳನ್ನು ತಿಳಿಸಿದ್ದಾರೆ. ಅದರಲ್ಲೂ ಸಪ್ತಮಿ ಗೌಡ ಕೈಲಿ ಸಾಲು ಸಾಲು ಚಿತ್ರಗಳಿದ್ದು, ಚಿತ್ರತಂಡದಿಂದಲೂ ಶುಭಾಶಯಗಳ ಹಾರೈಕೆ ಹರಿದು ಬರುತ್ತಿದೆ.
ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ಹೆಚ್ಚು ಖ್ಯಾತಿ ಘಳಿಸಿದ್ದು ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾದ ಮೂಲಕ. ಕಾಂತಾರ ಸಿನಿಮಾದಲ್ಲಿ ತಮ್ಮ ನಟನೆಯ ಮೂಲಕವೇ ಗಮನ ಸೆಳೆದ ನಟಿ ಇದೀಗ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ `ದಿ ವಾಕ್ಸಿನ್ ವಾರ್’ ಚಿತ್ರದಲ್ಲಿ ಕೂಡ ಸಪ್ತಮಿ ಮೇಜರ್ ರೋಲ್ ಪ್ಲೈ ಮಾಡ್ತಿದ್ದಾರೆ. ಈ ಮೂಲಕ ಬಿಟೌನ್ ಅಂಗಳಕ್ಕೂ ನಟಿ ಲಗ್ಗೆ ಇಟ್ಟಿದ್ದಾರೆ. ಈಗಾಗಲೇ ಹಲವು ಹಂತದ ಚಿತ್ರೀಕರಣದಲ್ಲೂ ಅವರು ಭಾಗಿಯಾಗಿದ್ದಾರೆ. ಅದೊಂದು ಮಹತ್ವದ ಪಾತ್ರವೆಂದು ಹೇಳಿಕೊಂಡಿದ್ದಾರೆ.
ಯುವ ಸಿನಿಮಾಗೂ ಸಪ್ತಮಿ ಗೌಡ ನಾಯಕಿ. ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದೇ ಒಂದು ರೋಚಕ. ಶನಿವಾರ (ಫೆ.4)ರಂದು ಸಂಜೆ ಕೆಸಿಸಿ ಕಾರ್ಯಕ್ರಮಕ್ಕೆ ತನ್ನ ತಾಯಿಯೊಂದಿಗೆ ನಟಿ ಸಪ್ತಮಿ ತೆರಳುತ್ತಿದ್ದರು. ಈ ವೇಳೆ ಹೊಂಬಾಳೆ ಸಂಸ್ಥೆ ಟೀಂ ಕಡೆಯಿಂದ ನಟಿಗೆ ಕಾಲ್ ಬಂದಿದೆ. ಆಫೀಸ್ಗೆ ಬನ್ನಿ ಎಂದಷ್ಟೇ ಹೇಳಲಾಗಿದೆ. ಬಳಿದ ಚಿತ್ರತಂಡಕ್ಕೆ ಸಪ್ತಮಿ ಭೇಟಿ ನೀಡಿದ್ದಾರೆ. ಬಳಿಕ ಯುವ ರಾಜ್ಕುಮಾರ್ ಅವರ ಪಕ್ಕ ನಿಲ್ಲಿಸಿ ಫೋಟೋ ಕ್ಲಿಕ್ಕಿಸಲಾಗಿದೆ. ನಂತರ `ಯುವ’ ಚಿತ್ರಕ್ಕೆ ನೀವೇ ಹೀರೋಯಿನ್ ಎಂದು ಸರ್ಪ್ರೈಸ್ ನೀಡಿದ್ದಾರೆ.