ಬೆಂಗಳೂರು: ರಾಜ್ಯ ಬಿಜೆಪಿ ಉಳಿಸಿಕೊಂಡಿದ್ದ 5 ಕ್ಷೇತ್ರಗಳಲ್ಲಿ 4ನ್ನು ಕ್ಲಿಯರ್ ಮಾಡಿ ಚಿತ್ರದುರ್ಗ ಪೆಂಡಿಂಗ್ ಇಟ್ಟಿದೆ, ಟೆಕೆಟ್ ಸಿಕ್ಕವರು ಖುಷಿಯಾಗಿದ್ರೆ ಟಿಕಟ್ ಕೈತಪ್ಪಿದವರು ಬೇಸರಗೊಂಡಿದ್ದಾರೆ. ಮಾಜಿ ಸಿಎಂ ಶೆಟ್ಟರ್, ಮಾಜಿ ಸಚಿವ ಸುಧಾಕರ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ರೆ ವಿಶ್ವನಾಥ್ ಗೆ ನಿರಾಸೆಯಾಗಿದೆ. ಕರಡಿ ಸಂಗಣ್ಣ ಬಂಡಾಯ ಬಿಜೆಪಿ ಕಛೇರಿ ತಲುಪಿದ್ರೆ, ಅಸಮಾಧಾನಿತರನ್ನು ಮನವೊಲಿಸಲು ಯಡಿಯೂರಪ್ಪ ಫೀಲ್ಡಿಗಿಳಿದಿದ್ದಾರೆ. ಈ ಮಧ್ಯೆ 13 ವರ್ಷಗಳ ಬಳಿಕ ಬಳ್ಳಾರಿ ಗಣಿಧಣಿ ತವರು ಮನೆಗೆ ವಾಪಸ್ಸಾಗಿದ್ದಾರೆ..……
ರಾಜ್ಯ ಬಿಜೆಪಿ ತನ್ನ ಪಾಲಿನ 25 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳ ಟಿಕೆಟ್ ಘೋಷಿಸಿ 5 ಕ್ಷೇತ್ರಗಳನ್ನು ಉಳಿಸಿಕೊಂಡಿತ್ತು. ಈ ಪೈಕಿ 4 ಕ್ಷೇತ್ರ ಕ್ಲಿಯರ್ ಆಗಿದ್ದು ಚಿತ್ರದುರ್ಗ ಪೆಂಡಿಂಗ್ ಇದೆ. ಬೆಳಗಾವಿ ಟಿಕೆಟ್ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಸಿಕ್ಕಿದ್ರೆ, ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆಗೆ ಕೋಕ್ ಕೊಟ್ಟು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮಣೆ ಹಾಕಲಾಗಿದೆ. ಮಾಜಿ ಸಚಿವ ಡಾ. ಸುಧಾಕರ್ ಚಿಕ್ಕಬಳ್ಳಾಪುರ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದು ಶಾಸಕ ವಿಶ್ವನಾಥ್ ಗೆ ನಿರಾಸೆಯಾಗಿದೆ…..
ಬಿಜೆಪಿಯ ಬಂಡಾಯದ ಬೇಗಿದಿ ದಿನದಿಂದ ದಿನಕ್ಕೆ ತಾರಕಕ್ಕೇರ್ತಿದೆ, ಕೊಪ್ಪಳದಲ್ಲಿ ಆಕ್ರೋಶ ಹೊರಹಾಕ್ತಿದ್ದ ಸಂಸದ ಕರಡಿ ಸಂಗಣ್ಣ ಬೆಂಗಳೂರಿಗೆ ಬಂದಿದ್ದು ಮಾಜಿ ಸಿಎಂಗಳಾದ ಹೆಚ್.ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾಗಿ ಅಸಮಾಧಾನ ತೋಡಿಕೊಂಡ್ರು. ಇದಾದ್ಮೇಲೆ ಸಂಗಣ್ಣ ಅವರನ್ನ ಬಿಜೆಪಿ ಕಛೇರಿಗೆ ಕರೆಸಿಕೊಂಡ ಕಮಲ ನಾಯಕರು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಸಂದಾನಸಭೆ ನಡೆಸಿ ಮನವೊಲಿಸುವ ಕೆಲಸ ಮಾಡಿದ್ರು…..
ತುಮಕೂರಲ್ಲಿ ಮಾಧುಸ್ವಾಮಿ ಬಂಡಾಯ ದಿನದಿಂದ ದಿನಕ್ಕೆ ಹೆಚ್ಚಾಗ್ತಿದ್ದು, ದಾವಣಗೆರೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಸಿದ್ದೇಶ್ವರ್ ಕುಟುಂಬದ ಮೇಲೆ ತಿರುಗಿಬಿದ್ದಿದ್ದಾರೆ. ಟಿಕೆಟ್ ಕೈತಪ್ಪಿರೋ ಶಾಸಕ ವಿಶ್ವನಾಥ್ ಅಸಮಾಧಾನದ ಬಾವುಟ ಹಾರಿಸ್ತಿದ್ದು. ಶಿವಮೊಮೊಗ್ಗ, ಹಾವೇರಿಯಲ್ಲಿ ಮಾಜಿ ಸಚಿವ ಈಶ್ವರಪ್ಪ ಅಸಮಾಧಾನ ಇನ್ನು ಶಮನವಾಗಿಲ್ಲ. ಇವರೆಲ್ಲರನ್ನು ಮನವೊಲಿಸಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ನಾಳೆಯಿಂದ ಮಾಜಿ ಸಿಎಂ ಯಡಿಯೂರಪ್ಪ ಅಖಾಡಕ್ಕಿಳಿಯುತ್ತಿದ್ದಾರೆ….
ಈ ಮಧ್ಯೆ KRPP ಸಂಸ್ಥಾಪಕ ಗಣಿಧಣಿ ಗಾಲಿ ಜನಾರ್ಧನರೆಡ್ಡಿ ಮರಳಿ ಗೂಡಿಗೆ ಬಂದಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ, ಸ್ನೇಹಿತ ಶ್ರೀರಾಮುಲು ನೇತೃತ್ವದಲ್ಲಿ KRPP ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನ ಮಾಡಿ ಕಮಲ ಹಿಡಿದ್ರು. ಈ ವೇಳೆ ಮಾತನಾಡಿದ ರೆಡ್ಡಿ ಜೆಪಿ ನಡ್ಡಾ ಹಾಗೂ ಅಮಿತ್ ಶಾ ಅವರು ನನ್ನನ್ನು ದೆಹಲಿಗೆ ಕರೆದು ಮಾತಾಡಿದ್ರು
ನಿಮ್ಮ ಸೇವೆ ಪಕ್ಷಕ್ಕೆ ಅಗತ್ಯ ಇದೆ ಅಂದ್ರು ಹಾಗಾಗಿ ಪಕ್ಷಕ್ಕೆ ಬಂದಿದ್ದೇನೆ. ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕೆಲಸ ಮಾಡಲು ಇಚ್ಛಿಸುತ್ತೇನೆ, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಕಟ್ಟುತ್ತೇನೆ ನಾನು ಯಾವುದೇ ಶರತ್ತು ಹಾಕಿ ಬಂದಿಲ್ಲ. ನನ್ನ ರಕ್ತದ ಕಣ ಕಣದಲ್ಲೂ ಬಿಜೆಪಿ ಇದೆ ಎಂದ್ರು ರೆಡ್ಡಿ….
ಇದೇ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ವಿಜಯೇಂದ್ರ ಜನಾರ್ಧನರೆಡ್ಡಿ ಬಿಜೆಪಿ ಸೇರಿರೋದು
ಬಹಳ ಸಂತೋಷದ ಸಂಗತಿ. ಇವರು ಬಿಜೆಪಿ ಪಕ್ಷಕ್ಕೆ ಬಂದಿರೋದು ನಮಗೆ ಮತ್ತಷ್ಟು ಶಕ್ತಿ ತುಂಬಿದೆ
ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪಕ್ಷ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಬಿಜೆಪಿ ಜೊತೆಗೆ KRPP ಪಕ್ಷವನ್ನಯ ವಿಲೀನ ಮಾಡಿದ್ದಾರೆ ಇವತ್ತು ರಾಜ್ಯದಲ್ಲಿ ನರೇಂದ್ರ ಮೋದಿ ಪರ ಅಲೆಯಿದೆ ಈ ಚುನಾವಣೆ ದೇಶದ ಭವಿಷ್ಯ ಬದಲಿಸಲಿದೆ ನಮ್ಮ ರಾಜ್ಯದಿಂದ ಅತೀ ಹೆಚ್ಚು ಸೀಟ್ ಗೆಲುತ್ತೇವೆ ಎಂದ್ರು ವಿಜಯೇಂದ್ರ.
ಒಟ್ನಲ್ಲಿ ಬಿಜೆಪಿ 24 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿ 1 ಕ್ಷೇತ್ರ ಮಾತ್ರ ಪೆಂಡಿಂಗ್ ಇಟ್ಟಿದೆ. ಈ ಮಧ್ಯೆ ಅಸಮಾಧಾನಿತರನ್ನು ಕೂಲ್ ಮಾಡಲು ಮಾಜಿ ಸಿಎಂ ಯಡಿಯೂರಪ್ಪ ಫೀಲ್ಡಿಗಿಳಿದಿದ್ದು ಪ್ರಚಾರದ ಜೊತೆ ಗೆಲುವಿನ ರಣತಂತ್ರ ಹೆಣೆಯುತ್ತಿದ್ದಾರೆ. ಗಾಲಿ ಜನಾರ್ಧನರೆಡ್ಡಿ ಮರಳಿ ಗೂಡು ಸೇರಿರೋದು ಬಿಜೆಪಿಗೆ ಹೊಸ ಹುರುಪು ಬಂದಿದ್ದು ರಾಜ್ಯಾಧ್ಯಕ್ಷ ವಿಜಯೇಂದ್ರ ಗೆಲುವಿನ ಹುರುಪಿನಲ್ಲಿ ಮುನ್ನುಗ್ತಿದ್ದಾರೆ…..