ಬಾಗಲಕೋಟೆ: ಉತ್ತರ ಕರ್ನಾಟಕದ ಜನಪ್ರಿಯ ಹಬ್ಬಗಳಲ್ಲಿ ಒಂದಾಗಿರುವ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಸೊಗಡಿನ ಮನಂಜನಾ ಹಬ್ಬವಾಗಿರುವ ಕಾರ ಹುಣ್ಣಿಮೆಯನ್ನು ರವಿವಾರ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯಲ್ಲಿ ರೈತರು ಮತ್ತು ಸಾರ್ವಜನಿಕರು ಸಂಭ್ರಮದಿಂದ ಆಚರಿಸಿದರು.
ಹಬ್ಬದ ಅಂಗವಾಗಿ ರಬಕವಿ ಸಣಕಲ್ ಮುಖ್ಯ ರಸ್ತೆಯಲ್ಲಿ ನಾಯಕರು ಮತ್ತು ಪಾಟೀಲ ಗೌಡರ ಮನೆವರೆಗೆ ಎತ್ತುಗಳ ಕರಿ ಹರಿಯುವ ಮೂಲಕ ಕಡು ಬೇಸಿಗೆ ಕಳೆದು ಮುಂಗಾರು ಸ್ವಾಗತಿಸಲು ಈ ಹಬ್ಬ ಸಾಕ್ಷಿಯಾಯಿತು. ರೈತರು ತಮ್ಮ ಎತ್ತು ಹಾಗು ಹೋರಿಗಳ ಮೈ ತೊಳೆದು, ಬಣ್ಣ ಹಚ್ಚಿ ಶೃಂಗರಿಸಿ ಸಂಜೆ ಹಮ್ಮಿಕೊಂಡ ಕರಿ ಹರಿಯುವ ದೃಶ್ಯ ರೋಮಾಂಚನಗೊಳಿಸಿತು.
ವರ್ಷವಿಡೀ ದುಡಿಯುವ ಎತ್ತುಗಳಿಗೆ ಮನರಂಜನಾ ಕೂಟವಾಗಿರುವ ಕಾರ ಹುಣ್ಣಿಮೆ ನಿಮಿತ್ತ ವಿಶೆಷ ಅಲಂಕಾರದೊಂದಿಗೆ ಸಾವಿರಾರು ರೈತರು ಹಾಗು ಯುವಕರು ಸಾಕ್ಷಿಯಾದರು.ಶೃಂಗರಿಸಿ ಕರೆತಂದಿದ್ದ ತಮ್ಮ ಎತ್ತುಗಳನ್ನು ಸಾಲು ಸಾಲಾಗಿ ಓಡಿಸುತ್ತ ಸಂಭ್ರಮಪಟ್ಟ ರೈತರು ನಂತರ ಮನೆಗೆ ಬಂದಾಗ ಅವುಗಳಿಗೆ ಆರತಿ ಎತ್ತಿ ಖುಷಿ ಪಟ್ಟರು. ಇದಕ್ಕೂ ಮೊದಲು ನಾಯಕರು ಮತ್ತು ಗೌಡರ ನಿವಾಸದಲ್ಲಿ ಅವುಗಳಿಗೆ ಮಹಿಳೆಯರು ಆರತಿ ಎತ್ತಿ ಖುಷಿಪಟ್ಟರು.
ನಾಯಕರ ಎತ್ತು ಮತ್ತು ಪಾಟೀಲ ಗೌಡರದ್ದು ಎತ್ತುಗಳು ಸ್ಪರ್ಧೆಯಲ್ಲಿದ್ದವು.ಇದೇ ಸಂದರ್ಭದಲ್ಲಿ ಮಾರುತಿ ನಾಯಕ. ದರೆಪ್ಪ ಉಳ್ಳಾಗಡ್ಡಿ. ಶ್ರೀಶೈಲ ದಲಾಲ. ಸಂಜಯ ತೇಗ್ಗಿ. ಪ್ರಭು ಪೂಜಾರಿ. ಪ್ರಭು ಉಮದಿ. ಡಾ ಸಂಗಮೇಶ ಹತಪಕಿ. ಶಂಕರ ಪಾಟೀಲ. ಹನುಮಂತ ಪುಜರಿ. ಮಾಹಾದೇವ ತಳವಾರ. ಬಾಬು ಮಹಾಜನ. ಲಕ್ಕಪ್ಪ ಪಾಟೀಲ. ಎಮ್ ಎಸ್ ಬದಾಮಿ. ಬಿಮಶಿ ಪಾಟೀಲ. ಸದಾಶಿವ ನಾಯಕ. ಸೇರಿದಂತೆ ರೈತರು ಮತ್ತು ನಾಯಕ. ಗೌಡರ ಸಮಸ್ತ ದೈವ ಮಂಡಳದ ಹಿರಿಯರು ಸುತ್ತ ಮುತ್ತಲಿನ ಗ್ರಾಮದ ಹಿರಿಯರು ಇದ್ದರು.
ಪ್ರಕಾಶ ಕುಂಬಾರ