ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಮ್ಮನಾಗುವ ಖುಷಿಯಲ್ಲಿದ್ದಾರೆ. ಈ ವಿಚಾರವನ್ನು ಸ್ವತಃ ನಟ ರಣವೀರ್ ಸಿಂಗ್ ರಿವೀಲ್ ಮಾಡಿದ್ದು ಮುದ್ದು ಮಗುವಿನ ಆಗಮನಕ್ಕಾಗಿ ದಂಪತಿ ಎದುರು ನೋಡ್ತಿದ್ದಾರೆ. ಸದ್ಯಕ್ಕೆ ದೀಪಿಕಾ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ದೀಪಿಕಾ ಪ್ರಗ್ನೆಂಟ್ ಆಗಿರುವುದರಿಂದ ಕರಣ್ ಜೋಹರ್ ಅವರ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ಒಂದು ಹೋಲ್ಡ್ನಲ್ಲಿ ಇರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ಹಾಗೂ ದೀಪಿಕಾ ಪಡುಕೋಣೆ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇಬ್ಬರೂ ಆಗಾಗ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ. ಕರಣ್ ದೀಪಿಕಾಗಾಗಿ ಬಿಗ್ ಬಜೆಟ್ ನ ಸಿನಿಮಾವೊಂದನ್ನು ಮಾಡುವ ಉದ್ದೇಶದಿಂದ ಕಥೆ ತಯಾರಿಸಿದ್ದರಂತೆ.
ಕರಣ್ ಜೊತೆ ದೀಪಿಕಾ ಈ ಸಿನಿಮಾ ವಿಚಾರವಾಗಿ ಮಾತುಕತೆ ನಡೆಸಿದ್ದರು. ಸಿನಿಮಾ ಮಾಡಲು ದೀಪಿಕಾ ಗ್ರೀನ್ ಸಿಗ್ನಲ್ ನೀಡಿದ್ದರು. ಆದರೆ, ಈ ಮಧ್ಯೆ ಮಗು ಹೊಂದುವ ನಿರ್ಧಾರಕ್ಕೆ ಬಂದಿದ್ದಾರೆ. ದೀಪಿಕಾ ಮತ್ತೆ ಚಿತ್ರಗಳಲ್ಲಿ ನಟಿಸಲು ಕನಿಷ್ಠ 2 ವರ್ಷವಾದರೂ ಬೇಕು. ಈ ಹಿನ್ನೆಲೆಯಲ್ಲಿ ಬೇರೆಯವರನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುವಂತೆ ದೀಪಿಕಾ ಅವರು ಕರಣ್ಗೆ ಸೂಚಿಸಿದ್ದಾರೆ. ಆದರೆ ಇದಕ್ಕೆ ಕರಣ್ ಜೋಹರ್ ಒಪ್ಪಿಲ್ಲ. ದೀಪಿಕಾಗಾಗಿ ಕಾಯಲು ನಿರ್ಧರಿಸಿರುವ ಕರಣ್ ಮುಂದೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ.