ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಐತಿಹಾಸಿಕ ಕರಗ (Bengaluru Karaga) ಶಕ್ತ್ಯೋತ್ಸವ ಅದ್ದೂರಿಯಾಗಿ ನೇರವೇರಿದೆ.
ಚೈತ್ರ ಪೌರ್ಣಿಮೆಯ ಬೆಳದಿಂಗಳಿನಲ್ಲಿ ಮಲ್ಲಿಗೆಯ ಕಂಪಿನೊಂದಿಗೆ ಕರಗ ಶಕ್ತ್ಯೋತ್ಸವ ಆರಂಭವಾಯ್ತು. ನಗರದ ಅನೇಕ ಕಡೆ ಕರಗ ಮೆರವಣಿಗೆ ಸಾಗಿದೆ. ಮಧ್ಯರಾತ್ರಿ 2 ಗಂಟೆ 24 ನಿಮಿಷಕ್ಕೆ ಆರಂಭವಾದ ಕರಗ ಮೆರವಣಿಗೆ, ದೇವಾಲಯದ ಹೊರಭಾಗದ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಯಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವಿರೇಂದ್ರ ಹೆಗಡೆ (Dr. D Veerendra Heggade) ಯವರು ಧಾರ್ಮಿಕ ವಿಧಿ-ವಿಧಾನಗಳಲ್ಲಿ ಭಾಗವಹಿಸಿದ್ರು. ಆ ಬಳಿಕ ಆರಂಭವಾದ ಕರಗ ಮೆರವಣಿಗೆ, ನಗರದ ಕೆಲ ಭಾಗಗಳ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ನಗರದ ಅನೇಕ ಕಡೆ ಸಾಗುವ ಮೂಲಕ ಲಕ್ಷಾಂತರ ಜನರಿಗೆ ದರ್ಶನ ನೀಡಿದೆ. ಪ್ರತಿವರ್ಷದಂತೆ ಈ ವರ್ಷವು ಮಸ್ತಾನ್ ದರ್ಗಾಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಾಯಿತು.
ಬಳಿಕ ಇನ್ನೂ ಹಲವು ಕಡೆ ಕರಗ ಮೆರವಣಿಗೆ ಮುಂದುವರಿದಿದ್ದು, ಸುಮಾರು ಬೆಳಗ್ಗೆ 9 ಗಂಟೆ ವೇಳೆಗೆ ಮತ್ತೆ ಹಿಂದಿರುಗಿ ಮೂಲ ಸ್ಥಾನ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ದೇವಾಲಯಕ್ಕೆ ತಲುಪಲಿದೆ. ಗುರುವಾರ ರಾತ್ರಿ ಲಕ್ಷಾಂತರ ಮಂದಿ ಭಕ್ತರು ಕರಗವನ್ನು ಕಣ್ತುಂಬಿಕೊಂಡಿದ್ದಾರೆ.