ಪಾಕಿಸ್ತಾನದ ಕರಾಚಿಯ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮತ್ತೊಂದು ಶಂಕಿತ ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ.
ಜಿದ್ದಾದಿಂದ ಬಂದ PIA ವಿಮಾನವೊಂದರಲ್ಲಿ ಆಗಮಿಸಿದ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್ ಕಾಯಿಲೆಯ ಲಕ್ಷಣಗಳು ಪತ್ತೆಯಾಗಿರುವುದಾಗಿ ಅಧಿಕಾರಿಗಳು ಹೇಳಿರುವುದಾಗಿ ತಿಳಿಸಿದ್ದಾರೆ.
ಮಂಕಿಪಾಕ್ಸ್ ಕಾಯಿಲೆ ಇರುವ ಲಕ್ಷಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಹೆಚ್ಚುವರಿ ಪರೀಕ್ಷೆ ಮತ್ತು ಆರೈಕೆಗಾಗಿ ಸಿಂಧ್ ನ ಸರ್ಕಾರಿ ಆಸ್ಪತ್ರೆಯೊಂದರ ಪ್ರತ್ಯೇಕ ವಾರ್ಡ್ಗೆ ಕರೆದೊಯ್ಯಲಾಯಿತು. ಈ ವಾರದ ಆರಂಭದಲ್ಲಿ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಮಂಕಿ ಪಾಕ್ಸ್ ನ ಐದನೇ ಪ್ರಕರಣ ವರದಿಯಾಗಿತ್ತು
33 ವರ್ಷದ ಸಂತ್ರಸ್ತ ಖೈಬರ್ ಪಖ್ತುಂಖ್ವಾದ ಪೇಶಾವರ ನಿವಾಸಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಈತ ಸೆಪ್ಟೆಂಬರ್ 7 ರಂದು ಸೌದಿ ಅರೇಬಿಯಾದಿಂದ ಪಾಕಿಸ್ತಾನಕ್ಕೆ ಹಿಂದಿರುಗಿದ ನಂತರ ಆತನಿಗೆ ಮಂಕಿಪಾಕ್ಸ್ ಇರುವುದಾಗಿ ಖೈಬರ್ ಆಸ್ಪತ್ರೆ ದೃಢಪಡಿಸಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.